ಸಿಂದಗಿಯಲ್ಲಿ 37 ದಿನಗಳಿಂದ ನಡೆಯುತ್ತಿರುವ ಧರಣಿಯಲ್ಲಿ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಣ ಉದ್ಯೋಗ ಆರೋಗ್ಯ ಮೂಲ ಸೌಕರ್ಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ರಾಜ್ಯದ ಇತರೆ ಭಾಗಗಳೊಂದಿಗೆ ವಿಜಯಪುರ ಜಿಲ್ಲೆಯ ಸಂಪೂರ್ಣವಾಗಿ ಅಭಿವೃದ್ಧಿ ಕುಂಟಿತ ಹೊಂದಿದೆ ಕಾರಣ 371 ಮೀಸಲಾತಿ ನೀಡಲು ಸರಕಾರ ಮುಂದಾಗಬೇಕು ಎಂದು ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಆಗ್ರಹಿಸಿದರು.
ನಗರದ ಬಸವೇಶ್ವರ ಸರ್ಕಲ್ ಹತ್ತಿರ, ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ 371 (ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ 37 ದಿನಗಳಿಂದ ನಡೆದ ಧರಣಿಯಲ್ಲಿ ಶಿವಾಚಾರ್ಯರು ಒಕ್ಕೂಟದೊಂದಿಗೆ ಬೆಂಬಲಿಸಿ ಅವರು ಮಾತನಾಡಿದರು.
ಸಿಂದಗಿ ಸಾರಂಗಮಠದ
ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ವಿಜಯಪುರ ಜಿಲ್ಲೆಯು ಎಲ್ಲ ರೀತಿಯಿಂದಲೂ ಹಿಂದೆ ಬಿದ್ದಿದೆ. ಸದ್ಯ ನಡೆಯುವ ಹೋರಾಟ ಸೌಲಭ್ಯ ಸಿಗುವವರೆಗೂ ನಿಲ್ಲುವುದಿಲ್ಲ. ಸರ್ಕಾರ ಮಧ್ಯ ಪ್ರವೇಶಿಸಿ ಕಲ್ಯಾಣ ಕರ್ನಾಟಕದಲ್ಲಿ ಹೆಸರು ಸೇರಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ , ಮಾಣಗೇರಿ ವಿಶ್ವರಾಧ್ಯ ಶಿವಾಚಾರ್ಯರು, ಹತ್ತಿಳ್ಳಿ ಗುರುಪಾದಯ್ಯ ಶಿವಾಚಾರ್ಯರು, ಯಂಕಂಚಿ ರುದ್ರಮುನಿ ಶಿವಾಚಾರ್ಯರು, ಹಿರೂರ ಜಯಸಿದ್ದೇಶ್ವರ ಶಿವಾಚಾರ್ಯರು, ತಡವಲಗ ರಾಚೋಟೇಶ್ವರ
ಶಿವಾಚಾರ್ಯರು, ಕನ್ನೊಳ್ಳಿ ಸಿದ್ದಲಿಂಗ ಶಿವಾಚಾರ್ಯರು, ರೂಡಗಿ ಮಡಿವಾಳ ಸ್ವಾಮಿಗಳು, ಆಲಮೇಲ ಸಂಗನಬಸವ ಶಿವಾಚಾರ್ಯರು, ತಾರಪೂರ ಗುರುಲಿಂಗೇಶ್ವರ ಶಿವಾಚಾರ್ಯರು, ಚಡಚಣ ಷಡಕ್ಷರಿ ಸ್ವಾಮಿಗಳು, ಕಲಕೇರಿ ಮಡಿವಾಳೇಶ್ವರ ಶಿವಾಚಾರ್ಯರು, ಅಗರಖೇಡ ಪ್ರಭುಲಿಂಗ ಸ್ವಾಮಿಗಳು, ಜೈನಾಪುರ ರೇಣುಕ ಶಿವಾಚಾರ್ಯರು, ಹಾವಿನಾಳ ವಿಜಯಮಹಾಂತೇಶ್ವರ ಶಿವಾಚಾರ್ಯರು, ನೀಲೂರ ಶಿವರುದ್ರ ಶಿವಾಚಾರ್ಯರು, ಗೋಳಸಾರ ಅಭಿನವ ಪುಂಡಲಿಂಗ ಸ್ವಾಮಿಗಳು, ಭಂಥನಾಳ ಸಂಗನಬಸವದೇವರು, ಕಡಣಿ ರೇವಣಸಿದ್ದ ಶಿವಾಚಾರ್ಯರು, ಬೋರಗಿ-ಪುರದಾಳ ಮಹಾಲಿಂಗೇಶ್ವರ ಸ್ವಾಮಿಗಳು, ಕರಬಂಟನಾಳ ಶಿವಕುಮಾರ ಸ್ವಾಮಿಗಳು, ಮುಳವಾಡ ವಿರುಪಾಕ್ಷ ಶಿವಾಚಾರ್ಯರು, ಢವಳಗಿ ಘನಮರೇಶ್ವರ ಸ್ವಾಮಿಗಳು, ಕುಂಟೋಜಿ ರುದ್ರಮುನಿ ಸ್ವಾಮಿಗಳು, ಹೋರಾಟ ಸಮಿತಿಯ ಅಶೋಕ ಅಲ್ಲಾಪೂರ, ವಕೀಲ ದಾನಪ್ಪಗೌಡ ಚನಗೊಂಡ, ಶೈಲಜಾ ಸ್ಥಾವರಮಠ, ಗುರುರಾಜ್ ಪಡಶೆಟ್ಟಿ, ಸಿದ್ದರಾಮ ಪಾಟೀಲ, ಸಾಯಬಣ್ಣ ದೇವರಮನಿ, ಪಂಡಿತ ಯಂಪುರೆ, ಎಂ. ಎಂ. ಹಂಗರಗಿ, ಸಂಗಣ್ಣ ಬ್ಯಾಕೋಡ, ಆನಂದ ಶಾಬಾದಿ, ಶಂಕರ ಮಲ್ಲೇದ, ಸಿದ್ದು ಕಡಗಂಚಿ, ಅಂಬರೀಶ್ ಸುಣಗಾರ, ಆರೀಫ ಅಂತರಗಂಗಿ, ಸತೀಶ ಕೌಲಗಿ, ಚಿಕ್ಕಸಿಂದಗಿ ಶಂಕರಲಿಂಗ ಹೆಬ್ಬಾಳ, ಪರಮಾನಂದ ಬಗಲಿ, ಬಾಬು ಓಲೇಕಾರ ಇದ್ದರು.

