ಕಳಪೆ ಕಾಮಗಾರಿಗೆ ಶೀಘ್ರ ಪರಿಹಾರ ನೀಡುವಂತೆ ಒತ್ತಾಯಿಸಿ ರೈತಸಂಘದಿಂದ ಕೆ.ಬಿ.ಜೆ.ಎನ್.ಎಲ್ ಎಸ್.ಇ ಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸೋಮನಾಳ ಗ್ರಾಮದ ರೈತ ಮಂಜುನಾಥ ತಳವಾರ ಸರ್ವೇ ನಂಬರ ೧೬೩/೩ ರ ಜಮೀನಿನಲ್ಲಿ ಮುಳವಾಡ ಏತನೀರಾವರಿ ಯೋಜನೆಯಡಿ ವಡವಡಗಿ ಕೆರೆ ನೀರು ತುಂಬುವ ಕಾಮಗಾರಿಗೆ ಸಂಬಂಧಿಸಿದಂತೆ ಈ ರೈತರಿಗೆ ಭೂ ಪರಿಹಾರ ಹಾಗೂ ಇಲ್ಲಿಯವರೆಗೆ ಆಗಿರುವ ನಷ್ಟ ಒದಗಿಸುವುದು ಹಾಗೂ ಈ ನಷ್ಟಕ್ಕೆ ಕಾರಣರಾದ ಇಲಾಖೆ ಅಧಿಕಾರಿಗಳನ್ನ ವಜಾ ಗೊಳಿಸುವುದು ಮತ್ತು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆ.ಬಿ.ಜೆ.ಎನ್.ಎಲ್‌ನ ಮುಖ್ಯ ಅಭಿಯಂತರ ಡ. ಬಸವರಾಜ ಹಾಗೂ ಡಿ.ಸಿ ಆಯ್.ಎಲ್.ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ತಮ್ಮ ಇಲಾಖೆಯ ವತಿಯಿಂದ ಮಾಡಿರುವ ಮುಳವಾಡ ಏತನೀರಾವರಿ ಯೋಜನೆಯಡಿ ವಡವಡಗಿ ಕೆರೆ ನೀರು ತುಂಬುವ ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿಯೂ ಸಂಪೂರ್ಣ ಮಾಡದೇಗುತ್ತಿಗೆದಾರರು ಬಿಲ್ ಸಂದಾಯ ಮಾಡಿಕೊಂಡಿರುತ್ತಾರೆ, ಇದಕ್ಕೆ ಇಲಾಖೆಯ ಅಧಿಕಾರಿಗಳು ಶಾಮಿಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ನಷ್ಟಗೊಂಡ ರೈತರಿಗೆ ಇಲ್ಲಿಯವರೆಗೆ ಯಾವುದೇ ಭೂ ಪರಿಹಾರ ನೀಡಿರುವುದಿಲ್ಲ, ೧೯೭೨ ರಿಂದ ಜಮೀನಿನಲ್ಲಿ ವಿದ್ಯುತ್ ಸಂಪರ್ಕವಿದ್ದು ಒಟ್ಟಾರೆ ೬೩೮ ದಾಳಿಂಬೆ ಇದ್ದು ಒಂದು ಬಾವಿ, ಒಂದು ಬೊರವೆಲ್‌ಇದ್ದು ೫೦ ವರ್ಷಗಳಿಂದ ತೋಟ ಮಾಡುತ್ತಿದ್ದರು ಇದನ್ನು ಗಣನೆಗೆ ತೆಗೆದುಕೊಳ್ಳದೇ ಅವುಗಳನ್ನು ಪ್ರಭಾವಿಗಳನ್ನು ಕೈವಾಡದಿಂದ ರೈತರಿಗೆ ನಷ್ಟ ಉಂಟಾಗುವಂತೆ ಅಧಿಕಾರಿಗಳು ಮಾಡಿದ್ದಾರೆ
ಕೂಡಲೇಕಾಮಗಾರಿಗೆ ಸಂಬಂಧಿಸಿದಂತೆ ಕಳಪೆ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಎಲ್ಲವೂ ಸರಿ ಇದೆ ಎಂದು ಕಾಮಗಾರಿಯ ಬಿಲ್ ಮಾಡಿರುವ ಇಲಾಖೆ ಅಧಿಕಾರಿಗಳನ್ನ ವಜಾ ಗೊಳಿಸಬೇಕು ಇಲ್ಲವಾದಲ್ಲಿ ಒಂದು ವಾರದ ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಲಿಮಟ್ಟಿಯ ಕೆ.ಬಿ.ಜೆ.ಎನ್.ಎಲ್ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕಲಾಗುವುದು ಎಂದು ಈ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಮನಗೌಡ ಪಾಟೀಲ , ನಿಡಗುಂದಿ ತಾಲೂಕಾ ಅಧ್ಯಕ್ಷರಾದ ಡಾ.ಕೆ. ಎಂ ಗುಡ್ನಾಳ, ಮುಖಂಡರಾದ ತಿಪ್ಪಣ್ಣ ನಾಟಿಕಾರ, ಮೋತಿಲಾಲ ಉಣ್ಣಿಬಾಯಿ, ದಾನಪ್ಪ ಗದ್ಯಾಳ, ಮಂಜುನಾಥ ನಾಟಿಕಾರ, ಬುಡ್ಡೆಸಾಬ ಡವಳಗಿ, ಮೋದಿನಸಾಬ ಭಾಗವಾನ, ಕಲ್ಲಪ್ಪ ಅಫಜಲಪುರ ಸೇರಿದಂತೆ ಇತರರು ಇದ್ದರು.