ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಯಾವ ವಿಜ್ಞಾನಯುಗ, ಗ್ಲೋಬಲ್‌ಯುಗ, ಕಂಪೂಟರ್, ಮೊಬೈಲ್‌ಯುಗ ಬಂದರೂ ಮನಸನ್ನು ಆದ್ಯಾತ್ಮ ಜ್ಞಾನದೆಡೆಗೆ ಪಸರಿಸಿದರೆ ಜೀವನದಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ನಿಡಸೋಸಿ ದುರದುಂಡೇಶ್ವರ ಮಠದ ಶ್ರೀ ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಉತ್ತರಕರ್ನಾಟಕದ ಸುಪ್ರಸಿದ್ಧ ಜಂಗಮಕ್ಷೇತ್ರ ಚಿಮ್ಮಡದ ಶ್ರೀಪ್ರಭುಲಿಂಗೇಶ್ವರ ಕಿಚಡಿ ಜಾತ್ರೆಯಂಗವಾಗಿ ಹಮ್ಮಿಕೊಂಡಿದ್ದ ವಚನ ಚಿಂತನ ಗೋಷ್ಠಿಯ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು ಇಂದು ಐ.ಎ.ಎಸ್, ಐ.ಪಿ.ಎಸ್, ಐಟಿಬಿಟಿ ಸೇರಿದಂತೆ ಉನ್ನತ ಹುದ್ದೆಗಳಲ್ಲಿರುವ ಬಹುತೇಕ ಅಧಿಕಾರಿಗಳು ಮಾನಸಿಕ ನೆಮ್ಮದಿ ಇಲ್ಲದೇ ಬಳಲುತಿದ್ದು ಇಂಥಹ ಜಾತರೆಗಳಲ್ಲಿ ಬಂದು ಪ್ರಸಾದ ಸೇವಿಸಿ ತಮ್ಮ ಮನಸನ್ನು ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ ಎಂದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ ಜಗತ್ತಿನಲ್ಲಿ ಯಾರೂ ಶಾಶ್ವತ ಅಲ್ಲ, ನಮ್ಮ ನಡೆ ನುಡಿಗಳನ್ನು ಕಾಯ್ದುಕೊಂಡು ಜೀವನದಲ್ಲಿ ಯಾರಿಗೂ ತೊಂದರೆಯಾಗದಂತೆ ಬದುಕಿ ಸಾರ್ಥಕತೆಯಿಂದ ಜನಮಾಸರಾಗಬೇಕು ಎಂದರು.
ಸಿಂದಗಿ ಸಾರಂಗ ಮಠದ ಶ್ರೀ ಪ್ರಭು ಸಾರಂಗ ಶಿವಾಚಾರ್ಯರು ಮಾತನಾಡಿ ಇಂದಿನ ಆಧುನಿಕ ಕಂಪ್ಯೂಟರ್ ಯುಗದಲ್ಲಿ ಇಂತಹ ಜಾತ್ರೆ, ಉತ್ಸವಗಳಲ್ಲಿ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ. ಕಿಚಡಿ ಪ್ರಸಾದ ಸೇವಿಸುವುದರಿಂದ ಪ್ರತಿಯೊಬ್ಬರ ಮನಸ್ಸಿನಲ್ಲಿ ವಿಶಾಲಭಾವ ಮೂಡುತ್ತದೆ, ಸದ್ಭಾವನೆಯಿಂದ, ಭಕ್ತಿ, ವಿಶ್ವಾಸದಿಂದ ಕಿಚಡಿಯನ್ನು ಪ್ರಸಾದವೆಂದು ಸ್ವೀಕರಿಸಿದರೆ ಅದರಿಂದ ಅದ್ಭುತ ಫಲ ಪ್ರಾಪ್ತವಾಗುವುದೆಂದು, ಪಾದೋದಕ, ಪ್ರಸಾದದಲ್ಲಿ ಅದ್ಭುತ ಶಕ್ತಿಯಿದೆ ಅದನ್ನು ಕೆಡಿಸಬಾರದು ಎಂದರು.
ಹಾಲವಿ ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು, ಚಿಕ್ಕೋಡಿ ಸಂಪಾದನ ಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಕೊಣ್ಣೂರ ಮಠದ ಡಾ. ವಿಶ್ವಪ್ರಭು ಶೀವಾಚಾರ್ಯರು, ಬೆಳಗಲಿ ಸಿಧ್ಧಾರೂಢ ಮಠದ ಸಿದ್ದರಾಮ ಶ್ರೀ ಮಾತನಾಡಿದರು.
ಚಿಮ್ಮಡ ವಿರಕ್ತಮಠದ ಶ್ರೀಪ್ರಭು ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಬಕವಿ ಬ್ರಹ್ಮಾನಂದ ಆಶೃಮದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಬೆಂಡವಾಡ ರೇವಣಸಿದ್ದೇಶ್ವರ ಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ರಘುನಾಥಪ್ರಿಯ ಸಾಧುಮಹಾರಾಜರ ಮಠದ ಶ್ರೀಜನಾರ್ಧನ ಮಹಾರಾಜರು, ತೇರದಾಳ ಶಾಸಕ ಸಿದ್ದು ಸವದಿ, ಶ್ರೀಮತಿ ಕವಿತಾ ಕೊಣ್ಣೂರ, ಡಾ. ಎ.ಆರ್. ಬೆಳಗಲಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ನಂದೆಪ್ಪ ದಡ್ಡಿಮನಿ, ಬಾಬಾಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಹಲವಾರು ಜನ ಸಾಧಕರನ್ನು ಹಾಗೂ ಜಾತ್ರಾ ಮಹೋತ್ಸವಕ್ಕೆ ವಿಶೇಷ ಸಹಕಾರ ನೀಡಿದ ಹಲವು ಪ್ರಮುಖರನ್ನು ಸತ್ಕರಿಸಿ ಗೌರವಿಸಲಾಯಿತು.
ಶಿಕ್ಷಕ ಪ್ರಕಾಶ ಬಡಿಗೇರ ಸ್ವಾಗತಿಸಿದರು. ಪ್ರಕಾಶ ಪೂಜಾರಿ ನಿರೂಪಿಸಿದರು, ಮಲ್ಲಯ್ಯ ಮಠಪತಿ ವಂದಿಸಿದರು.