ಉದಯರಶ್ಮಿ ದಿನಪತ್ರಿಕೆ
ಝಳಕಿ: ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ವರ್ಷಗಳ ಹಿಂದೆ ಉದ್ಘಾಟನೆಗೊಂಡರೂ ಝಳಕಿ ಗ್ರಾಮದ ವಿದ್ಯಾರ್ಥಿ/ ವಿದ್ಯರ್ಥಿನಿಯರ ವಸತಿ ನೀಲಯಗಳು ಉಪಯೋಗಿಸದೆ ಕಿಡಿಗೇಡಿಗಳಿಗೆ, ನಾಯಿಗಳಿಗೆ ಉಪಯೋಗಿಸಲು ಅನುವು ಮಾಡಿದಂತಾಗಿದೆ ಎಂಬುದು ಝಳಕಿ ಗ್ರಾಮದ ಇಂಡಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಉಪಾಧ್ಯಕ್ಷ ಪ್ರಕಾಶಗೌಡ ಪಾಟೀಲ ಇವರ ಆರೋಪ.
ಸರ್ಕಾರ ಶಾಲಾ/ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಾಯ, ಸಹಕಾರ ಸಲುವಾಗಿ ಯೋಚನೆಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದರೂ ಇತ್ತ ಗಮನ ಹರಿಸದ ಸಂಬಂಧ ಪಟ್ಟ ಇಲಾಖೆ, ಈ ರೀತಿಯಾಗಿ ಹಣದ ದುರುಪಯೋಗ ಮಾಡೋದು ಸರಿಯಲ್ಲ, ಬಡ ವಿದ್ಯಾರ್ಥಿಗಳು ದಿನಾಲೂ ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ, ವಿದ್ಯಾರ್ಥಿಗಳಿಗೆ ಮಾತ್ರ ಅಲೆದಾಟ ತಪ್ಪದಾಗಿದೆ, ಇದನ್ನು ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹೋದಲ್ಲಿ ವಿದ್ಯಾರ್ಥಿಗಳು, ಪಾಲಕರು, ಸಂಘದ ಸದಸ್ಯರು ಹೋರಾಟ ಮಾಡುವುದಾಗಿ, ಬಾಲಕೃಷ್ಣ ಭೋಸಲೆ, ಪಿಂಟು ಹಾಡ್ಸoಗೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.