Author: editor.udayarashmi@gmail.com

ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮಾನವ ಬಂದುತ್ವ ವೇದಿಕೆಯಿಂದ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬಿಸ್ಕಟ್ ವಿತರಿಸಿ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮನುಷ್ಯನಿಗೆ ಪೂರಕವಾಗಿರುವ ಹಬ್ಬಗಳಲ್ಲಿನ ಕೆಲ ಆಚರಣೆಗಳು ಮೂಢನಂಬಿಕೆಗೆ ಪ್ರಚೋದಿಸುತ್ತವೆ. ಇದನ್ನು ತಡೆಗಟ್ಟಲು ನಾಗರ ಪಂಚಮಿಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮಾನವ ಬಂದುತ್ವ ವೇದಿಕೆಯಿಂದ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬಿಸ್ಕಟ್ ನೀಡುವುದರ ಮೂಲಕ ಬಸವ ಪಂಚಮಿಯನ್ನು ಆಚರಿಸಲಾಯಿತು.ಜಿಲ್ಲಾ ಘಟಕ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸನಗೌಡ ಹರನಾಳ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿ ಮಾತನಾಡಿದ ಅವರು, ಇಂದು ಬುಧವಾರ ಬಸವಣ್ಣನವರು ಲಿಂಗೈಕ್ಯವಾದ ದಿನವಾಗಿದೆ. ಅವರ “ಕಲ್ಲ ನಾಗರ ಕಂಡರೆ ಹಾಲನೆರೆಯಂಬರು; ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯಾ” ನುಡಿಯಂತೆ ದೇವಸ್ಥಾನಗಳಲ್ಲಿ ಕಲ್ಲ ನಾಗರಹಾವಿಗೆ ಹಾಲೆರೆಯುತ್ತಾರೆ. ಆದರೆ, ನಿಜ ಹಾವನ್ನು ಕಂಡರೆ ಹೊಡೆಯುತ್ತಾರೆ ಏಕೆ? ಇದರ ಬದಲಾಗಿ ಹಸಿದವರಿಗೆ, ಅನಾರೋಗ್ಯ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲನ್ನು ನೀಡಿದರೆ ಬಡವರಿಗೆ…

Read More

ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದ ಬಾಲವಿಕಾಸ ಅಕಾಡೆಮಿ ಆಧ್ಯಕ್ಷ ಸಂಗಮೇಶ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ಶಾಲೆಗಳಲ್ಲಿ ಶಿಸ್ತು ಮತ್ತು ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿದಾಗ ಮಾತ್ರ ಗುಣಮಟ್ಟದ ಶಿಕ್ಷಣವನ್ನು ನಿಮ್ಮಿಂದ ನಿರೀಕ್ಷಿಸಲು ಸಾದ್ಧ್ಯವಾಗುತ್ತದೆ. ಮಕ್ಕಳಿಗೆ ಶಿಸ್ತು ಮತ್ತು ಸಮಯಪಾಲನೆಯನ್ನು ಜೊತೆಗೆ ಸಂಸ್ಕಾರ ನೀಡಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡುವಂತೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಆಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಶಿಕ್ಷಕರಿಗೆ ಕಿವಿಮಾತು ಹೇಳಿದರು.ಕೊಲ್ಲಾರ ಪಟ್ಟಣದ ರಾಣಿ ಚನ್ನಮ್ಮ ವಸತಿಶಾಲೆಗೆ ಭೇಟಿ ನೀಡಿ, ಅಲ್ಲಿರುವ ವ್ಯವಸ್ಥೆ ಪರಿಶೀಲಿಸಿ ಅವರು ಮಾತನಾಡಿದರು.ನಂತರ ಎಸ್ ಎಸ್ ಎಲ್ ಸಿ ಮಕ್ಕಳ ಕ್ಲಾಸ್ ರೂಮಗೆ ತೆರಳಿ ಪರೀಕ್ಷೆ ತಯಾರಿಯ ಬಗ್ಗೆ, ಪರೀಕ್ಷೆಯನ್ನು ಹೇಗೆ ಭಯಮುಕ್ತವಾಗಿ ಎದುರಿಸಬೇಕೆನ್ನುವ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯರು, ಶಿಕ್ಷಕರು ವಿದ್ದ್ಯಾರ್ಥಿಗಳು ಉಪಸ್ಥಿತರಿದ್ದರು. ಮಕ್ಕಳೊಂದಿಗೆ ಬಿಸಿಯೂಟ ಸವಿದ ಬಬಲೇಶ್ವರ ಕೊಲ್ಲಾರ ಪಟ್ಟಣದ ರಾಣಿ ಚನ್ನಮ್ಮ ವಸತಿಶಾಲೆಗೆ ಭೇಟಿ ನೀಡಿದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಆಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು, ಅಲ್ಲಿರುವ…

Read More

ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರದನಿ ವಾಸಿಗಳ ಸಮಸ್ಯೆ ಆಲಿಸಿದ ಸಚಿವ ಶಿವಾನಂದ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನಾ ಬಾಧಿತರಾದ ನಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಹಾಗೂ ಸಂತೃಪ್ತ ಪರಿಹಾರ ಕಂಡುಕೊಟ್ಟಿದ್ದೀರಿ. ಯೋಜನಾ ನಿರಾಶ್ರಿತರ ಬಗ್ಗೆ ನಿಮಗಿರುವ ಕಾಳಜಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಸಚಿವ ಶಿವಾನಂದ ಪಾಟೀಲ ಅವರ ಸ್ಪಂದನೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರದ ನಿರಾಶ್ರಿತರು ಕೃತಜ್ಞತಾ ಭಾವ ವ್ಯಕ್ತಪಡಿಸಿದ ಘಟನೆ ಜರುಗಿತು.ನಿಡಗುಂದಿ ತಾಲೂಕ ಕೇಂದ್ರಕ್ಕೆ ಹೊಂದಿಕೊಂಡಿರುವ ಕಮದಾಳ ಪುನರ್ವಸತಿ ಕೇಂದ್ರದ ಶಾಲಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳಿದ್ದ ಸಚಿವರು, ಅನಿರೀಕ್ಷಿತವಾಗಿ ಸಂತ್ರಸ್ತರ ಅಹವಾಲು ಆಲಿಸಲು ಮುಂದಾದರು.ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರೀ ಜಲಾಶಯದ ಹಿನ್ನೀರಿಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊಲ-ಮನೆ, ಕೃಷಿ ಅವಲಂಬಿತ ಎಲ್ಲ ಬದುಕನ್ನು ಕಳೆದುಕೊಂಡ ನಮ್ಮನ್ನು ನಿಮ್ಮ ಮಡಿಲಿಗೆ ತಂದು ಹಾಕಿದ್ದಾರೆ. ನಿಡಗುಂದಿ ಭಾಗಕ್ಕೆ ಬಂದ ಮೇಲದ ಈ ಪುನರ್ವಸತಿ ಕೇಂದ್ರಕ್ಕೆ ಬಂದ ಮೇಲೆ ಕಷ್ಟದ ದಿನಗಳನ್ನು…

Read More

ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಬಂದರೂ ಯೋಜನೆಗೆ ಬುದುಕು ಕಳೆದುಕೊಂಡ ವಿಜಯಪುರ-ಬಾಗಲಕೋಟೆ ತ್ಯಾಗಿಗಳ ಜಿಲ್ಲೆಗೆ ನೀರಾವರಿ ವಿಷಯದಲ್ಲಿ ಇನ್ನೂ ನ್ಯಾಯ ಸಿಕ್ಕಿಲ್ಲ. ಅವಳಿ ಜಿಲ್ಲೆಗಳ ಸಮಗ್ರ ನೀರಾವರಿಗಾಗಿ 82 ಟಿಎಂಸಿ ಅಡಿ ನೀರು ಇನ್ನೂ ಬಳಕೆಯಾಗಿಲ್ಲ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ವಿಷಾದ ವ್ಯಕ್ತಪಡಿಸಿದರು.ಮಂಗಳವಾರ ನಿಡಗುಂದಿ ಪಟ್ಟಣದ ಕಮದಾಳ ಗ್ರಾಮದಲ್ಲಿ ಶಾಲಾ ಕೋಠಡಿಗಳ ಉದ್ಘಾಟನೆ ಸಮಾರಂಭದಲ್ಲಿ ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಆಲಮಟ್ಟಿಯ ಲಾಲ ಬಹಾದ್ದರೂ ಶಾಸ್ತ್ರೀ ಜಲಾಶಯ ನಿರ್ಮಾಣಕ್ಕೆ ಅವಿಭಜಿತ ವಿಜಯಪುರ ಜಿಲ್ಲೆಯ ಲಕ್ಷಾಂತರ ಎಕರೆ ಜಮೀನು, ನೂರಾರು ಗ್ರಾಮಗಳ ಲಕ್ಷಾಂತರ ಸಂತ್ರಸ್ತರು ಬದುಕು ತ್ಯಾಗ ಮಾಡಿದ್ದಾರೆ. ಆದರೆ ಯೋಜನೆಯ ಬಾಧಿತ ತ್ಯಾಗಿಗಳ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಂಡಿಲ್ಲ. ನಮ್ಮ ಪಾಲಿನ 82 ಟಿಂಎಂಸಿ ಅಡಿ ನೀರು…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಶರಣ ಮಾಸದ ಆರನೆಯ ದಿನದ ಅನುಭಾವ ಮಾಲಿಕೆಯಲ್ಲಿ ಡಾ. ಮಲ್ಲಿಕಾರ್ಜುನ ಮೇತ್ರಿ ಅವರು ಕರ್ನಾಟಕದ ಗಾಂಧಿ ಎಂದೇ ಹೆಸರಾದ ಹರ್ಡೇಕರ ಮಂಜಪ್ಪ ಅವರ ಬಗೆಗೆ ಅತ್ಯಂತ ಸವಿಸ್ತಾರವಾಗಿ ತಮ್ಮ ಅನುಭಾವವನ್ನು ನೀಡಿದರು.ಹರ್ಡೇಕರ ಮಂಜಪ್ಪನವರು ಶಿಕ್ಷಕರು, ನಿರಂಜನ ಶರಣರು, ಜನಸೇವಕರು, ಧೀಮಂತ ಪತ್ರಕರ್ತ, ರಾಷ್ಟ್ರಪ್ರೇಮದ ಮಂದಾರ ಎಂದು ಮನದುಂಬಿ ಹೇಳುತ್ತಾ, ಬನವಾಸಿ ಮೂಲದವರಾದ ಅವರ ತಂದೆ ಸಖಾರಾಮ ಅಭ್ಯoಕರ ಮತ್ತು ತಾಯಿ ಮಂಜಮ್ಮ ಹರ್ಡೇಕರ ಅವರ ಬಗೆಗೆ ಹೊಸ ಬೆಳಕನ್ನು ಚೆಲ್ಲಿದರು. ಅವರ ಬಾಲ್ಯದ ಶಿಕ್ಷಣ ಮತ್ತು ಅವರಲ್ಲಿ ಸ್ವಾತಂತ್ರದ ಅಭಿರುಚಿ ಹುಟ್ಟಿ, ಅದು ಅವರ ಜೀವನದಲ್ಲಿ ಹೇಗೆ ಒಂದು ಅಗಾಧವಾದ ತಿರುವು ಪಡೆಯಿತು ಎನ್ನುವುದನ್ನು ಅಭಿಮಾನದಿಂದ ತಿಳಿಸಿದರು ಭಾರತ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದಾಗ,ಜನರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಹುರಿದುಂಬಿಸುವ ಕೆಲಸವನ್ನು ಮಂಜಪ್ಪನವರು ಸ್ವಾತಂತ್ರ ಚಳುವಳಿಯಲ್ಲಿ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುವದರ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡ ರಾಷ್ಟ್ರಪ್ರೇಮಿ ಮತ್ತು ಸಮಾಜಪ್ರೇಮಿ,ಲೋಕಮಾನ್ಯ ತಿಲಕರ…

Read More

ಲೇಖನ- ದುಂಡೇಶ್ ಕೆ.ಬಿಹವ್ಯಾಸಿ ಬರಹಗಾರರುವಿಜಯಪುರ ಜಿಲ್ಲೆಮೋ. 9964502514 ಉದಯರಶ್ಮಿ ದಿನಪತ್ರಿಕೆ ಒಂದಷ್ಟು ಅಂಶಗಳನ್ನು ನಾವು ಯಥಾವತ್ತಾಗಿ ಪಾಲಿಸಬೇಕು ಕಾರಣ ಬದುಕಲು ಒಂದು ಮಾರ್ಗದ ಅವಶ್ಯವಿದೆ. ಹೀಗೆ ಬದುಕಬೇಕು ಎಂದಾಗ ಬದುಕು ಮಾದರಿಯಾಗುತ್ತದೆ. ಬದುಕನ್ನು ಎಲ್ಲರೂ ಬದುಕುತ್ತಾರೆ. ಅದು ಕ್ರಮಬದ್ದವಾಗಿ ಇರಬೇಕು ಅಂದಾಗ ಅದು ಸಫಲತೆಯ ಬದುಕಾಗಿ ನಿರ್ಮಾಣವಾಗುತ್ತದೆ. ಒಂದಷ್ಟು ಅಂಶಗಳನ್ನು ಮೆಲಕು ಹಾಕೋಣ. 1) ಬದುಕು ಅನಿವಾರ್ಯಯಾವ ಸನಿಹವಾದ ವ್ಯಕ್ತಿಯೂ ನಮ್ಮ ಅನಿವಾರ್ಯಕ್ಕೆ ಇರುವರೋ, ಅವಶ್ಯಕತೆಗೆ ತಕ್ಕಂತೆ ಬದಲಾಗುವರೋ ಅದನ್ನು ಕಂಡಾಗ ನಾವು ಕಂಡುಕೊಳ್ಳುವುದು ಒಂದೇ ನಮ್ಮ ಸಂದರ್ಭಕ್ಕೆ ನಾವೇ ರೂವಾರಿ. ಅಣುಕಿಸುವರ ಮಧ್ಯೆ ಇದ್ದು ಸೆಟದು ಸಂಭ್ರಮಿಸಬೇಕು. ಈ ಅನಿವಾರ್ಯದಲ್ಲಿ ಕಲಿಕೆ, ಸಂಬಂಧ, ಜವಾಬ್ದಾರಿ ಇವುಗಳಲ್ಲಿ ಎಲ್ಲರೂ ಅನಿವಾರ್ಯವಾಗಿ ಬೇಕೇ ಬೇಕು. ಅನೇಕ ಅನುಭವಗಳನ್ನು ಎದುರಿಸಿ, ಕಲಿತು ಮುಂದುವರೆದು ಜೀವನ ನಡೆಸುವುದು, ಹಾಗೆ ಒಂದು ಕಡೆ ಹುಟ್ಟು ಇನ್ನೊಂದು ಕಡೆ ಕೊನೆ ಎಂದು ಪ್ರತಿ ಕ್ಷಣ ಉಸಿರಾಡುತ ಬದುಕು ಸವೆಸುವ ನಾವು ಅನಿವಾರ್ಯದ ಕೊರತೆಯಿಂದ ಕ್ಷಣ ಕ್ಷಣದ ಆನಂದವನ್ನು ಮರೆಯುತ್ತೇವೆ.…

Read More

ಜೋಕಾಲಿ ಹಾಗೂ ಪೂಗಾಡಿ ಆಟವಾಡಿ ಬೀಗಿದ ಹೆಂಗಳೆಯರು ಉದಯರಶ್ಮಿ ದಿನಪತ್ರಿಕೆ ಚಡಚಣ: ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯ ಐದನೇ ದಿನದಂದು ಆಚರಿಸುವ ನಾಗರ ಪಂಚಮೀ ಹಬ್ಬವನ್ನು ರೇವತಗಾಂವ ಗ್ರಾಮದಲ್ಲಿ ಮಂಗಳವಾರದಂದು ಸಂಭ್ರಮದಿಂದ ಆಚರಿಸಲಾಯಿತು.ಇಲ್ಲಿನ ನಾಗ ದೇವತೆ ಹುತ್ತಕ್ಕೆ ಮಹಿಳೆಯರು ವಿಶೇಷವಾಗಿ ಪೂಜೆ ಸಲ್ಲಿಸಿದರಲ್ಲದೆ, ನಾಗದೇವತೆಗೆ ಆರತಿ ಬೆಳಗಿ, ಹಾಲೆರೆದು, ಐದೆಳೆ ದಾರದ ನೂಲ ಸುತ್ತಿ, ಆ ದಾರವನ್ನು ತಮ್ಮ ಕೊರಳಲ್ಲಿಯೂ ಧರಿಸಿದರು.ಇನ್ನು ಕೆಲವರು ತಮ್ಮ ಮನೆಯ ಜಗುಲಿ ಮೇಲೆ ನಾಗ ದೇವತೆ ಪ್ರತಿಷ್ಠಾಪಿಸಿ, ಹಾಲೆರೆದು ಪೂಜೆ ಸಲ್ಲಸಿ ನೈವೇದ್ಯ ಅರ್ಪಿಸಿದರು. ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಮನೆಯಂಗಳದ ಬೃಹತ್ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟದ್ದು ಅಲ್ಲಲ್ಲಿ ಕಂಡು ಬಂದಿತು. ಮಕ್ಕಳು, ಮಹಿಳೆಯರು, ವಯಸ್ಕರರು ಸರದಿಯಂತೆ ಜೋಕಾಲಿ ಜೀಕಿ ಸಂಭ್ರಮಿಸಿದರು. ಒಬ್ಬರು, ಇಬ್ಬರು ಜೋಕಾಲಿಯಲ್ಲಿ ಜಿಕಿದರೆ, ಇನ್ನುಳಿದವರು ಬದುಕಿನ ಸಾರ ಹೇಳುವ ಜಾನಪದ ಹಾಡುಗಳನ್ನು ಹಾಡಿದರು. ಈ ವೇಳೆ ಕೆಲವರು ಪೂಗಾಡಿ ಆಟವಾಡಿ ಸಂಭ್ರಮಿಸಿದರು. ಗ್ರಾಮದ ಯುವಕರು ನಿಂಬೆ ಹಣ್ಣು ಎಸೆಯುವ, ಕಣ್ಮುಚ್ಚು,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯ ಅಂಗವಾಗಿ ಮಹಿಳೆಯರು ವಿವಿಧ ದೇವಾಲಯಗಳಲ್ಲಿನ ನಾಗರ ಪ್ರತಿಮೆಗೆ ಭಕ್ತಿಯಿಂದ ಹಾಲೇರೆದು ಪೂಜಿಸಿದರು.ಪಟ್ಟಣದಲ್ಲಿ ಮಂಗಳವಾರದಂದು ದೇವಸ್ಥಾನದ ಆವರಣ, ಮಠ ಸೇರಿದಂತೆ ವಿವಿಧೆಡೆ ಇರುವ ನಾಗ ಪ್ರತಿಷ್ಠಾಪನೆಯ ಸ್ಥಳಗಳಿಗೆ ಹೂ,ಹಾರ, ಹಾಲು, ನೈವಿಧ್ಯಗಳೊಂದಿಗೆ ತೆರಳಿ “ ದೇವರ ಪಾಲು, ಗುರುವಿನ ಪಾಲು, ಹಿರಿಯರ ಪಾಲು, ಸರ್ವರ ಪಾಲು ಎಂದು ಹೇಳುತ್ತಾ ಮಕ್ಕಳೊಂದಿಗೆ ನಾಗರ ಪ್ರತಿಮೆಗೆ ಹಾಲು ಎರೆದು ಪೂಜೆ ಸಲ್ಲಿಸಿದರು.ನಾಗರಪಂಚಮಿಯ ಮೊದಲ ದಿನವಾದ ಸೋಮವಾರ ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಮನೆಮನೆಗಳಲ್ಲಿ ಹಾಲು ಎರೆದು ಒಂದುಹೊತ್ತಿನ ಉಪವಾಸ ವೃತ ಮಾಡುವುದರ ಮೂಲಕ ಹಬ್ಬದ ಆಚರಣೆ ಆರಂಭಿಸಿದರು. ಸಾಯಂಕಾಲ ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿದ ಹಲವು ಬಗೆಯ ಲಾಡು, ಕರ್ಜಿಕಾಯಿ, ಅವಲಕ್ಕಿಚೂಡ, ಚಕ್ಕುಲಿ ಸಹಿತ ವಿವಿಧ ತಿಂಡಿಗಳನ್ನು ಆಪ್ತರು, ಸಂಬಂಧಿಗಳ ಮನೆಮನೆಗೆ ತೆರಳಿ ನೀಡುವ ಮೂಲಕ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ತೋರಿದರು.ಇಂದು ಎರಡನೆಯ ದಿನ ಹೊರಗಿನ ನಾಗರ ಪ್ರತಿಮೆಗಳಿಗೆ ಹಾಲು ಎರೆಯುವ ಸಂಪ್ರದಾಯವನ್ನು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದೇವರಹಿಪ್ಪರಗಿ ಹಾಗೂ ಕಲಕೇರಿ ವಲಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಅಗಷ್ಟ ೨ ರಂದು ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದು ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ.ಯಡ್ರಾಮಿ ಹೇಳಿದರು.ಪಟ್ಟಣದ ಶಾಸಕರ ಮಾದರಿ ಗಂಡುಮಕ್ಕಳ ಶಾಲೆಯಲ್ಲಿ ಸೋಮವಾರ ಜರುಗಿದ ಗುರುಸ್ಪಂದನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದÀರು, ಶಿಕ್ಷಕರು ತಮ್ಮ ಸೇವಾಪುಸ್ತಕಗಳನ್ನು ಅವಲೋಕಿಸುವ ಮೂಲಕ ಏನಾದರು ಸಮಸ್ಯೆಗಳಿದ್ದರೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ.ಎಸ್.ಬೇವನೂರ ಮಾತನಾಡಿ, ತಾಲ್ಲೂಕಿನ ಶಿಕ್ಷಕರ ಸಂಘದಿಂದ ನಮ್ಮ ಅವಧಿಯಲ್ಲಿ ಎರಡನೇಯ ಬಾರಿಗೆ ಗುರುಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿಕ್ಷಕರು ತಮ್ಮೇಲ್ಲ ಕುಂದುಕೊರತೆಗಳನ್ನು ನೀಗಿಸಿಕೊಳ್ಳುವ ಸದಾವಕಾಶ ಕಲ್ಪಿಸಿಲಾಗಿದೆ ಎಂದರು.ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ ಮಾತನಾಡಿ, ಶಿಕ್ಷಕರ ವಾರ್ಷಿಕ ಬಡ್ತಿ ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯನ್ನು ನಮೂದಿಸಲಾಗುವುದು. ಒಟ್ಟಾರೆಯಾಗಿ ಕಚೇರಿಗಳಿಗೆ ಶಿಕ್ಷಕರ ಅಲೆದಾಟವನ್ನು ತಪ್ಪಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಶಿಕ್ಷಕರೆಲ್ಲರೂ ತಪ್ಪದೇ ಆಗಮಿಸಲು ತಿಳಿಸಿದರು.ಶಿಕ್ಷಕರಾದ ಶಿವಾನಂದ ಕೋಟಿನ್,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಡಗಾನೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಇಂದು(ಬುಧವಾರ) ಉದ್ಘಾಟನೆಗೊಳ್ಳಲಿದೆ.ತಾಲ್ಲೂಕಿನ ಪಡಗಾನೂರ ಗ್ರಾಮದಲ್ಲಿ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಬೆಳಿಗ್ಗೆ ೧೧ ಘಂಟೆಗೆ ಕಟ್ಟಡದ ಆವರಣದಲ್ಲಿ ಆರಂಭಗೊಳ್ಳಲಿದೆ. ಕರ್ನಾಟಕ ಸರ್ಕಾರದ ಸಕ್ಕರೆ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶಿವಾನಂದ ಪಾಟೀಲ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಜ್ಯೋತಿ ಬೆಳಗಿಸಲಿದ್ದು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಸಹಕಾರ ಧ್ವಜಾರೋಹಣ ಮಾಡಲಿದ್ದಾರೆ.ಕಡಗಂಚಿಯ ವೀರಭದ್ರಶ್ರೀಗಳು ಸಾನಿಧ್ಯ ವಹಿಸಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಸ್ಥಳೀಯ ವಿ.ಪ್ರಾ.ಗ್ರಾ.ಕೃ.ಸ.ಸಂಘದ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಸೋಮೇಶ್ವರ ದೇವಸ್ಥಾನ ಸಂಸ್ಥೆಯ ಅಧ್ಯಕ್ಷ ಅಯ್ಯಪ್ಪಯ್ಯ ಹಿರೇಮಠ, ಮುಳಸಾವಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಆಕಳವಾಡಿ, ಉಪಾಧ್ಯಕ್ಷೆ ಕಸ್ತೂರಿಬಾಯಿ ಹೊಸಟ್ಟಿ, ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಸಹಕಾರ ಸಂಘಗಳ ಉಪನಿಬಂಧಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆಡಳಿತ…

Read More