ಬಾವೊಬಾಬ್ ಮರಗಳ ಜೀವಿತಾವಧಿ ಸುಮಾರು 2000 ವರ್ಷಗಳು!
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ನಗರದ ಪಿ ಬಿ ಹೈಸ್ಕೋಲ್ ಆವರಣದಲ್ಲಿರುವ ಎರಡು ಬೃಹತ್ ಮರಗಳಿವೆ ಅವುಗಳ ಹೆಸರು ಬಾವೊಬಾಬ್ ಮರ ಅವುಗಳು ಸುಮಾರು 500 ವರ್ಷಗಳಷ್ಟು ಹಳೆಯದಾಗಿವೆ.
ಈ ಮರಗಳ ಡಿ.ಎನ್.ಎ (DNA) ಅಧ್ಯಯನಗಳ ಪ್ರಕಾರ ಇವುಗಳು ಮೊದಲು 21 ಮಿಲಿಯನ್ ವರ್ಷಗಳ ಹಿಂದೆ ಮಿಡ್ಗಾಸ್ಕರನಲ್ಲಿ ಕಂಡು ಬಂದಿವೆ. ಈ ಮರಗಳ ಬೀಜಗಳು ನಂತರ ಸಮುದ್ರದ ಪ್ರವಾಹದಲ್ಲಿ ಆಸ್ಟ್ರೇಲಿಯಾ ಹಾಗೂ ಆಫ್ರಿಕಾದ ಮುಖ್ಯ ಭೂ ಭಾಗಗಳಿಗೆ ಬಂದು ವಿಭಿನ್ನ ಜಾತಿಗಳಾಗಿ ವಿಕಸನಗೊಂಡಿವೆ.
ಬಾವೋಬಾಬ್ ಮರಗಳು ಅಡಾನ್ಸೋನಿಯಾ ಜಾತಿಗೆ ಸೇರಿದ್ದು, ಇದರಲ್ಲಿ 9 ಜಾತಿ ಮರಗಳಿವೆ, ಎರಡು ಆಫ್ರಿಕಾ, ಆರು ಮಡಗಾಸ್ಕರ ಮತ್ತು ಒಂದು ಆಸ್ಟ್ರೇಲಿಯಾಕ್ಕೆ ಸೇರಿದೆ. ಕೆಲವು ಪ್ರಬೇಧಗಳು ಭಾರತದಲ್ಲೂ ಕಂಡು ಬರುತ್ತವೆ, ಮಧ್ಯಪ್ರದೇಶ ಧಾರ ಜಿಲ್ಲೆಯ ಮಾಂಡು ಬಾವೊಬಾಬ್ ಮರಗಳು ಹೇರಳವಾಗಿ ಕಂಡು ಬರವು ಭಾರತದ ಏಕೈಕ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಅಂದಾಜು 1000 ಮರಗಳಿವೆ.
ಬಾವೊಬಾಬ್ ಮರಗಳ ಬೆಳೆವಣಿಗೆ
ಬಾವೊಬಾಬ್ ಮರಗಳು ಎತ್ತರಕ್ಕೆ ಹೆಸರುವಾಸಿಯಾಗಿದ್ದು 50 ಮೀಟರಗಳವರೆಗೆ ಈ ಮರಗಳು ಬೆಳೆಯುತ್ತವೆ. ಈ ಮರಗಳ ಜೀವಿತಾವಧಿಯ ಸುಮಾರು 2000 ವರ್ಷಗಳು. ಮರಗಳ ಸುತ್ತಳತೆ ದೊಡ್ಡ ಗಾತ್ರವಿದ್ದು, ಕಾಂಡದ ಮೇಲೆ ತೆಳುವಾದ ಸಿಪ್ಟಿಯ ರೀತಿಯ ತೊಗಟೆಯನ್ನು ಹೊಂದಿವೆ
ಪ್ರವಾಸಿಗರ ಪ್ರಮುಖ ಆಕರ್ಷಣೆ ಈ ಬಾವೊಬಾಬ್ ಮರ
ಅನೇಕ ಈ ದೈತ್ಯಾಕಾರದ ಮರಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಜನಪ್ರಿಯ ಪ್ರವಾಸಿಗರ ಆಕರ್ಷಣೆಯಾಗಿದೆ. ಪ್ರಯಾಣಿಕರು ಮಡಗಾಸ್ಕರ್ ಮತ್ತು ಆಫ್ರಿಕಾದಂತಹ ಪ್ರದೇಶಗಳಿಗೆ ಸೌಂದರ್ಯ ಹಾಗೂ ಈ ಮರಗಳ ಬಗ್ಗೆ ಅನ್ವೇಷಿಸಲು ಭೇಟಿ ನೀಡುತ್ತಾರೆ. ಇದರ ಜೊತೆಗೆ, ಕೆಲವು ಪ್ರದೇಶಗಳಲ್ಲಿ ಬಾವೊಬಾಬ್ ಗಳು ವಿಶಿಷ್ಟ ವನ್ಯಜೀವಿಗಳಿಗೆ ನೆಲೆಯಾಗಿದೆ. ಈ ಕಾರಣಕ್ಕೆ ಮರಗಳು ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ಒಂದು ಆಕರ್ಷಣೆಯಾಗಿದೆ.
ನೀರಿನ ಸಂಗ್ರಹ
ಬಾವೊಬಾಬ್ ಮರಗಳು ತಮ್ಮ ಕಾಂಡಗಳಲ್ಲಿ ಬೃಹತ್ ಪ್ರಮಾಣದ ನೀರನ್ನು ಸಂಗ್ರಹಿಸುತ್ತವೆ. ಇದು ಶುಷ್ಕ ಮತ್ತು ಬರಗಾಲದ ಪ್ರದೇಶಗಳಲ್ಲಿ ಬದುಕಲು ಸಹಾಯ ಮಾಡುತ್ತವೆ.

“ಇವುಗಳ ಗಾತ್ರ ನೋಡಿದರೆ ಇವು ನೂರಾರು ವರ್ಷಗಳ ಹಳೆಯದ್ದಾಗಿರಬೇಕು ಎನಿಸುತ್ತದೆ. ನಾನು ಸಹ ಇದೆ ಹೈಸ್ಕೂಲಿನ ವಿಧ್ಯಾರ್ಥಿಯಾಗಿದ್ದು, ಅಂದಿನಿಂದಲೂ ಈ ಮರಗಳ ಬಗ್ಗೆ ನನಗೆ ಕುತೂಹಲ ಇತ್ತು. ಇಡೀ ಭಾರತದಾದ್ಯಂತ ಕೆಲವೇ ಕೆಲವು ಈ ಮರಗಳು ಕಂಡು ಬರುತ್ತಿದ್ದು ಇಂದಿಗೂ ಸಹ ಆಶ್ಚರ್ಯ. ಭಾರತದ ವಿವಿಧ ಕಡೆ ಕಂಡುಬರುವ ಈ ಮರಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ.”
– ಚನ್ನಬಸು ಗುಣದಾಳ
ರಾಜ್ಯಶಾಸ್ತ್ರ ಉಪನ್ಯಾಸಕರು
ಜಮಖಂಡಿ