ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಶೋಷಿತ ವರ್ಗದ ಏಳಿಗೆಗಾಗಿ, ನೊಂದವರ ಧ್ವನಿಯಾಗಿ, ಅನ್ಯಾಯಗೊಳಗಾದ ಸರ್ವ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ರಾಜ್ಯವ್ಯಾಪಿ ಶ್ರಮಿಸುತ್ತಾ ಬರುತ್ತಿರುವ ಕರ್ನಾಟಕ ರಾಜ್ಯ ಭೀಮ್ ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಪಟ್ಟಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಸೀರ್ ಅಹಮದ್ ಅವರನ್ನು ಅಲ್ಪಸಂಖ್ಯಾತರ ಘಟಕದ ಮೈಸೂರು ಜಿಲ್ಲಾಧ್ಯಕ್ಷರನ್ನಾಗಿ ಅಪ್ಸರ್ ಪಾಷಾ ಅವರನ್ನು ಅಲ್ಪಸಂಖ್ಯಾತರ ಘಟಕದ ಹೆಚ್ ಡಿ ಕೋಟೆ ತಾಲೂಕು ಅಧ್ಯಕ್ಷರನ್ನಾಗಿ ಮತ್ತು ನಜೀರ್ ಅಹಮದ್ ಅವರನ್ನು ತಾಲೂಕು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ನೇಮಕಾತಿ ಪ್ರಮಾಣ ಪತ್ರ ನೀಡಲಾಯಿತು.
ಸಂಸ್ಥಾಪಕ ಕಂ. ರಾಜ್ಯಾಧ್ಯಕ್ಷ ಸರ್ವೇಶ್ ಮಾತನಾಡಿ, ಸಂಘಟನೆ ವತಿಯಿಂದ ಫೆಬ್ರವರಿ 23 ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ನಿರುದ್ಯೋಗ ಯುವಕ, ಯುವತಿಯರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಅಲ್ಪ ಸಂಖ್ಯಾತರ ಯುವ ಘಟಕದ ರಾಜ್ಯಾಧ್ಯಕ್ಷ ನಯಾಜ್ ಪಾಷಾ, ವಕ್ಫ್ ಸಲಹಾ ಸಮಿತಿಯ ಮೈಸೂರು ಜಿಲ್ಲಾ ಸದಸ್ಯ ಶರಪುದ್ದೀನ್ ಮಾತನಾಡಿದರು.
ಮೈಸೂರು ನಗರಾಧ್ಯಕ್ಷ ಮಹಮ್ಮದ್ ಶಫಿ, ವಕೀಲರಾದ ಜವರಯ್ಯ ಚೌಡಹಳ್ಳಿ, ಯಾದವಮೂರ್ತಿ, ಏಜಾಜ್ ಪಾಷಾ, ಸುನಿಲ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

