ಚಡಚಣದ ಸೋಮಶೇಖರ ಪಟ್ಟಣಶೆಟ್ಟಿಯಿಂದ ತಹಶೀಲ್ದಾರಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಇತ್ತೀಚಿಗೆ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಡೈಮಂಡ ಪಾರ್ಕ್ ಸಂಪೂರ್ಣ ಕಾನೂನ ಬಾಹೀರವಾಗಿ ನಿರ್ಮಿಸಲಾಗಿದೆ. ಇದು ಸಿಟಿ ಸರ್ವೆಯಲ್ಲಿ ಬರುವದಿಲ್ಲ. ಆದರೂ ಚಡಚಣ ಪ.ಪಂ.ನವರು ಈಗಾಗಲೇ ಸುಮಾರು ೪೦% ಉತಾರೆಗಳನ್ನು ನೀಡಿದ್ದಾರೆ ಎಂದು ಸೋಮಶೇಖರ ಪಟ್ಟಣಶೆಟ್ಟಿ ಆರೋಪಿಸಿ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಅವರು, ಪಟ್ಟಣವು ೨೦೧೬ರಲ್ಲಿ ಗ್ರಾ.ಪಂ.ನಿಂದ ಪ.ಪಂ.ಗೆ ಮೇಲ್ದರ್ಜೆಗೇರಿದ್ದು, ಪಟ್ಟಣವು ಪ.ಪಂ.ಗೆ ಮೇಲ್ದರ್ಜೆಗೇರುವ ಸಮಯದಲ್ಲಿ ಹೊರಡಿಸಿದ ರಾಜ್ಯಪತ್ರದನ್ವಯ ಘೋಷಿತ ಪ.ಪಂ. ವ್ಯಾಪ್ತಿಯಲ್ಲಿರುವ ಸ.ನಂ.ಗಳು ಚಡಚಣ ಗ್ರಾಮ ಠಾಣಾ ೧ ರಿಂದ ೬ರ ವರೆಗೆ, ೪೮ ರಿಂದ ೮೧ರ ವರೆಗೆ, ೯೯ ರಿಂದ ೧೦೭ರ ವರೆಗೆ, ೧೨೨, ೧೨೪ ರಿಂದ ೧೩೫ರ ವರೆಗೆ, ೧೬೩ ರಿಂದ ೧೮೬ರ ವರೆಗೆ, ೧೯೧ ರಿಂದ ೨೧೬ರ ವರೆಗೆ, ೨೧೮ ರಿಂದ ೨೨೩ರ ವರೆಗೆ, ೨೪೨, ೩೪೨ ರಿಂದ ೩೫೯ರ ವರೆಗೆ, ೪೪೪ ರಿಂದ ೪೪೬ರ ವರೆಗೆ, ರಿಂದ ೪೫೮, ೪೫೯, ೪೮೦, ೪೮೧, ೪೮೫ ರಿಂದ ೪೯೫ರ ವರೆಗೆ, ೪೯೯ ರಿಂದ ೫೦೨ರ ವರೆಗೆ, ೫೦೪, ೫೦೫ ಸ.ನಂ. ಗಳು ಪಟ್ಟಣ ವ್ಯಾಪ್ತಿಗೆ ಸೇರುತ್ತವೆ ಎಂದು ಪ.ಪಂ. ಮುಖ್ಯಾಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ. ಆದರೆ, ಡೈಮಂಡ ಪಾರ್ಕ ನಿರ್ಮಿಸಲಾಗಿರುವ ಸ.ನಂ.ಗಳಾದ ೨೪೪/೨, ೨೪೫/೧, ೨೪೫/೨, ೨೪೬/* ಈ ಸರ್ವೇ ನಂಬರಗಳು ಚಡಚಣ ಪಟ್ಟಣ ಪಂಚಾಯತ ವ್ಯಾಪ್ತಿಗೆ ಬರುವದಿಲ್ಲ ಎಂಬುದು ಪ.ಪಂ. ಮುಖ್ಯಾಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೂ ಈ ಸ.ನಂ.ಗಳನ್ನು ಭೂಪರಿವರ್ತನೆ ಮಾಡಿ, ಸುಮಾರು ೪೦ ಎಕರೆ ೩೮ ಗುಂಟೆ ಜಾಗೆಯಲ್ಲಿ ವಿವಿಧ ಅಳತೆಯ ೭೫೯ ಪ್ಲಾಟುಗಳನ್ನು ನಿರ್ಮಿಸಿದ್ದಾರೆ. ಆ ಪ್ಲಾಟುಗಳ ಪೈಕಿ ಸುಮಾರು ೪೦% ಪ್ಲಾಟುಗಳ ಉತಾರೆಯನ್ನು ಪ.ಪಂ.ನಿಂದ ಪೂರೈಸಲಾಗಿದೆ ಎಂದು ಆರೋಪಿಸಿದ ಅವರು, ಇದನ್ನು ಕೂಲಂಕುಶವಾಗಿ ಪರಿಶೀಲಿಸಿ, ಪ.ಪಂ.ನವರು ನೀಡಿದ ಉತಾರೆಗಳನ್ನು ತಕ್ಷಣವೇ ರದ್ದುಗೊಳಿಸಿ, ಸಾರ್ವಜನಿಕರಿಗೆ ಆಗುವ ಅನ್ಯಾಯವನ್ನು ತಪ್ಪಿಸಿ, ಮಾನ್ಯರು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.