Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರದಲ್ಲಿ ಶಿಕ್ಷಕರ ದಿನೋತ್ಸವದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇವರ ಸ್ವರೂಪದಲ್ಲಿ ಶಿಕ್ಷಕರನ್ನು ಪೂಜಿಸುವ ದೇಶ ನಮ್ಮ ಭಾರತ ದೇಶವಾಗಿದೆ ಎಂದು ಜಮಖಂಡಿಯ ಓಲೆಮಠದ ಆನಂದ ದೇವರು ಸ್ವಾಮೀಜಿ ಹೇಳಿದರು.ನಗರದ ತೊರವಿ ರಸ್ತೆಯಲ್ಲಿರುವ ಜಿ.ಕೆ.ಪಾಟೀಲ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯದ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶುಕ್ರವಾರ ಏರ್ಪಡಿಸಿದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಒಬ್ಬ ಆಶ್ಯಕ್ತನನ್ನು ಸಶಕ್ತನನ್ನಾಗಿ ಮಾಡುವ ಶಕ್ತಿ ಗುರುವಿಗಿದೆ. ಶಿಕ್ಷಕ, ರೈತ, ಸೈನಿಕ ಈ ಮೂವರು ದೇಶಕ್ಕೆ ಅಮೂಲ್ಯವಾದ ರತ್ನಗಳಾಗಿವೆ. ಯಾವ ಸ್ವಾರ್ಥವನ್ನು ಬಯಸದೇ ಅಕ್ಷರ ಕಲಿಸುವ ಮನೋಭಾವ ಉಳ್ಳವರಾಗಿದ್ದಾರೆ ಎಂದರು.ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ಶಿಕ್ಷಕರ ಸ್ಥಾನ ವಿಶೇಷವಾದುದು, ಜಗತ್ತಿಗೆ ದಿವ್ಯ ಜ್ಞಾನ ಕೊಡುವ ಕಾರ್ಯ ಶಿಕ್ಷಕರ ಮೇಲಿದೆ. ತಂದೆ ತಾಯಿ ನಂತರದ ಸ್ಥಾನ ಗುರುವಿಗಿದೆ.…
ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ತಾಲ್ಲೂಕಿನ ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಶರಣಬಸಪ್ಪ ಶಿ.ಗಡೇದ ಅವರಿಗೆ ಗುರುಶ್ರೀ ರಾಜ್ಯ ಪ್ರಶಸ್ತಿ ಲಭಿಸಿದೆ.ವಿವೇಕ ಚೇತನ ಚಾರಿಟಬಲ್ ಟ್ರಸ್ಟ್ ಬೆಂಗಳೂರು. ಹಾಗೂ ರಾಘವೇಂದ್ರ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ಇದೇ ಸೆ.13 ರಂದು ಬೆಂಗಳೂರಿನಲ್ಲಿ ಜರುಗಲಿರುವ “ಶಿಕ್ಷಕರ ದಿನಾಚರಣೆ ಹಾಗೂ ಅಭಿಯಂತರರ ದಿನಾಚರಣೆ” “ರಾಜ್ಯ ಮಟ್ಟದ ‘ಗುರುಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಾಘವೇಂದ್ರ ಪ್ರಕಾಶನದ ರಾಘವೇಂದ್ರ ಜಿ.ಎನ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಸಕ್ತ ಸಾಲಿನ (೨೦೨೬-೨೬) ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ವ್ಯಾಲ್ಯು ಆಡೆಡ್ ಡಿಪ್ಲೋಮಾ/ಅಡ್ವಾನ್ಸ್ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳ ಖಾಲಿ ಉಳಿದ ಸೀಟುಗಳ ಭರ್ತಿಗಾಗಿ ಸೆಪ್ಟೆಂಬರ್ ೨೮ರ ವರೆಗೆ ಪ್ರವೇಶ ದಿನಾಂಕ ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ವಿದ್ಯಾರ್ಥಿನಿಯರು ಆ ದಿನಾಂಕದ ವರೆಗೆ ಪ್ರವೇಶಾತಿ ಪಡೆಯಬಹುದು ಎಂದು ಕುಲಸಚಿವ ಶಂಕರಗೌಡ ಸೋಮನಾಳ ಅವರು ತಿಳಿಸಿದ್ದಾರೆ.ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮಹಿಳಾ ಅಧ್ಯಯನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಅರ್ಥಶಾಸ್ತç, ಸಮಾಜಶಾಸ್ತç, ಸಮಾಜ ಕಾರ್ಯ, ಎಂ.ಎಸ್‌ಸಿ ಇನ್ ಬಯೋಇನ್ಫರ‍್ಮೆಟಿಕ್ಸ್, ಬಯೋಟೆಕ್ನಾಲಜಿ, ಭೌತಶಾಸ್ತ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ, ಆಹಾರ ಸಂಸ್ಕರಣೆ ಮತ್ತು ಪೋಷಣೆ, ರಸಾಯನಶಾಸ್ತ, ಗಣಿತಶಾಸ್ತ, ಔಷಧೀಯ ರಸಾಯನಶಾಸ್ತ, ಮತ್ತು ಎಂಎಡ್, ಎಂಪಿಎಡ್, ಬಿಪಿಎಡ್, ಸಂಗೀತ ವಿಷಯಗಳ ಸ್ನಾತಕೋತ್ತರ ಕೋರ್ಸ್ಗಳಿಗೆ ಮತ್ತು ಪಿಜಿಡಿಸಿಯಲ್ಲಿ ಸೀಟುಗಳು ಲಭ್ಯವಿವೆ. ಸೆಪ್ಟೆಂಬರ್ ೨೮ರ ವರೆಗೆ ಈ ಕೋರ್ಸ್ಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು.ಈ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕೆರೂಟಗಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಅತಿಥೇಯ ಸರ್ಕಾರಿ ಉರ್ದು ಪ್ರೌಢಶಾಲೆ ಹುಣಶ್ಯಾಳ ತಂಡವು ಬಾಲಕರ ಕ್ರಿಕೆಟ್, ವಾಲಿಬಾಲ್, ಬಾಲಕಿಯರ ಥ್ರೋಬಾಲ್ ಪ್ರಥಮ, ಬಾಲಕಿಯರ ಖೋಖೋ, ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು.
ದೇವರಹಿಪ್ಪರಗಿ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶಿಕ್ಷಕರೇ ನಾಡಕಟ್ಟುವ ಶಿಲ್ಪಿಗಳು ಜೊತೆಗೆ ಮಕ್ಕಳ ಉಜ್ವಲ ಭವಿಷ್ಯದ ನಿರ್ಮಾತೃಗಳು ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಎನ್.ಬಸವರೆಡ್ಡಿ ಹೇಳಿದರು.ಪಟ್ಟಣದ ಹೊಸನಗರದಲ್ಲಿ ಶುಕ್ರವಾರ ಸರ್ವೋದಯ ಶಿಕ್ಷಣ ಸಂಸ್ಥೆಯಡಿಯ ಜ್ಞಾನಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜರುಗಿದ ಡಾ.ಎಸ್.ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರತಿಭಾವಂತ ಮಕ್ಕಳೇ ದೇಶದ ನಿಜವಾದ ಸಂಪತ್ತು ಎಂದರು.ಸಂಸ್ಥೆಯ ಸಂಸ್ಥಾಪಕ ಎನ್.ಬಿ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಮಕ್ಕಳೇ ಆಯೋಜಿಸಿ, ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿಯನ್ನು ವೇದಿಕೆಯ ಮೇಲೆ ಹೂಮಾಲೆ, ಪುಷ್ಪಗುಚ್ಛ ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಹಸನ್‌ಸಾಬ್ ಶಿಕ್ಷಕ ಸಿಬ್ಬಂದಿಗಳಾದ ಅಕೀಲ್ ನಾಗಾವಿ, ನಿಂಗಣ್ಣ ಹರಿಜನ, ವಿನೋದಕುಮಾರ ಬೆಳ್ಳಿಕಟ್ಟಿ, ಮಾಳು ಪೂಜಾರಿ, ಜ್ಯೋತಿ ಬಾಗೇವಾಡಿ, ಸೌಭಾಗ್ಯ ದೇಸಾಯಿ, ಅಶ್ವಿನಿ ಹೆಬ್ಬಾಳ, ಅಶ್ವಿನಿ ನಾಗರಬೆಟ್ಟ, ಮಹಾಲಕ್ಷ್ಮಿ ಗೊಡ್ಯಾಳ, ಶ್ರೀದೇವಿ ಬಾಗೇವಾಡಿ, ಲಕ್ಷ್ಮಿ, ರೇಣುಕಾ ಬಗಲಿ, ಶಶಿಕಲಾ ದೇಸಾಯಿ ಇದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸಲಾಯಿತು.ಶುಕ್ರವಾರ ಡೀಮ್ಡ್ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿವಿಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಶಿಕ್ಷಕರು ಸಮಾಜದ ನಿಜವಾದ ದಾರಿದೀಪ. ಅವರ ಮಾರ್ಗದರ್ಶನವಿಲ್ಲದೆ ಉತ್ತಮ ವಿದ್ಯಾರ್ಥಿಗಳನ್ನು ತಯಾರಿಸುವುದು ಅಸಾಧ್ಯ. ಶಿಕ್ಷಕರು ಕೇವಲ ಪಾಠ ಕಲಿಸುವವರಲ್ಲ. ಅವರು ಮೌಲ್ಯಗಳನ್ನು ಬೆಳೆಸುತ್ತ ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತಾರೆ. ಬಿ.ಎಲ್.ಡಿ.ಇ ವಿವಿ ಶ್ರೇಷ್ಠ ಶಿಕ್ಷಣ, ಗುಣಮಟ್ಟದ ಸಂಶೋಧನೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ದಿಸೆಯಲ್ಲಿ ಸದಾ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಂಗಾಮಿ ಕುಲಪತಿ ಡಾ. ಅರುಣ ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಅಲೈಡ್ ಹೆಲ್ತ ಸೈನ್ಸ ಡೀನ್ ಡಾ. ಎಸ್. ವಿ. ಪಾಟೀಲ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಆನಂದ ಪಿ. ಅಂಬಲಿ, ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ, ಡಾ. ಆರ್.…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶಿಕ್ಷಣ ಎಂದರೆ ಮಗುವಿನ ಭವಿಷ್ಯದ ತಯಾರಿ ಅಲ್ಲ, ಮಗುವಿನಲ್ಲಿ ಅಡಗಿರುವ ವಿದ್ಯೆಯನ್ನು ಹೆಕ್ಕಿತೆಗೆದು ಅವರ ಜೀವನನ್ನು ರೂಪಿಸುವದೇ ಶಿಕ್ಷಣ ಎಂದು ಪ್ರೌಢ ಶಾಲಾ ಶಿಕ್ಷಕ, ವಾಗ್ಮಿ ಬಸವರಾಜ ಹಂಚಲಿ ಹೇಳಿದರು.ಪಟ್ಟಣದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ವಿಶೇಶ ಉಪನ್ಯಾಸ ನೀಡಿದರು.ಇಡೀ ಜಗತ್ತನ್ನು ಬದಲಾಯಿಸುವ ಮತ್ತು ಚರಿತ್ರೆಯನ್ನು ನಿರ್ಮಾಣ ಮಾಡುವ ಶಕ್ತಿ ಇರೋದು ಶಿಕ್ಷಣಕ್ಕೆ ಮಾತ್ರ. ಆ ಶಿಕ್ಷಣವನ್ನು ನೀಡಿ ದೇಶವನ್ನು ಹಟ್ಟುವ ಕೆಲಸವನ್ನು ಪ್ರತಿಯೊಬ್ಬ ಶಿಕ್ಷಕ ಮಾಡುತ್ತಿದ್ದಾನೆ. ಆದರೆ ಸಧ್ಯದ ದಿನಮಾನಗಳಲ್ಲಿ ಅತಿಯಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ, ಸುಲಿಗೆ, ದರೋಡೆ, ಜಾತಿ, ಧರ್ಮ ತೊಳಲಾಟ ಇವುಗಳೆಲ್ಲ ಶಿಕ್ಷಣದ ಮೌಲ್ಯಗಳನ್ನು ಕಳೆಯುತ್ತಿವೆ. ಇಂಜಿನೀಯರಗಳು ರಸ್ತೆ ಹಾಳಾದರೂ ಪರವಾಗಿಲ್ಲ ನಾನು ಮಾತ್ರ ಚನ್ನಾಗಿರಬೇಕು ಅನ್ನೋವಾಗ, ವೈದ್ಯರು ಮೃತ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ನಿಮಿತ್ಯವಾಗಿ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ನಗರದಲ್ಲಿ ಮುಸ್ಲಿಂ ಸಮಾಜದ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.ನಗರದ ವಿವಿಧೆಡೆ ಹಸಿರುಧ್ವಜಗಳು ಹಾರಾಡಿದವು. ಮುಸ್ಲಿಮರು ಮೆರವಣಿಗೆಯಲ್ಲಿ ಮಹ್ಮದ ಪೈಗಂಬರ ಅವರ ಕುರಿತ ಗುಣಗಾನ ಮಾಡಿದರು.ಮುಂಜಾನೆ 9 ಗಂಟೆಯ ಶಾಹ್ ಆಲ್ಂ ಗೇಟ ಹತ್ತಿರ ಮೆರವಣಿಗೆಗೆ ಮಾಜಿ ಶಾಸಕ ಆನಂದ ನ್ಯಾಮಗೌಡ, ಮೌಲಾನಾ ಅಬುಸಾಲಿಯಾಸಾ, ಮಲಾನಾ ಖುಷ್ಟುದಿನ್ನ ಬಿಜಾಪುರ, ಮೌಲಾನಾ ಶಿರಸಂಗಿ, ಮಾಮೂನರಸೀಧ ಪಾರರ್ಥನಳ್ಳಿ, ತೌಪೀಕ್ ಪಾರಥನಳ್ಳಿ, ರಿಯಾಜ ಅವಟಿ, ನಜೀರ ಕಂಗನೋಳ್ಳಿ, ನಗರಸಭೆ ಸದಸ್ಯ ಮುಬಾರಕ ಅಪರಾಧ, ಮೌಲಾನಾ ಜುನೆದ ರಜಾ, ನಗರ ಯೋಜನೆ ಪ್ರಾಧಿಕಾರ ಅದ್ಯಕ್ಷ ಅನ್ವರ ಮೋಮಿನ, ರಫಿಕ್ ಬಾರಿಗಡ್ಡಿ, ಸುಶಿಲಕುಮಾರ ಬೆಳಗಲಿ, ನ್ಯಾಯವಾದಿ ಶಶಿಕಾಂತ ದೊಡಮನಿ, ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ, ಸಿಪಿಐ ಮಲ್ಲಪ್ಪಮಡ್ಡಿ, ಪಿ.ಎಸ್.ಐ ಅನೀಲ ಕುಂಬಾರ. ಬಕರ ಕುಡಚಿ ಸಾದೀಕ್ ಬಂಟನೂರ, ಮುಸ್ತಾಕ್ ಝಂಡೆ ಸೇರಿದಂತೆ ಅನೇಕರು ಮೆರವಣಿಗೆಗೆ ಸಾಥ ನೀಡಿದರು.ಮೆರವಣಿಗೆಯುದ್ದಕ್ಕೂ ಹಲವು…
ಸಿಂದಗಿಯಲ್ಲಿ ಡಾ.ರಾಧಾಕೃಷ್ಣನ್ ಜನ್ಮದಿನೋತ್ಸವ ಉದ್ಘಾಟಿಸಿದ ಪುರಸಭೆ ಅದ್ಯಕ್ಷ ಡಾ.ಶಾಂತವೀರ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಡಾ.ಸರ್ವಪಲ್ಲಿ ರಾಧಾಕೃಷ್ಣರು ವಿವಿಯ ಕುಲಪತಿ, ಪ್ರಾಧ್ಯಾಪಕ, ಉಪರಾಷ್ಟ್ರಪತಿ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿ ಶಿಕ್ಷಕ ಸಮೂಹಕ್ಕೆ ದಾರಿ ದೀಪವಾಗಿದ್ದಾರೆ. ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ಶಿಕ್ಷಕರು ನೀಡುವ ಶಿಕ್ಷಣ ಜೀವನದುದ್ದಕ್ಕೂ ಮರೆಯದಂತಹ ಸಂಬಂಧ ಬೆಳೆಸುತ್ತಾರೆ ಎಂದು ಪುರಸಭೆ ಅದ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಗುಂದಗಿ ಪಂಕ್ಷನ್ ಹಾಲ್‌ನಲ್ಲಿ ವಿಜಯಪುರ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ ೧೩೭ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸಿಂದಗಿ ಪುರಸಭೆಯು ಇಂದು ನಗರ ಸಭೆಯಾಗಿ ಮೇಲ್ದರ್ಜೆಗೆರಿದೆ. ಇದರಿಂದ ಸಾಕಷ್ಟು ಅನುದಾನ ಹರಿದು ಬರುತ್ತದೆ. ಅದನ್ನು ಶಾಲೆ-ಕಾಲೇಜು, ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತೇವೆ ಎಂದು ತಿಳಿಸಿದರು.ಈ ವೇಳೆ ಕಲಬುರ್ಗಿ ವಿವಿಯ ಕನ್ನಡ ಅಧ್ಯಯನ…
ವಿಜಯಪುರದಲ್ಲಿ ಶಿಕ್ಷಕರ ದಿನಾಚರಣೆ | ಜಿಲ್ಲಾ ಆತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ | ಸಂಸದ ರಮೇಶ ಜಿಗಜಿಣಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಮಹತ್ವದ್ದಾಗಿದ್ದು, ಶಿಕ್ಷಕರಿಗೆ ಸಮಾಜದಲ್ಲಿ ಬಹಳ ಗೌರವದ ಸ್ಥಾನವಿದ್ದು, ಶಿಕ್ಷಕರು ನಿರ್ವಹಿಸುವ ಕಾರ್ಯ ಅನನ್ಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಾರ್ಯಾಲಯ ಹಾಗೂ ನಗರ ವಲಯ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಪಾಠ ಬೊಧನೆ ಮಾಡುವ ಮೂಲಕ ಮುಂದಿನ ಉತ್ತಮ ನಾಗರಿಕರನ್ನಾಗಿ ರೂಪಿಸುವ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳ ಅಂತರಾಳವನ್ನು ಅರಿತು, ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ…
