ಉದಯರಶ್ಮಿ ದಿನಪತ್ರಿಕೆ
ರೇವತಗಾಂವ: ಉಮರಜ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಚಡಚಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯ ಸಾಧಿಸುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಥ್ರೋಬಾಲ್ ಪ್ರಥಮ, ಸಂಗಮೇಶ ಅಡಕೆ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ, ಸಮರ್ಥ ಕುರಗಟಗಿ ೨೦೦ ಮೀ ಓಟದಲ್ಲಿ ಪ್ರಥಮ, ಸಂತೋಷ ಮೇತ್ರೆ ನಡಿಗೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಪ್ರಥಮ, ಕಾವೇರಿ ಹಾವಿನಾಳ ೨೦೦ ಮೀ ಓಟದಲ್ಲಿ ಪ್ರಥಮ, ೪೦೦ ಮೀ ರೀಲೆಯಲ್ಲಿ ದ್ವಿತೀಯ, ೩೦೦೦ ಓಟದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ, ಶ್ರೇಯಾ ಸಾಲೋಟಗಿ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಅಡೆತಟೆ ಓಟದಲ್ಲಿ ದ್ವಿತೀಯ, ತೇಜಶ್ವಿನಿ ಮಾಳಿ ಗುಂಡು ಎಸೆತದಲ್ಲಿ ದ್ವಿತೀಯ, ವಿದ್ಯಾಶ್ರೀ ಹಕ್ಕೆ ಬಲ್ಲೆ ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯ ಗುರುಗಳು, ಸಹ ಶಿಕ್ಷಕ ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರುಗಳು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.