Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್‌ಎಸ್‌ಎಲ್‌ಸಿ ನಂತರದ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ಸ್ನಾತಕೊತ್ತರ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಹಾಗೂ ವಿಕಲಚೇತನರಿಗೆ ವಿವಾಹವಾದಲ್ಲಿ ನೀಡಲಾಗುವ ಪ್ರೋತ್ಸಾಹಧನಕ್ಕೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೆಪ್ಟೆಂಬರ್ ೩೦ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಜಗದೀಶ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ: ವಿಜಯಪುರ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮಾದರ ಮೊ: ೯೬೦೬೧೫೧೧೪೯, ವಿಜಯಪುರ ತಾಲೂಕ ಪಂಚಾಯತಿಯ ಸಂಯೋಜಕರಾದ ರವಿ ರಾಠೋಡ ಮೊ: ೯೦೩೫೫೫೩೩೩೭, ಇಂಡಿ ತಾಲೂಕ ಪಂಚಾಯತಿಯ ಸಂಯೋಜಕರಾದ ಪರಶುರಾಮ ಭೋಸಲೆ ಮೊ: ೯೯೭೨೪೪೧೪೬೪, ಸಿಂದಗಿ ತಾಲೂಕ ಪಂಚಾಯತಿಯ ಸಂಯೋಜಕರಾದ ಮೊ: ಮುತ್ತುರಾಜ ಸಾತಿಹಾಳ ಮೊ: ೯೯೮೦೦೧೯೬೩೫, ಮುದ್ದೇಬಿಹಾಳ ತಾಲೂಕ ಪಂಚಾಯತಿಯ ಸಂಯೋಜಕರಾದ ಎಸ್.ಕೆ.ಘಾಟಿ ಮೊ: ೯೭೪೦೬೮೨೯೭೯ ಹಾಗೂ ಬಸವನ ಬಾಗೇವಾಡಿ ತಾಲೂಕ ಪಂಚಾಯತಿಯ ಸಂಯೋಜಕರಾದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ ೧೭ರಂದು ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಸಾಂಸ್ಕೃತಿಕ ಸ್ಪರ್ಧೆಗಳಾದ ಗಾಯನ ಹಾಗೂ ಏಕ ಪಾತ್ರಾಭಿನಯ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಾದ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆಗೆ , ಬಕೆಟ್‌ನಲ್ಲಿ ಬಾಲ್ ಎಸೆಯುವುದು ಮಹಿಳೆ ಹಾಗೂ ಪುರಷರು ಭಾಗವಹಿಸಬಹುದಾಗಿದ್ದು, ೬೦ ರಿಂದ ೭೦ ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.ಹೆಚ್ಚಿನ ಮಾಹಿತಿಗೆ: ವಿಜಯಪುರ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮಾದರ ಮೊ: ೯೬೦೬೧೫೧೧೪೯, ವಿಜಯಪುರ ತಾಲೂಕ ಪಂಚಾಯತಿಯ ಸಂಯೋಜಕರಾದ ರವಿ ರಾಠೋಡ ಮೊ: ೯೦೩೫೫೫೩೩೩೭, ಇಂಡಿ ತಾಲೂಕ ಪಂಚಾಯತಿಯ ಸಂಯೋಜಕರಾದ ಪರಶುರಾಮ ಭೋಸಲೆ ಮೊ: ೯೯೭೨೪೪೧೪೬೪, ಸಿಂದಗಿ ತಾಲೂಕ ಪಂಚಾಯತಿಯ ಸಂಯೋಜಕರಾದ ಮೊ: ಮುತ್ತುರಾಜ ಸಾತಿಹಾಳ ಮೊ: ೯೯೮೦೦೧೯೬೩೫, ಮುದ್ದೇಬಿಹಾಳ ತಾಲೂಕ ಪಂಚಾಯತಿಯ ಸಂಯೋಜಕರಾದ ಎಸ್.ಕೆ.ಘಾಟಿ ಮೊ: ೯೭೪೦೬೮೨೯೭೯ ಹಾಗೂ ಬಸವನ ಬಾಗೇವಾಡಿ ತಾಲೂಕ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇದೇ ಅ.೯ ರಂದು ಆಲಮಟ್ಟಿ ಜಲಾಶಯವನ್ನು ೫೧೯.೬ ಮೀ ನಿಂದ ೫೨೪.೨೫೬ ಮೀ ಎತ್ತರದ ಕಾರ್ಯಾಚರಣೆಯನ್ನು ರೈತ ಸಂಘದಿಂದಲೇ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.ಆಲಮಟ್ಟಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.ಗ್ಯಾರಂಟಿಗಳ ಭಾಗ್ಯಗಳಲ್ಲಿ, ಅಭಿವೃದ್ಧಿಯ ಗ್ಯಾರಂಟಿ ರಾಜ್ಯ ಸರ್ಕಾರ ಮರೆತಿದ್ದು, ಅದಕ್ಕಾಗಿ ಜಲಾಶಯವನ್ನು ನಾವೇ ರೈತರು ಕೂಡಿಕೊಂಡು ಎತ್ತರಿಸುತ್ತೇವೆ ಎಂದರು.ಪ್ರತಿ ಗ್ರಾಮ, ಗ್ರಾಮಗಳಲ್ಲಿಯೂ ಜಲಾಶಯ ಎತ್ತರದ ಬಗ್ಗೆ ಅರಿವು ಮೂಡಿಸಲಾಗುವುದು, ಸರ್ಕಾರಕ್ಕೂ ಹೋರಾಟದ ಬಗ್ಗೆ ಮೊದಲೇ ತಿಳಿಸಲಾಗುವುದು ಎಂದರು.ಕಳೆದ ಶನಿವಾರ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಯಾವ ಪುರುಷಾರ್ಥಕ್ಕಾಗಿ ಕೃಷ್ಣೆಗೆ ಬಾಗಿನ ಅರ್ಪಿಸಿದರು ಎಂಬುದೇ ತಿಳಿಯುತ್ತಿಲ್ಲ. ಯುಕೆಪಿ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷ ತಾಳಿದ್ದಾರೆ, ಯಾವುದೇ ಕಾಲಮಿತಿಯಿಲ್ಲ. ಪೂರ್ಣಗೊಳಿಸುವ ಯಾವುದೇ ಜವಾಬ್ದಾರಿಯೂ ರಾಜ್ಯ ಸರ್ಕಾರಕ್ಕಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.ಯುಕೆಪಿಯ ವಿಷಯಗಳಲ್ಲಿ ಎಲ್ಲಾ ಪಕ್ಷದವರು ರಾಜಕೀಯ ಮಾಡುತ್ತಲೇ ಸಾಗುತ್ತಿದ್ದಾರೆ. ಈಗ ಭೂಸ್ವಾಧೀನದ ಪ್ರಶ್ನೆ ಎದ್ದಿದ್ದು, ಅದರಲ್ಲಿಯೂ ರಾಜಕೀಯ ನಡೆಯುತ್ತಿದೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಪ್ರಸಕ್ತ 2024-25 ನೇ ಸಾಲೀನ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ವಾರ್ಷಿಕ ಪರಿಕ್ಷೇಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಮಖಂಡಿ ತಾಲೂಕಾ ಮರಾಠ ಸಮಾಜದ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ಭವಾನಿ ಕೋ-ಆಪ್ ಕ್ರೇಡಿಟ್ ಸೋಸಾಯಿಟಿ ನಿ. ಸಾವಳಗಿ ಶಾಖೆಯ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ.ಬೇಕಾದ ದಾಖಲಾತಿ:ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ಪಿಯುಸಿ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಅಂಕಪಟ್ಟಿ, ಎರಡು ಪೋಟೋ, ಆಧಾರ ಕಾರ್ಡ, ಪೂರ್ಣ ವಿಳಾಸದೊಂದಿಗೆ 16-9-2025 ಒಳಗಾಗಿ ಹೆಸರು ನೊಂದಾಯಿಸಿ ಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕ ಸಹದೇವ ಕೇಸ್ಕರ 9844565589, ಅಧ್ಯಕ್ಷ ಉಮೇಶ ಜಾಧವ 9880666671 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಪ್ರಸಕ್ತ 2024-25 ನೇ ಸಾಲೀನ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ವಾರ್ಷಿಕ ಪರಿಕ್ಷೇಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಮಖಂಡಿ ತಾಲೂಕಾ ಮರಾಠ ಸಮಾಜದ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ಭವಾನಿ ಕೋ-ಆಪ್ ಕ್ರೇಡಿಟ್ ಸೋಸಾಯಿಟಿ ನಿ. ಸಾವಳಗಿ ಶಾಖೆಯ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ.ಬೇಕಾದ ದಾಖಲಾತಿ:ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ಪಿಯುಸಿ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಅಂಕಪಟ್ಟಿ, ಎರಡು ಪೋಟೋ, ಆಧಾರ ಕಾರ್ಡ, ಪೂರ್ಣ ವಿಳಾಸದೊಂದಿಗೆ 16-9-2025 ಒಳಗಾಗಿ ಹೆಸರು ನೊಂದಾಯಿಸಿ ಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕ ಸಹದೇವ ಕೇಸ್ಕರ 9844565589, ಅಧ್ಯಕ್ಷ ಉಮೇಶ ಜಾಧವ 9880666671 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ. ಕಲಾ – ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇದೇ ದಿ.10 ರಂದು ಬೆಳಿಗ್ಗೆ 10 ಕ್ಕೆ ತತ್ವಪದಕಾರ್ತಿಯರ ಲೋಕ ದೃಷ್ಟಿ ಎಂಬ ವಿಷಯದ ಕುರಿತು ರಾಷ್ಟೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.ಕನ್ನಡ ಸಾಹಿತ್ಯದಲ್ಲಿ ತತ್ವಪದಕ್ಕೆ ತನ್ನದೇ ಆದ ಮಹತ್ವವಿದ್ದು, ಕೀರ್ತನೆ, ವಚನಗಳಂತೆ ತತ್ವಪದಗಳು ಸಹ ಬಹುಮುಖ್ಯ ಪಾತ್ರ ವಹಿಸಿದ್ದು, ತತ್ವಪದಕಾರ್ತಿಯಯರ ತಾತ್ವಿಕ ವಿಷಯಗಳ ಕುರಿತು ಡಾ.ಗುರುಲಿಂಗಪಪ್ ದಬಾಲೆ, ತತ್ವಪದಕಾರ್ತಿಯರ ಕಲ್ಪನೆ ಎಂಬ ವಿಷಯದ ಕುರಿತು ಡಾ.ಗೌರ್ ಮೊದಲಾದ ಹಿರಿಯ ಚಿಂತಕರು ಉಪನ್ಯಾಸ ಮಂಡಿಸಲಿದ್ದಾರೆ. ಬಿಎಲ್‌ಡಿಇ ವಿವಿ ಸಮ ಕುಲಾಧಿಪತಿ ಡಾ.ವೈ.ಎಂ. ಜಯರಾಜ್, ಡಾ.ದಸ್ತಗೀರ ಸಾಬ್ ದಿನ್ನಿ, ಡಾ.ಶ್ರೀನಿವಾಸ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಎಸ್.ಬಿ. ವಿಜ್ಡಮ್ ಕರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜ ನಿರ್ಮಾಣದ ಮಹತ್ವದ ಹಾದಿ. ಶಿಕ್ಷಕರಾಗಿ ಹೊರಹೊಮ್ಮಲು CET, TET, CTET ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿರುವ ಈ ಕಾಲದಲ್ಲಿ, ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಉಚಿತ 2 ದಿನಗಳ CET, TET, CTET ಕಾರ್ಯಾಗಾರ ಅತ್ಯಂತ ಸೂಕ್ತವಾಗಿದೆ ಎಂದು ವಿಜಯಪುರದ ಎಸ್.ಬಿ. ವಿಜ್ಡಮ್ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಅಭಿಪ್ರಾಯಪಟ್ಟರು.ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, “ಶಿಕ್ಷಕರು ಸಮಾಜದ ಕಣ್ಣುಗಳು, ದಾರಿ ತೋರಿಸುವ ದೀಪಸ್ತಂಭರು. ಉತ್ತಮ ಶಿಕ್ಷಕರನ್ನು ರೂಪಿಸಲು ಇಂತಹ ಕಾರ್ಯಾಗಾರಗಳು ಪೂರಕವಾಗುತ್ತವೆ. ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಉಪಯೋಗಿಸಿ, ನಿರಂತರ ಅಭ್ಯಾಸ ಮತ್ತು ಶಿಸ್ತಿನ ಜೀವನವನ್ನು ಅಳವಡಿಸಿಕೊಂಡರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಕಷ್ಟಕರವಾಗುವುದಿಲ್ಲ. CET, TET, CTET ಪರೀಕ್ಷೆಗಳು ವಿದ್ಯಾರ್ಥಿಗಳ ಕನಸುಗಳನ್ನು ನನಸು ಮಾಡುವ ಹಾದಿಯಾಗಬೇಕು, ಅಡ್ಡಿಯಾಗಬಾರದು”ಎಂದು ತಿಳಿಸಿದರು.ಸಂಸ್ಥೆಯ ಆಡಳಿತಾಧಿಕಾರಿ ಬಿ.ಜಿ. ಮಠ, ವಿದ್ಯಾರ್ಥಿಗಳು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸತ್ಯಸೃತಿ ಎಂ ಅವರು ಸಲ್ಲಿಸಿದ್ದ “ಜಂಬುನಾಥ ಕಂಚ್ಯಾಣಿ ಅವರ ಜೀವನ ಮತ್ತು ಸಾಹಿತ್ಯ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಸತ್ಯಸೃತಿ ಎಂ ಅವರು ಕನ್ನಡ ವಿಭಾಗದ ಪ್ರೊ.ಮಹೇಶ ಚಿಂತಾಮಣಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಸತ್ಯಸೃತಿ ಎಂ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.

Read More

ಲೇಖನ- ಪ್ರೊ.ಶಿವಾನಂದ ಎಸ್.ಪಟ್ಟಣಶೆಟ್ಟರ ಕಾರ್ಯದರ್ಶಿಗಳು.ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಗದಗಹಾಗೂ ಎಸ್.ವ್ಹಿ.ವ್ಹಿ.ಅಸೋಸಿಯೇಷನ್‌, ಶಿಕ್ಷಣ ಸಂಸ್ಥೆ ಆಲಮಟ್ಟಿ ಉದಯರಶ್ಮಿ ದಿನಪತ್ರಿಕೆ ವಿಶ್ವಗುರು ಅಣ್ಣ ಬಸವಣ್ಣನವರ ನೆಲೆಯಲ್ಲಿ ಸಾಹಿತ್ಯದ ಪರಿಮಳ ಸೂಸುತ್ತಿರುವ ನಂದಿ ಸಾಹಿತ್ಯ ವೇದಿಕೆ ಕೈಂಕರ್ಯ ಅನೂನ್ಯ, ಅನುಪಮ. ಸಾಹಿತ್ಯ ಪರಧಿ ಸಾರುತ್ತಿರುವ ಈ ವೇದಿಕೆಗೆ ಈಗ ಇಪ್ಪತೈದನೆ ವಸಂತದ ಸಾಹಿತ್ಯ ತೃಷೆಯ ಋತುಗಾನ ಎಂಬುದು ಸಂತಸ.       ಬಸವ ಜಯಂತಿ ರೂವಾರಿ ಶರಣ ಹರ್ಡೇಕರ ಮಂಜಪ್ಪನವರನ್ನು ಪೂಜ್ಯನೀಯ ಭಾವದಿಂದ ಸ್ಮರಿಸಿ ಮಂಜಪ್ಪನವರ ಕಾಯಕ ತತ್ಪರತೆ ತಿರುಳಿನ ದೃಢ ನಿಲುವು ಹೊಂದಿರುವ ಬಸವನ ಬಾಗೇವಾಡಿಯ ನಂದಿ ಸಾಹಿತ್ಯ ವೇದಿಕೆಯ ಸಮಾಜಮುಖಿ ಸಾಹಿತ್ಯ ಪರ ಕಾಯಕ ಕರುನಾಡಿನ ಸಾಹಿತ್ಯಾಸಕ್ತರ ಮನ ತಣಿಸುತ್ತಿದೆ. ಬಸವೇಶ್ವರರ ನೆಲದಲ್ಲಿ ಸೃಜನಾತ್ಮಕ ಸಾಹಿತ್ಯ ಕೃಷಿ ಬಿತ್ತಿ ಬೆಳೆಯುತ್ತಿದೆ. ಈ ಅನುಪಮ ಕಾರ್ಯ ಸಾಹಿತ್ಯ ಲೋಕದ ವೈವಿಧ್ಯತೆಯ ಪ್ರತಿಬಿಂಬವಾಗಿದೆ.       ಸಾಹಿತ್ಯ ಸುಗನ್ನತೆಯ ರಸಸತ್ವದಿಂದಲೇ ನಂದಿ ಸಾಹಿತ್ಯ ವೇದಿಕೆ ನಾಡಿನ ಸಾಹಿತ್ಯ ಪ್ರಿಯರ ಗಮನ ಸೆಳೆಯುತ್ತಿರುವ ಸಾಹಿತ್ಯ ಸೇವಾ ಕಾರ್ಯ ಮಾದರಿಯಾಗಿದೆ.…

Read More

ಇಂದು (ಸೆಪ್ಟಂಬರ್ ೧೦, ಬುಧವಾರ) “ವಿಶ್ವ ಆತ್ಮಹತ್ಯೆ ತಡೆ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಖ್ಯಾತ್ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರೀಡ್ ಅವರು, “ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ದಾರಿ ಒಂದೇ ಅದುವೇ ಆತ್ಮವಿಶ್ವಾಸ” ಎಂದು ಹೇಳಿದ್ದಾರೆ. ಇಂದಿನ ದಿನಗಳಲ್ಲಿ ಯುವಕರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೆ ಅಥವಾ ಫೇಲ್ ಆದಾಗ ಮತ್ತು ಸಾಮಾನ್ಯ ಜನರು ಸಂಸಾರದಲ್ಲಿರುವ ಎದುರಾಗುವ ಸಂಕಷ್ಟ, ರೈತರು ಸಾಲ ಬಾಧೆಯಿಂದ ಮತ್ತು ಕೌಟುಂಬಿಕ ಕಲಹದಂತಹ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ದೃಶ್ಯಗಳು ನಮ್ಮ ಕಣ್ಮುಂದೆ ಕಾಣ ಸಿಗುತ್ತವೆ. ಆತ್ಮಹತ್ಯೆಗೆ ಕಾರಣಗಳು ಹಲವು ಇರಬಹುದು. ಶೈಕ್ಷಣಿಕ ಒತ್ತಡ, ಆತ್ಮವಿಶ್ವಾಸದ ಕೊರತೆ, ಮಾನಸಿಕ ಆಘಾತ, ಆರ್ಥಿಕ ಪರಿಸ್ಥಿತಿ, ಬಡತನ, ಸೋಲು, ಪ್ರೇಮ ವೈಫಲ್ಯ, ಮೋಬೈಲ್ ಮೇಲೆ ಅತಿಯಾದ ವ್ಯಾಮೋಹ, ಪರೀಕ್ಷೆಯಲ್ಲಿ ಅನುತ್ತೀರ್ಣ ಮತ್ತು ದೈಹಿಕ-ಲೈಂಗಿಕ ದೌರ್ಜನ್ಯ ಇತ್ಯಾದಿ ಇವೆಲ್ಲವೂ ಆತ್ಮಹತ್ಯೆಗೆ ಕಾರಣಗಳಾಗಿವೆ. ಭಾರತದಲ್ಲಿ ಶೈಕ್ಷಣಿಕ ಸಾಧನೆಗಾಗಿ…

Read More