ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದು ಕಾನೂನು ಕೃತಿಯನ್ನು ಸ್ವೀಕರಿಸಿದ ದಿನ. ವಿವಿಧ ದೇಶಗಳಿಗೆ ತುಲಾನಾತ್ಮಕವಾಗಿ ಹೊಲಿಸಿ ನೋಡಿದಾಗ ಭಾರತ ದೇಶದ ಸಂವಿಧಾನ ವಿಶ್ವದ ಅತೀ ದೊಡ್ಡ ಸಂವಿಧಾನವಿದೆ. ದೇಶದ ಏಕತೆ, ಸಮಾನತೆ ಮತ್ತು ಭ್ರಾತೃತ್ವವನ್ನು ಉತ್ತೇಜಿಸುತ್ತದೆ ಎಂದು ತಹಶೀಲ್ದಾರ ಕರೆಪ್ಪ ಬೆಳ್ಳಿ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡ ೭೭ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವವು ನಮ್ಮ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೆನಪಿಸುತ್ತದೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸುವ ಸಂಕಲ್ಪ ಮಾಡುವುದು ಈ ದಿನದ ನಿಜವಾದ ಮಹತ್ವವಾಗಿದೆ ಎಂದರು.
ಪರೇಡನಲ್ಲಿ ಬಾಗವಹಿಸಿದ ಪಿಎಸ್‌ಐ ಆರೀಫ ಮುಷಾಪುರಿ, ಅಗ್ನಿ ಶಾಮಕ ಅದಿಕಾರಿ, ಗೃಹ ರಕ್ಷಕ ದಳ, ಲೋಯಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆರ್.ಡಿ.ಪಾಟೀಲ ಕಾಲೇಜಿನ ರರ‍್ಸ್ ಮತ್ತು ರೆರ‍್ಸ್, ಜ್ಞಾನ ಭಾರತಿ ಪ್ರೌಡಶಾಲೆ, ಕೆಜಿಎಸ್, ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು.
ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ ಕರೆಪ್ಪ ಬೆಳ್ಳಿ ಸಂವಿಧಾನ ಪೀಠಿಕೆ ಓದಿದರು.
ಸಹಾಯಕ ಕೃಷಿ ನಿರ್ದೇಶಕ ಪ್ರಶಾಂತ ಸಾಣಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಚೀನ ಇಟಗಿ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ಪಿಎಸ್ಐ ಆರೀಫ ಮುಷಾಪುರಿ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಪಶು ಸಂಗೋಪನಾ ಉಪ ನಿರ್ದೇಶಕ ಡಾ.ಶಿವಶರಣ ಯಲಗೋಡ, ಪೌರಾಯುಕ್ತ ಎಸ್.ರಾಜಶೇಖರ, ರಾಜಶೇಖರ, ಕೂಚಬಾಳ, ವರ್ಷಾ ಪಾಟೀಲ, ಅಂಬಿಕಾ ಪಾಟೀಲ, ಪ್ರತಿಭಾ ಚಳ್ಳಗಿ, ಜಯಶ್ರೀ ಹದನೂರ, ಅಶೋಕ ಅಲ್ಲಾಪುರ ಸೇರಿದಂತೆ ಇತರರು ಇದ್ದರು. ತಾಪಂ ಇಒ ರಾಮು ಅಗ್ನಿ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಸೋಂಪೂರ ನಿರೂಪಿಸಿದರು. ಶಿಕ್ಷಕ ಎಂ.ಆರ್.ಡೋಣಿ ವಂದಿಸಿದರು.
“ಮಳೆಯಿಂದ ಹಾನಿಯಾದ ೨೯ಸಾವಿರಕ್ಕೂ ಅಧಿಕ ರೈತರಿಗೆ ರೂ.೫೩ಕೋಟಿ ೧೦ಲಕ್ಷ ಬೆಳೆ ಪರಿಹಾರ ನೀಡಲಾಗಿದೆ, ದಾಖಲೆ ರಹಿತ ಜನವಸತಿ ಜನರಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯ ಒದಗಿಸಿಕೊಡಲು ತಾಲೂಕು ಆಡಳಿತದ ಮೂಲ ಕರ್ತವ್ಯವಾಗಿದೆ.”
– ಕರೆಪ್ಪ ಬೆಳ್ಳಿ
ತಹಶೀಲ್ದಾರ್, ಸಿಂದಗಿ

