ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರಕಾರಿ ಪ್ರೌಢಶಾಲೆ ಭೂತನಾಳ ಎಲ್.ಟಿ. ನಗರವಲಯ ವಿಜಯಪುರ ಶಾಲೆಯ ವಿದ್ಯಾರ್ಥಿಗಳು 2025-26 ನೇ ಸಾಲಿನ “ಸಿದ್ದೇಶ್ವರ ಬಿ” ನಗರ ವಲಯ ವಿಜಯಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗುಂಪು ಆಟದಲ್ಲಿ ಭಾಗವಹಿಸಿ ಈ ಕೆಳಗಿನಂತೆ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
- ಬಾಲಕಿಯರ “ಕಬಡ್ಡಿ ಪ್ರಥಮ”
- ಬಾಲಕಿಯರ 4X100 ಮೀ ರಿಲೇ ಪ್ರಥಮ
- ಬಾಲಕಿಯರ 4×400 ಮೀ ರಿಲೇ ಪ್ರಥಮ 4. ಬಾಲಕರ “ಕಬಡ್ಡಿ ದ್ವಿತೀಯ”
- ಬಾಲಕರ 4×100 ಮೀ ರಿಲೇ ಪ್ರಥಮ
- ಬಾಲಕರ 4×400 ಮೀ ರಿಲೇ ಪ್ರಥಮ
ವೈಯಕ್ತಿಕ ಬಾಲಕರ ವಿಭಾಗದಲ್ಲಿ ಭಾಗವಹಿಸಿ ಈ ಕೆಳಗಿನಂತೆ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. - ಸಂದೀಪ ಧನಸಿಂಗ ಪವಾರ ಜಾವಲಿನ ಎಸೆತ ಪ್ರಥಮ, 200 ಮೀ ಓಟ ಪ್ರಥಮ ಹಾಗೂ ಉದ್ದ ಜಿಗಿತ ಪ್ರಥಮ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾನೆ. 2. ಕಾರ್ತಿಕ ಅನೀಲ ಚವ್ಹಾಣ 1500 ಮೀ ಓಟ ಪ್ರಥಮ, ಚಕ್ರ ಎಸೆತ ಪ್ರಥಮ ಮತ್ತು ಗುಂಡು ಎಸೆತ ಪ್ರಥಮ. 3. ಅಮಿತ ಪ್ರಕಾಶ ಚವ್ಹಾಣ 5 ಕೀ.ಮೀ ನಡಿಗೆ ದ್ವಿತೀಯ, ಮತ್ತು ಜಾವಲಿನ ಎಸೆತ ದ್ವಿತೀಯ. 4. ಪ್ರೀತಮ ಮೋಹನ ಚವ್ಹಾಣ ಚಕ್ರ ಎಸೆತ ದ್ವಿತೀಯ, ಮತ್ತು ಗುಂಡು ಎಸೆತ ದ್ವಿತೀಯ. 5. ರವಿ ಅನೀಲ ರಾಠೋಡ, 3000ಮೀ ಓಟ ತೃತೀಯ. 6. ಕಾರ್ತಿಕ ಸುರೇಶ ಚವ್ಹಾಣ 5 ಕೀಮೀ ನಡಿಗೆ ದ್ವಿತೀಯ. 7. ಅನೇಕತ ಅಶೋಕ ಚವ್ಹಾಣ 1500ಮೀ ಓಟ ತೃತೀಯ. 8. ರಾಹುಲ ಅಶೋಕ ರಾಠೋಡ 3000ಮೀ ಓಟ ದ್ವಿತೀಯ. ವೈಯಕ್ತಿಕ ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿ ಈ ಕೆಳಗಿನಂತೆ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
- ಸಂದ್ಯಾ ಆನಂದ ಚವ್ಹಾಣ 400ಮೀ ಓಟ ಪ್ರಥಮ, ಜಾವಲಿನ ಎಸೆತ ತೃತೀಯ, ಹಾಗೂ 100ಮೀ ಅಡತಡೆ ಓಟ ದ್ವಿತೀಯ ಸ್ಥಾನ ಪಡೆದು ವಿರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ. 2. ಪ್ರೀತಿ ಅಶೋಕ ಚವ್ಹಾಣ ಜಾವಲಿನ ಎಸೆತ ಪ್ರಥಮ ಮತ್ತು ಚಕ್ರ ಎಸೆತ ದ್ವಿತೀಯ.
- ಐಶ್ವರ್ಯ ಆನಂದ ಚವ್ಹಾಣ 200ಮೀ ಓಟ ಪ್ರಥಮ. 4. ಸೋನಿಯಾ ಸುರೇಶ ಚವ್ಹಾಣ 3 ಕೀಮೀ ನಡಿಗೆ ಪ್ರಥಮ. 5. ಪೂಜಾ ರಮೇಶ ಚವ್ಹಾಣ 3 ಕೀಮೀ ನಡಿಗೆ ತೃತೀಯ. 6. ರಿದಂ ಬಸವರಾಜ ಚವ್ಹಾಣ 800 ಮೀ ಓಟ ದ್ವಿತೀಯ. 7. ಕಲ್ಪನಾ ರಮೇಶ ರಾಠೋಡ ಚಕ್ರ ಎಸೆತ ದ್ವಿತೀಯ, ಹೀಗೆ ಪ್ರಶಸ್ತಿಗಳನ್ನು ಪಡೆದು ನಮ್ಮ ಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಕ್ಕಾಗಿ ನಮ್ಮ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ ಮಾನ್ಯ ರಾಜು, ಅ, ಚವ್ಹಾಣ, ಮತ್ತು ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಭೀಮು. ಅ. ಚವ್ಹಾಣ ಹಾಗೂ ಉಪಾಧ್ಯಕ್ಷರಾದ ಶಂಕರ, ಠಾ. ರಾಠೋಡ, ಹಾಗೂ ಮುಖ್ಯೋಪಾದ್ಯಾಯನಿರಾದ ಶ್ರೀಮತಿ.ಎಸ್.ಸ್.ಶಿಳಿನ., ದೈಹಿಕ ಶಿಕ್ಷಣ ಶಿಕ್ಷಕರಾದ.ಎಸ್.ಎಸ್.ಕವಡಿಮಟ್ಟಿ, ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಸಿದ್ದಾರೆ.