ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಡಿಜಿಟಲ್ ಸ್ಮಾರ್ಟ್ ತರಗತಿಗಳು ಮಕ್ಕಳ ಭವಿಷ್ಯ ವೃದ್ಧಿಗೆ ತುಂಬಾ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಇದರ ಉಪಯೋಗವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಇಂದಿನ ತಾಂತ್ರಿಕ ಯುಗಕ್ಕೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಮ್.ಪಾಟೀಲ, ಗಣಿಹಾರ ಹೇಳಿದರು.
ಸಿಂದಗಿ ಪಟ್ಟಣದ ಅಂಜುಮನ್ ಐಟಿಐ ಕಾಲೇಜಿನಲ್ಲಿ ನಡೆದ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಹಾಗೂ ಸೇವಿಂಗ್ ಟೆಕ್ನಾಲಜಿ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಅಂಜುಮನ್ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ಐಟಿಐ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಹ ವಾತಾವರಣ ನಿರ್ಮಾಣಮಾಡವ ನಿಟ್ಟಿನಲ್ಲಿ ಸಂಸ್ಥೆ ಶ್ರಮವಹಿಸಿದೆ.ಈ ಭಾಗದ ವಿದ್ಯಾರ್ಥಿಗಳಿಗೂ ಪ್ರಸ್ತುತ ಡಿಜಿಟಲ್ ಶಿಕ್ಷಣ ತುಂಬಾ ಅವಶ್ಯವಾಗಿದೆ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ತಾಂತ್ರಿಕ ಕೌಶಲ್ಯಕ್ಕೆ ಪ್ರಸ್ತುತ ಡಿಜಿಟಲ್ ಶಿಕ್ಷಣ ತುಂಬಾ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ಹಾಗೂ ಸೇವಿಂಗ್ ಟೆಕ್ನಾಲಜಿ ಸೇರಿದಂತೆ ಎಲ್ಲಾ ವೃತ್ತಿಗಳಿಗೆ ನೂತನ ಯಂತ್ರೋಪಕರಣಗಳ ಸೌಲಭ್ಯವನ್ನು ಒದಗಿಸಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಉದ್ಯೋಗ ಪಡೆದು ಪಾಲಕರ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.
ಈ ವೇಳೆ ಪ್ರಾಚಾರ್ಯ ಝಡ್.ಐ.ಅಂಗಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರ ಎ.ಐ.ಮುಲ್ಲಾ, ಮಹಿಬೂಬ್ ಹಸರಗುಂಡಗಿ, ಝಡ.ಐ.ಅಂಗಡಿ, ನಗರಸಭೆ ನಾಮನಿರ್ದೇಶಿತ ಸದಸ್ಯ ರಹೀಂ ದುದನಿ. ತರಬೇತಿ ಅಧಿಕಾರಿ ಹೆಚ್.ಎ.ಪಠಾಣ, ಕಿರಿಯ ತರಬೇತಿ ಅಧಿಕಾರಿ ಎಸ್.ಆರ್. ಕುಲಕರ್ಣಿ, ಎಸ್.ಜಿ.ಕುಂಬಾರ, ಐ.ಎಚ್. ಬಂಥನಾಳ, ವಾಯ್.ಆರ್.ಪಂಚಾಳ, ಎಸ್.ಎಸ್. ಜನಾದ್ರಿ, ಆರ್.ಬಿ.ಶೆಟ್ಟಿ, ಮಧುಮತಿ ಕೋಮಾರ, ಎಸ್.ಎನ್.ಅವಟಿ, ಸಂತೋಷಕುಮಾರ, ಎಂ.ವ್ಹಿ. ಪಟ್ಟಣಶೆಟ್ಟಿ, ಕಚೇರಿ ಅಧೀಕ್ಷಕ ಅಲ್ತಾಫ್ ಅಂಗಡಿ, ಧರ್ಮೇಂದ್ರ ನಾರಾಯಣಕರ್, ಎಸ್.ಆರ್.ರಾಠೋಡ ಸೇರಿದಂತೆ ಪ್ರಮುಖರು, ಗಣ್ಯರು ಹಾಗೂ ಸಿಬ್ಬಂದಿವರ್ಗ ಇದ್ದರು.

