Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಲ್ಲಿ ಕಳೆದ ಎರಡು ದಿನಗಳ ಕಾಲ ಗ್ರಾಮದಲ್ಲಿ ಸಂಭ್ರಮ ಮೂಡಿಸಿದ್ದ ಆರಾದ್ಯದೈವ ಶ್ರೀ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆ ಹಾಗೂ ರಥೋತ್ಸವವು ಹಲವಾರು ವಿಶೇಷಗಳೊಂದಿಗೆ ವಿಜ್ರಂಭನೆಯಿಂದ ನೆರವೇರಿತು.ಬುಧವಾರ ಮುಂಜಾನೆಯೇ ಸರದಿಯಲ್ಲಿ ನಿಲ್ಲಲು ಪ್ರಾರಂಭಿಸಿದ ಕಿಚಡಿ ತಯಾರಿಸುವ ಸಾಮಗ್ರಿ ಒಯ್ಯುವ ಸೇವಾ ನಿರತ ಅಲಂಕೃತ ಟ್ರ್ಯಾಕ್ಟರಗಳು ಸಂಜೆಯ ಹೊತ್ತಿಗೆ ನೂರರ ಗಡಿ ದಾಟಿದ್ದವು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಸುಮಾರು ಎರಡು ಕಿ.ಮಿ. ವರೆಗೆ ಸರದಿ ಸಾಲಿನಲ್ಲಿ ನಿಂತಿದ್ದವು ರಾತ್ರಿ ೧೦ ಘಂಟೆಯಿಂದ ಓಂ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ಪ್ರಮುಖರು ಕಿಚಡಿ ಪ್ರಸಾದದ ಸಾಮಗ್ರಿಯನ್ನು ಪ್ರತಿಯೊಂದು ಟ್ರ್ಯಾಕ್ಟರಗಳಲ್ಲಿ ಗ್ರಾಮದಿಂದ ಒಂದು ಕಿ.ಮಿ. ದೂರದ ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಸಾಗಿಸಲಾಯಿತು ಈ ಅಲಂಕೃತ ಟ್ರ್ಯಾಕ್ಟರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಒಂದೊಂದು ಟ್ರ್ಯಾಕ್ಟರಗಳ ಶೃಂಗಾರಕ್ಕೆ ರೈತರು ಇಪ್ಪತ್ತು ಸಾವಿರದಿಂದ ಒಂದು ಲಕ್ಷ ರೂ.ಗಳವರೆಗೆ ಖರ್ಚು ಮಾಡಿರುತ್ತಾರೆ.ಗುರುವಾರ ಬೆಳಿಗ್ಗೆ ೬ ಘಂ,ಗೆ ನಡೆಯುವ ರುದ್ರಾಭಿಷೇಕದೊದಿಗೆ ಪ್ರಾರಂಭಗೊಂಡ ಜಾತ್ರೆಯಲ್ಲಿ ಷಟಸ್ಥಲ ಧ್ವಜಾರೋಹಣ, ಅಡ್ಡ ಪಲ್ಲಕ್ಕಿ ಮಹೋತ್ಸವ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಪಿ.ಪಿ. ಮಾಳಿಗಡ್ಡಿ ಮಠದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು ಶಿಕ್ಷಣತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಎಸ್.ಡಿ. ಹಿರೇಮಠ, ಹಾಗೂ ಸಹ ಶಿಕ್ಷಕರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ರೇವತಗಾಂವ: ನಮ್ಮಲ್ಲಿ ಗುರುಗಳಿಗೆ ಪರಮ ಪವಿತ್ರ ದೇವರ ಸ್ಥಾನವಿದೆ. ತಂದೆ, ತಾಯಿ ಮತ್ತು ಗುರುಗಳು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಪ್ರಮುಖ ಶಕ್ತಿಗಳು. ಪ್ರತಿಯೊಬ್ಬರ ಬಾಳಿನಲ್ಲೂ ಜ್ಞಾನದ ದೀವಿಗೆ ಹಚ್ಚುವವರು ಗುರುಗಳು, ತಂದೆ ಮತ್ತು ತಾಯಿ ಇಬ್ಬರನ್ನೂ ಶಿಕ್ಷಕರೊಬ್ಬರಲ್ಲೇ ಕಾಣಲು ಸಾಧ್ಯ. ಇಂತಹ ಗುರುಗಳಿಗೆ ಮೀಸಲಾದ ದಿನವೇ ‘ಶಿಕ್ಷಕರ ದಿನಾಚರಣೆ’. ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ ಮತ್ತು ಜವಾಬ್ದಾರಿಯುತ ವೃತ್ತಿ. ಎಲ್ಲರ ಬದುಕು ಸಮರ್ಥವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ರೇವತಗಾಂವ ಗ್ರಾಮದ ಶಿಕ್ಷಕ ಎಸ್.ಡಿ.ಆದಿಗೊಂಡೆಯವರು ಹೇಳಿದರು.ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ವೇಳೆಯಲ್ಲಿ ಎಸ್.ಜೆ.ಬಿಜ್ಜರಗಿ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಆಲಮಟ್ಟಿ ಈಗ ಶೃಂಗಾರಮಯ | ಜಲರಾಶಿ, ಹೂಘಮ, ರಮ್ಯತೆಯ ಸಿರಿಗಂಧ | ಕೃಷ್ಣೆ ಜಲಧಿಗೆ ಪವಿತ್ರತೆಯ ಉತ್ಕಟ ಸ್ಥಾನಮಾನ ಉದಯರಶ್ಮಿ ದಿನಪತ್ರಿಕೆ ವರದಿ: ಸಂಪದಾ ಹಿರೇಮಠ ಆಲಮಟ್ಟಿ: ಉತ್ತರ ಕರ್ನಾಟಕದ ರೈತರ ಜೀವನಾಡಿ ಕೃಷ್ಣೆಯ ಒಡಲಿಗೆ ಇದೇ ಶನಿವಾರ ಶ್ರದ್ಧೆ, ಭಕ್ತಿಪೂರ್ವಕ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆಯ ಸುಯೋಗ. ಆ ನಿಮಿತ್ಯ ಆಲಮಟ್ಟಿ ಅಂಗಳಕ್ಕೆ ಈಗ ಅಂದ ಚೆಂದದ ಸ್ಪರ್ಶ ! ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಆವರಣ ಮಧುವಣಗಿತ್ತಿಯಂತೆ ಅಲಂಕಾರದ ತೋರಣದಲ್ಲಿ ಮಿನುಗಿ ಗಮನ ಸೆಳೆಯುತ್ತಿದೆ. ಅತ್ಯಾಕರ್ಷಕ ರೂಪದಲ್ಲಿ ಬಾಗಿನ ಸಲ್ಲಿಕೆಯ ಸ್ಥಳ ಸೇರಿದಂತೆ ಹಲ ವೃತ್ತಗಳು ಘಮಘಮಿಸುವ ಹೂ ಪೋರಣಗಳ ಅಲಂಕಾರದಿಂದ ಕಂಗೊಳಿಸಿ ಕೃಷ್ಣೆ ಜಲಧಿಗೆ ಪವಿತ್ರತೆಯ ಉತ್ಕಟ ಸ್ಥಾನಮಾನ ಸಾಕ್ಷೀಕರಿಸುತ್ತಿವೆ. ಹಸಿಯೋನ್ಮಾದ ಶೃಂಗಾರ ಕಾವ್ಯದ ಲಾಲೀತ್ಯದಲ್ಲಿ ಹೃನ್ಮನ ತಣಿಸುತ್ತಿವೆ. ಅಭೂತಪೂರ್ವ ಐತಿಹ್ಯ ನೋಟ ಬೀರುತ್ತಿವೆ. ತಂಪು ವಾತಾವರಣದ ಕಂಪಿನಲ್ಲಿ ಆಣೆಕಟ್ಟು ಮುಂಭಾಗದ ಹಾಗೂ ಅಕ್ಕಪಕ್ಕದ ಪರಿಸರ ಹಿತಮಯವಾಗಿ…

Read More

ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಮಾಹಿತಿ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ರಾಜ್ಯ ಸರ್ಕಾರದ ಪ್ರಮುಖ ನೀರಾವರಿ ಯೋಜನೆಯಲ್ಲೊಂದಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನ ಆಲಮಟ್ಟಿಯ ತುಂಬಿದ ಕೃಷ್ಣೆಯ ಜಲಧಿಗೆ ಶನಿವಾರ ಬಾಗಿನ ಅರ್ಪಿಸಲಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಹೇಳಿದರು.ಶುಕ್ರವಾರ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆ.೬ ಶನಿವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರು, ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ, ಅವಳಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಗಣ್ಯರು ಆಗಮಿಸಲಿದ್ದು, ಶಿಷ್ಟಾಚಾರ ಮತ್ತು ಸುರಕ್ಷಿತ ಭದ್ರತೆಗೆ ಅಗತ್ಯ ಪೂರ್ವ ಸಿದ್ದತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಸ್ಥಳ ಬದಲಾವಣೆ: ತುಂಬಿದ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಲು ನಿಗದಿತ ಸ್ಥಳದಿಂದ ಸುಮಾರು ಎರಡು ನೂರು ಮೀ. ಅಂತರದಲ್ಲಿ ಜಲಾಶಯದ ಮೇಲ್ಭಾಗದಿಂದ ಗಂಗಾ ಪೂಜೆ ಮತ್ತು ಬಾಗಿನ ಅರ್ಪಣೆ ಮಾಡಲು ಎಲ್ಲಾ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಪಂ. ಸಿಇಒ ರಿಷಿ ಆನಂದ, ಮುಖ್ಯ ಅಭಿಯಂತರ ಡಿ.ಬಸವರಾಜ, …

Read More

ರೈತ ಮುಖಂಡ ಅರವಿಂದ ಕುಲಕರ್ಣಿ ಹಾಗೂ ಧುರೀಣ ಅಶೋಕಗೌಡ ಪಾಟೀಲ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಸ್ವಂತ ಜಾಗೆಯಲ್ಲಿ ನಿರ್ಮಿಸಿದ ಮನೆಗಳಲ್ಲಿ ಬಹು ಕಾಲದಿಂದಲೂ ವಾಸವಾಗಿದ್ದ ಕುಟುಂಬಗಳನ್ನು ಅಭಿವೃದ್ಧಿಯ ನೆಪದಲ್ಲಿ ಅಂದಾಜು ೧೪೨ ಮನೆಗಳ ಕುಟುಂಬಗಳನ್ನು ಹೊರ ಹಾಕಿ ಎಲ್ಲ ಮನೆಗಳನ್ನು ಜೆ,ಸಿ.ಬಿ ಯಂತ್ರಗಳಿಂದ ನೆಲಸಮ ಮಾಡುವ ಮೂಲಕ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರು ಸ್ವಲ್ಪವೂ ಮಾನವಿಯತೆ ಇಲ್ಲದಂತೆ ವರ್ತಿಸಿದ್ದಾರೆ ಎಂದು ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಹಾಗೂ ಕುದರಿ ಸಾಲವಾಡಗಿ ಗ್ರಾಮದ ಧುರಿಣರಾದ ಅಶೋಕಗೌಡ ಪಾಟೀಲ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶುಕ್ರವಾರದಂದು ವಿಜಯಪುರ ನಗರದ ಅಂಬೇಡ್ಕರ ಭವನದಲ್ಲಿ ಕರೆದಿದ್ದ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲರು ಪೋಲೀಸ್ ಇಲಾಖೆ ಬಳಸಿಕೊಂಡು ಪೈಶಾಚಿಕ ಕೃತ್ಯವೆಸಗಿದ್ದಾರೆ. ಈಗ ಮನೆ ಕಳೆದುಕೊಂಡ ಕುಟುಂಬಸ್ಥರು ದಿಕ್ಕೂ ದೆಸೆ ಇಲ್ಲದಂತೆ ಬೀದಿ ಪಾಲಾಗಿದ್ದಾರೆ. ಮನೆ ಕಳೆದುಕೊಂಡ…

Read More

ವಿಜಯಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಮಂಜೂರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಂ.ಬಿ.ಬಿ.ಎಸ್ ಕೋರ್ಸಿಗೆ 50 ಹೆಚ್ಚುವರಿ ಸೀಟುಗಳು ಮಂಜೂರಾಗಿವೆ.ಇದರಿಂದಾಗಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನಲ್ಲಿ ಈ ಬಾರಿ ಒಟ್ಟು 250 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಸಿಗಲಿದೆ.ಕಾಲೇಜು ಈ ವರ್ಷದ ಜನೇವರಿಯಲ್ಲಿ ಹೆಚ್ಚುವರಿ ಸೀಟು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಅದರಂತೆ ಜೂನ್ 2025ರಲ್ಲಿ ನ್ಯಾಶನಲ್ ಮೆಡಿಕಲ್ ಕಮಿಷನ್(National Medical Commission) ಅಧಿಕಾರಿಗಳು ಕಾಲೇಜು ಮತ್ತು ಆಸ್ಪತ್ರೆಗೆ ಆಗಮಿಸಿ ಇಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳು, ವೈದ್ಯಕೀಯ ಸಲಕರಣೆಗಳು, ಅರ್ಹ ತಜ್ಞವೈದ್ಯರು, ನರ್ಸಿಂಗ್ ಸಿಬ್ಬಂದಿ, ರೋಗಿಗಳ ದಾಖಲಾತಿ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ಮೌಲ್ಯಮಾಪನ ನಡೆಸಿ ವರದಿ…

Read More

ಚಡಚಣದ ಸೋಮಶೇಖರ ಪಟ್ಟಣಶೆಟ್ಟಿಯಿಂದ ತಹಶೀಲ್ದಾರಗೆ ಮನವಿ ಉದಯರಶ್ಮಿ ದಿನಪತ್ರಿಕೆ ಚಡಚಣ: ಇತ್ತೀಚಿಗೆ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಡೈಮಂಡ ಪಾರ್ಕ್ ಸಂಪೂರ್ಣ ಕಾನೂನ ಬಾಹೀರವಾಗಿ ನಿರ್ಮಿಸಲಾಗಿದೆ. ಇದು ಸಿಟಿ ಸರ್ವೆಯಲ್ಲಿ ಬರುವದಿಲ್ಲ. ಆದರೂ ಚಡಚಣ ಪ.ಪಂ.ನವರು ಈಗಾಗಲೇ ಸುಮಾರು ೪೦% ಉತಾರೆಗಳನ್ನು ನೀಡಿದ್ದಾರೆ ಎಂದು ಸೋಮಶೇಖರ ಪಟ್ಟಣಶೆಟ್ಟಿ ಆರೋಪಿಸಿ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಅವರು, ಪಟ್ಟಣವು ೨೦೧೬ರಲ್ಲಿ ಗ್ರಾ.ಪಂ.ನಿಂದ ಪ.ಪಂ.ಗೆ ಮೇಲ್ದರ್ಜೆಗೇರಿದ್ದು, ಪಟ್ಟಣವು ಪ.ಪಂ.ಗೆ ಮೇಲ್ದರ್ಜೆಗೇರುವ ಸಮಯದಲ್ಲಿ ಹೊರಡಿಸಿದ ರಾಜ್ಯಪತ್ರದನ್ವಯ ಘೋಷಿತ ಪ.ಪಂ. ವ್ಯಾಪ್ತಿಯಲ್ಲಿರುವ ಸ.ನಂ.ಗಳು ಚಡಚಣ ಗ್ರಾಮ ಠಾಣಾ ೧ ರಿಂದ ೬ರ ವರೆಗೆ, ೪೮ ರಿಂದ ೮೧ರ ವರೆಗೆ, ೯೯ ರಿಂದ ೧೦೭ರ ವರೆಗೆ, ೧೨೨, ೧೨೪ ರಿಂದ ೧೩೫ರ ವರೆಗೆ, ೧೬೩ ರಿಂದ ೧೮೬ರ ವರೆಗೆ, ೧೯೧ ರಿಂದ ೨೧೬ರ ವರೆಗೆ, ೨೧೮ ರಿಂದ ೨೨೩ರ ವರೆಗೆ, ೨೪೨, ೩೪೨ ರಿಂದ ೩೫೯ರ ವರೆಗೆ, ೪೪೪ ರಿಂದ ೪೪೬ರ…

Read More

ವೃಕ್ಷಥಾನ್ ಹೆರಿಟೇಜ್ ರನ್- 2025 ಕೋರ್ ಕಮಿಟಿ ಸದಸ್ಯರಿಂದ ಸಂಭ್ರಮಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವನಾಡಿನಲ್ಲಿ ಪ್ರಾರಂಭವಾದ ಕೋಟಿ ವೃಕ್ಷ ಅಭಿಯಾನದ ಯಶೋಗಾಥೆ ವಿಶ್ವಾದ್ಯಂತ ಸದ್ದು ಮಾಡಿದ್ದು, ಅಮೇರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ಕುರಿತು ವಿಶೇಷ ವರದಿ ಪ್ರಕಟಿಸಿದೆ. ಈ ಸಂತಸವನ್ನು ವೃಕ್ಷಥಾನ್ ಹೆರಿಟೇಜ್ ರನ್- 2025 ಕೋರ್ ಕಮಿಟಿ ಸದಸ್ಯರು ಸಸಿ ನೆಡುವ ಮೂಲಕ ಸಂಭ್ರಮಿಸಿದರು.ಶುಕ್ರವಾರ ಬಿ.ಎಲ್.ಡಿ.ಇ‌ ಸಂಸ್ಥೆಯ ಆವರಣದಲ್ಲಿರುವ ವೃಕ್ಷಥಾನ್ ಹೆರಿಟೇಜ್ ರನ್ ಕಚೇರಿಯ ಬಳಿ ನಡೆದ ಕಾರ್ಯಕ್ರಮದಲ್ಲಿ ಇಂಗ್ಲೆಂಡ್ ನಲ್ಲಿ ನೆಲೆಸಿರುವ ವಿಜಯಪುರ ಮೂಲದ ಸಾಫ್ಟವೇರ್ ಎಂಜಿನಿಯರ್ ಸದಾನಂದ ಬಿರಾದಾರ ಅವರು ಸಸಿ ನೆಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ‌ ಭಗೀರಥ ಎಂ. ಬಿ. ಪಾಟೀಲ‌ ಅವರ ಕನಸಿನ ಕೂಸಾದ ಕೋಟಿ ವೃಕ್ಷ ಅಭಿಯಾನ ಇಂದು ಯಶಸ್ವಿಯಾಗಿ ಇಡೀ ಪ್ರಪಂಚವನ್ನು ತಲುಪಿದೆ. ಅದೇ ರೀತಿ ಜಲ, ನೀರು, ಶಿಕ್ಷಣ ಹಾಗೂ ಆರೋಗ್ಯ ಧ್ಯೇಯವನ್ನೊಳಗೊಂಡಿರುವ ವೃಕ್ಷಥಾನ್ ಹೆರಿಟೇಜ್ ರನ್ ಕೂಡ ಶೀಘ್ರದಲ್ಲಿ ಜಗತ್ತಿನಾದ್ಯಂತ ಖ್ಯಾತಿ ಪಡೆಯಲಿದೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಲ್ಯತಂತ್ರ ವಿಭಾಗದ ವತಿಯಿಂದ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 13ರ ವರೆಗೆ ಆರು ದಿನಗಳ ಕಾಲ ಉರುಪು ಮೂಲವ್ಯಾಧಿ ಮತ್ತು ಸೊಂಟ ನೋವು(ಸಿಯಾಟಿಕಾ) ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದೆ.ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 7019656245 ಮತ್ತು‌ 8147740460ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Read More