ಉದಯರಶ್ಮಿ ದಿನಪತ್ರಿಕೆ
ರೇವತಗಾಂವ: ನಮ್ಮಲ್ಲಿ ಗುರುಗಳಿಗೆ ಪರಮ ಪವಿತ್ರ ದೇವರ ಸ್ಥಾನವಿದೆ. ತಂದೆ, ತಾಯಿ ಮತ್ತು ಗುರುಗಳು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಪ್ರಮುಖ ಶಕ್ತಿಗಳು. ಪ್ರತಿಯೊಬ್ಬರ ಬಾಳಿನಲ್ಲೂ ಜ್ಞಾನದ ದೀವಿಗೆ ಹಚ್ಚುವವರು ಗುರುಗಳು, ತಂದೆ ಮತ್ತು ತಾಯಿ ಇಬ್ಬರನ್ನೂ ಶಿಕ್ಷಕರೊಬ್ಬರಲ್ಲೇ ಕಾಣಲು ಸಾಧ್ಯ. ಇಂತಹ ಗುರುಗಳಿಗೆ ಮೀಸಲಾದ ದಿನವೇ ‘ಶಿಕ್ಷಕರ ದಿನಾಚರಣೆ’. ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ ಮತ್ತು ಜವಾಬ್ದಾರಿಯುತ ವೃತ್ತಿ. ಎಲ್ಲರ ಬದುಕು ಸಮರ್ಥವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ರೇವತಗಾಂವ ಗ್ರಾಮದ ಶಿಕ್ಷಕ ಎಸ್.ಡಿ.ಆದಿಗೊಂಡೆಯವರು ಹೇಳಿದರು.
ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ವೇಳೆಯಲ್ಲಿ ಎಸ್.ಜೆ.ಬಿಜ್ಜರಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.