ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ರಾಜ್ಯ ಸರ್ಕಾರದ ಪ್ರಮುಖ ನೀರಾವರಿ ಯೋಜನೆಯಲ್ಲೊಂದಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನ ಆಲಮಟ್ಟಿಯ ತುಂಬಿದ ಕೃಷ್ಣೆಯ ಜಲಧಿಗೆ ಶನಿವಾರ ಬಾಗಿನ ಅರ್ಪಿಸಲಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಹೇಳಿದರು.
ಶುಕ್ರವಾರ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆ.೬ ಶನಿವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರು, ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ, ಅವಳಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಗಣ್ಯರು ಆಗಮಿಸಲಿದ್ದು, ಶಿಷ್ಟಾಚಾರ ಮತ್ತು ಸುರಕ್ಷಿತ ಭದ್ರತೆಗೆ ಅಗತ್ಯ ಪೂರ್ವ ಸಿದ್ದತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸ್ಥಳ ಬದಲಾವಣೆ: ತುಂಬಿದ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಲು ನಿಗದಿತ ಸ್ಥಳದಿಂದ ಸುಮಾರು ಎರಡು ನೂರು ಮೀ. ಅಂತರದಲ್ಲಿ ಜಲಾಶಯದ ಮೇಲ್ಭಾಗದಿಂದ ಗಂಗಾ ಪೂಜೆ ಮತ್ತು ಬಾಗಿನ ಅರ್ಪಣೆ ಮಾಡಲು ಎಲ್ಲಾ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ. ಸಿಇಒ ರಿಷಿ ಆನಂದ, ಮುಖ್ಯ ಅಭಿಯಂತರ ಡಿ.ಬಸವರಾಜ, ಅಧೀಕ್ಷಕ ಅಭಿಯಂತರರಾದ ಗೋವಿಂದ ರಾಠೋಡ, ವಿ.ಆರ್.ಹಿರೇಗೌಡರ, ತಹಶೀಲ್ದಾರ ಎ.ಡಿ.ಅಮರಾವದಗಿ, ಕಾರ್ಯಪಾಲಕ ಅಭಿಯಂತರ ತಾರಾಸಿಂಗ್ ದೊಡ್ಡಮನಿ, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ ಚಂದ್ರಗಿರಿಯವರ, ಡಿವೈಎಸ್ಪಿಗಳಾದ ಬಲ್ಲಪ್ಪ ನಂದಗಾವಿ, ಎಂ.ಎಂ.ಉಪಾಸೆ ಸಿಪಿಐ ಅಶೋಕ ಚವ್ಹಾಣ, ಪಿಎಸೈ ಎಫ್. ಎಸ್.ಇಂಡಿಕರ ಮೊದಲಾದವರಿದ್ದರು.