ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಾಧಕರ ಜನ್ಮದಿನವನ್ನು ಜಯಂತಿಯೆಂದು ಆಚರಿಸುತ್ತೇವೆ. ಸಾಧನೆ ಮಾಡುವುದು ಸ್ವಾರ್ಥಕ್ಕಾಗಿ ಅಲ್ಲ. ಸರ್ವರ ಒಳಿತಿಗಾಗಿ ಮಾಡುವುದು.ಅಂಥವರ ಸಾಲಿನಲ್ಲಿ ಶ್ರೇಷ್ಠ ಶಿಕ್ಷಕರು ಹಾಗೂ ರಾಷ್ಟ್ರಪತಿಗಳಾಗಿದ್ದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬರು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ ವಾಲಿಕಾರ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.
ಡಾ: ಸರ್ವಪಲ್ಲಿ ರಾಧಾಕೃಷ್ಣನರ ಜಯಂತಿಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಇದು ನಮ್ಮ ಸೌಭಾಗ್ಯ ಎಂದರು.
ಶಿಕ್ಷಕ ಬಸವರಾಜ ಕರಜಗಿ ಮಾತನಾಡಿ, ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವವರೇ ಶಿಕ್ಷಕರು. ಇಂದು ಅಂತಹ ಶಿಕ್ಷಕರನ್ನು ಸ್ಮರಿಸುವ ಹಾಗೂ ಗೌರವಿಸುವ ದಿನವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು. ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಹಾದೇವಿ ಕೇಶೆಟ್ಟಿ ಅವರು ಮುಖ್ಯ ಅತಿಥಿ ಸ್ಥಾನ ವಹಿಸಿದ್ದರು.
ಶಿಕ್ಷಕ ಜಗದೀಶ ಚಲವಾದಿ ನಿರೂಪಿಸಿದರು. ಶಿಕ್ಷಕ ಡಿ ಎಸ್ ಬಗಲಿ ಸ್ವಾಗತಿಸಿ ವಂದಿಸಿದರು.
ಶಿಕ್ಷಕರಾದ ಮಹಾದೇವ ಆದಿಗೊಂಡೆ, ಎಂ ಎಸ್ ನಿಂಬಾಳಕರ, ವ್ಹಿ ಎಸ್ ಪತ್ತಾರ, ಜಯಶ್ರೀ ಗೋಟ್ಯಾಳ,ಪ್ರೇಮಾ ಧೋತ್ರೆ ಹಾಗೂ ಅಡುಗೆ ಸಹೋದರಿಯರು,ಮಕ್ಕಳು ಉಪಸ್ಥಿತರಿದ್ದರು.