ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಜಾಲಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನ.4ರಂದು ಜಾಲಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.
ಹಿರಿಯರ ವಿಭಾಗದಲ್ಲಿ ರಾಹುಲ ರಾಜಪ್ಪ ಕಾಂಬಳೆ (ಪ್ರಬಂಧ ಸ್ಪರ್ಧೆ), ಪ್ರಿಯಾಂಕ ಸಿದ್ದನಗೌಡ ಪಾಟೀಲ (ಧಾರ್ಮಿಕ ಪಠಣ), ರೂಪಾ ಅಮಿತ ಚವ್ಹಾಣ (ಅಭಿನಯ ಗೀತೆ), ಸಾನ್ವಿ ಸಂದಿಮನಿ (ಆಶುಭಾಷಣ), ಕೀರ್ತಿ ಹಂಡಗಿ (ಚಿತ್ರಕಲೆ) ಪ್ರಥಮ ಸ್ಥಾನ ಪಡೆದರು.
ಕಿರಿಯರ ವಿಭಾಗದಲ್ಲಿ ದೀಕ್ಷಾ ಹೊಸಮನಿ (ಕನ್ನಡ ಕಂಠಪಾಠ), ಪಲ್ಲವಿ ತಿಪ್ಪಣ್ಣ ಸಂದಿಮನಿ (ಚಿತ್ರಕಲೆ), ಸಮಂತಾ ದೊಡಮನಿ (ಛದ್ಮವೇಷ), ಸ್ವಾತಿ ದೊಡಮನಿ (ಕಥೆ ಹೇಳುವುದು) ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಗ್ರಾಮದ ಗುರುಹಿರಿಯರು, ಶಾಲೆಯ ಮುಖ್ಯಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

