ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚಿಗೆ ಸುರಿದ ಮಳೆಯಿಂದಡೋಣಿ ನದಿ ಪ್ರವಾಹದಿಂದ
ಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸಲು ಬಬಲೇಶ್ವರ ತಾಲೂಕಿನ ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ಪ್ರಕಟಿತ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಬಬಲೇಶ್ವರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ಪೂಜಾರಿ ಮೊ:೭೨೫೯೮೫೬೮೯೦,ಬಬಲೇಶ್ವರದ ತೋಟಗಾರಿಕಾ ಅಧಿಕಾರಿ ಸುರೇಶ ಚವ್ಹಾಣ ಮೊ:೯೮೪೫೭೨೯೨೬೧ ಹಾಗೂ ಕಂದಾಯ ನಿರೀಕ್ಷಕರಾದ ವಿನಯ ಕುಲಕರ್ಣಿ ಮೊ: ೭೪೧೧೭೯೪೩೦೫ ಇವರಿಗೆ ದಿನಾಂಕ:೧೦-೦೯-೨೦೨೫ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಬಬಲೇಶ್ವರ ತಹಶಿಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.