ಲೇಖನ
– ಪ್ರೊ.ಶಿವಾನಂದ ಎಸ್.ಪಟ್ಟಣಶೆಟ್ಟರ
ಕಾರ್ಯದರ್ಶಿಗಳು.
ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಗದಗ
ಹಾಗೂ ಎಸ್.ವ್ಹಿ.ವ್ಹಿ.ಅಸೋಸಿಯೇಷನ್, ಶಿಕ್ಷಣ ಸಂಸ್ಥೆ ಆಲಮಟ್ಟಿ
ಉದಯರಶ್ಮಿ ದಿನಪತ್ರಿಕೆ
ವಿಶ್ವಗುರು ಅಣ್ಣ ಬಸವಣ್ಣನವರ ನೆಲೆಯಲ್ಲಿ ಸಾಹಿತ್ಯದ ಪರಿಮಳ ಸೂಸುತ್ತಿರುವ ನಂದಿ ಸಾಹಿತ್ಯ ವೇದಿಕೆ ಕೈಂಕರ್ಯ ಅನೂನ್ಯ, ಅನುಪಮ. ಸಾಹಿತ್ಯ ಪರಧಿ ಸಾರುತ್ತಿರುವ ಈ ವೇದಿಕೆಗೆ ಈಗ ಇಪ್ಪತೈದನೆ ವಸಂತದ ಸಾಹಿತ್ಯ ತೃಷೆಯ ಋತುಗಾನ ಎಂಬುದು ಸಂತಸ.
ಬಸವ ಜಯಂತಿ ರೂವಾರಿ ಶರಣ ಹರ್ಡೇಕರ ಮಂಜಪ್ಪನವರನ್ನು ಪೂಜ್ಯನೀಯ ಭಾವದಿಂದ ಸ್ಮರಿಸಿ ಮಂಜಪ್ಪನವರ ಕಾಯಕ ತತ್ಪರತೆ ತಿರುಳಿನ ದೃಢ ನಿಲುವು ಹೊಂದಿರುವ ಬಸವನ ಬಾಗೇವಾಡಿಯ ನಂದಿ ಸಾಹಿತ್ಯ ವೇದಿಕೆಯ ಸಮಾಜಮುಖಿ ಸಾಹಿತ್ಯ ಪರ ಕಾಯಕ ಕರುನಾಡಿನ ಸಾಹಿತ್ಯಾಸಕ್ತರ ಮನ ತಣಿಸುತ್ತಿದೆ. ಬಸವೇಶ್ವರರ ನೆಲದಲ್ಲಿ ಸೃಜನಾತ್ಮಕ ಸಾಹಿತ್ಯ ಕೃಷಿ ಬಿತ್ತಿ ಬೆಳೆಯುತ್ತಿದೆ. ಈ ಅನುಪಮ ಕಾರ್ಯ ಸಾಹಿತ್ಯ ಲೋಕದ ವೈವಿಧ್ಯತೆಯ ಪ್ರತಿಬಿಂಬವಾಗಿದೆ.

ಸಾಹಿತ್ಯ ಸುಗನ್ನತೆಯ ರಸಸತ್ವದಿಂದಲೇ ನಂದಿ ಸಾಹಿತ್ಯ ವೇದಿಕೆ ನಾಡಿನ ಸಾಹಿತ್ಯ ಪ್ರಿಯರ ಗಮನ ಸೆಳೆಯುತ್ತಿರುವ ಸಾಹಿತ್ಯ ಸೇವಾ ಕಾರ್ಯ ಮಾದರಿಯಾಗಿದೆ. ಸಾಹಿತ್ಯಕ್ಕೆ ಜಾತಿ,ಮತಗಳೆಂಬ ಭೇದ ಭಾವಗಳಿಲ್ಲ. ಮನದಾಳದಲ್ಲಿ ಮೂಡಿ ಸಂಚಲಿಸುವ ವಿಚಾರ,ವಿನೋದಮಯಗಳೇ ಸಾಹಿತ್ಯದ ರೂಪ ಲಾವಣ್ಯ ಧರಿಸುವಂಥದ್ದು. ಭಾವ ನಾಡಿ ಮಿಡಿತಗಳಿಂದ ಹೊರಹೊಮ್ಮುವ ಸಾಹಿತ್ಯ ಹೃದಯಂಗಮವಾಗಿ ಮನದಲ್ಲಿ ಸೆಲೆಯಾಗುವಂಥದ್ದು. ನಾಡಿಮಿಡಿತದ ಭಾವಮಸ್ತಕದಲ್ಲಿ ಪ್ರವಹಿಸಿ ಹೃನ್ಮನ ಚೈತನ್ಯ ತುಂಬುವಂಥದ್ದು. ಸಾಹಿತ್ಯ ನಾದಲಯ ಪ್ರಜ್ಞಾವಂತರ ನೀನಾದವಾಗಿದೆ. ಸಾಹಿತ್ಯ ಪಯಣಕ್ಕೆ ಅಷ್ಟೊಂದು ಉನ್ಮಾದದ ದಿವ್ಯತೆ ಇದೆ. ಸಾಹಿತ್ಯ ಭಾವಗಳ ಸಂಗಮ,ತಾಳಲಯ ಮಿಲನಗಳ ಮಾರ್ದನಿಯಾಗಿದೆ. ಮಸ್ತಕದಲ್ಲಿ ಮನಸ್ಸುಗಳ ವಿನಿಯೋಗ ಪದ ಲಹರಿ ಸೃಜೀಸಿ ಅಂತರಂಗದ ತುಡಿತ ಸಂಗಮಕ್ಕೆ ಲಾಲೀತ್ಯ ಸಂಧಿಸುವಂಥದ್ದು.
ಸಾಹಿತ್ಯ ಗಂಧದ ರಥದಲ್ಲಿ ಯಶಸ್ಸು ೨೫ ವಸಂತಕಾಲದಲ್ಲಿ ನಲಿದಿರುವ ನಂದಿ ಸಾಹಿತ್ಯ ವೇದಿಕೆ ಕಾಯಕ ಸ್ವರಗಳು ಅಪರೂಪವಾಗಿವೆ. ನಂದಿ ಸಾಹಿತ್ಯ ವೇದಿಕೆ ಸಾರಥ್ಯದಲ್ಲಿ ಸಾಹಿತ್ಯ ದರ್ಪಣ ಸಾರ್ಥಕತೆ ರೂಪ ತಾಳಿದೆ. ಅದು ಕೂಡಾ ಅಣ್ಣ ಬಸವೇಶ್ವರರ ಅಂಗಳದಲ್ಲಿ ಎಂಬುದು ವಿಶೇಷ. ಸಾಹಿತ್ಯ ಸಿಂಚನ ತಣವಣಿಸಿದೆ. ಕರುನಾಡು ಮನದಲ್ಲಿ ಇಂಪಾಗಿಸಿ ರಮ್ಯತೆ ಕಂಪು ಹರಡಿಸುತ್ತಿದೆ. ಭಾವಾಂಚಿನ ಸಾಹಿತ್ಯ ಮನದನಿಗಳ ತೃಷೆ ತಣಿಸುತ್ತಿದೆ. ನಂದಿ ಸಾಹಿತ್ಯ ವೇದಿಕೆ ಸಾಹಿತ್ಯ ಜನ್ಯ ತನ್ನತ್ತ ಸೆಳೆದಿದೆ. ಸಾಹಿತ್ಯ ಕಲೆ ಅಮೂರ್ತ ಕಾವ್ಯ ಕಲ್ಪನೆಯಿಂದ ಈ ಭಾಗದ ಸಾಹಿತ್ಯ ಭಾವ ಮಂದಿರದಲ್ಲಿ ಶಬ್ದಗಳ ತರಂಗಗಳ ಅಲೆ ಮಹತ್ವ ಸಾರುತ್ತಿರುವುದು ಸಂತೋಷದ ಸಂಗತ. ನಂದಿ ಸಾಹಿತ್ಯ ಕೃಷಿ ೨೫ ವಸಂತ ಮರೆಯುವಂತಿಲ್ಲ. ಸ್ಪೂರ್ತಿದಾಯಕ ಸಾಹಿತ್ಯ ಗನಸುಗಳನ್ನು ಈ ವೇದಿಕೆ ಜಾಗೃತಗೊಳಿಸುತ್ತಿದೆ. ಸಾಹಿತ್ಯ ಬದುಕು ಸಾರ್ಥಕಗೊಳಿಸುತ್ತಿದೆ. ಜನತೆಯಲ್ಲಿ ಸಾಹಿತ್ಯ ಪೈರು ಮೆಚ್ಚುಗೆ ಪಡೆದಿದೆ. ಕವನಗಳ ವಾಚನ ಮೂಲಕ ಭಾವನೆಗಳ ಹೆಬ್ಬಾಗಿಲು ಸಂತಸದಿಂದ ತೆರೆದಿದೆ. ದೈನಂದಿನ ಜೀವನದ ಸಾಹಿತ್ಯ ಇಲ್ಲಿ ಸಾಧನದ ರಸವೋತ್ಪತಿಯಾಗಿದೆ. ಸಾಹಿತ್ಯ ಪ್ರಸರಣಕ್ಕೆ ನಂದಿ ವೇದಿಕೆ ಪ್ರಾಮುಖ್ಯತೆ ನೀಡಿ ಜನತೆಯ ಹೃದಯದೊಳಗಿನ ಭಾವಪುಂಜಗಳನ್ನು ಅರಳಿಸುತ್ತಿರುವ ಸತ್ಕಾರ್ಯ ಶ್ಲಾಘನೀಯ. ಸಾಹಿತ್ಯ ಜೀವನದ ಅವಿಭಾಜ್ಯ ಅಂಗ. ಬಸವ ನಾಡಿನಲ್ಲಿ ನಂದಿ ಸಾಹಿತ್ಯ ವೇದಿಕೆ ಅರ್ಥವೈತ್ತ ಸಾಹಿತ್ಯದ ಕಣಜ ಘಮಿಸಿದೆ. ಈ ಭಾಗದಲ್ಲಿ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಕಳೆದ ೨೫ ವರ್ಷಗಳಿಂದ ನಿಷ್ಕಲ್ಮಶ ಮನಸ್ಸಿನಿಂದ ಕೈಗೊಂಡ ಸಾಹಿತ್ಯ ಕೈಂಕರ್ಯ ಅಮೋಘ ರೂಪ ಪಡೆದಿವೆ. ನಂದಿ ವೇದಿಕೆಯ ಸಾಹಿತ್ಯ ಚಿಂತನೆ ಆವರ್ಣೀಯ. ಸಾಹಿತ್ಯ ರಂಗದಲ್ಲಿ ನಂದಿ ವೇದಿಕೆ ಪೂರ್ಣ ಅರ್ಪಿತಗೊಂಡಿದ್ದು ಸ್ತುತಾರ್ಹ ಬೆಳವಣಿಗೆ. ಸಕಾರಾತ್ಮಕ ಕೆಲಸದಿಂದ ಸಾಹಿತ್ಯ ಸಂಸ್ಕೃತಿ ಬೆಳೆಸಿ, ಸಾಹಿತ್ಯ ತತ್ವಗಳಿಗೆ ಉತ್ತೇಜನ ನೀಡಿ ನಾಡು, ನುಡಿ, ನೆಲ,ಜಲ ರಕ್ಷಣೆಗೆ ಬದ್ದರಾಗಿ ಸಾಹಿತ್ಯ ವಲಯಕ್ಕೆ ನಂದಿ ಸಾಹಿತ್ಯ ವೇದಿಕೆ ನವ ಕಾರ್ಯಗಳಿಂದ ವಿಶಿಷ್ಟತೆ ಮೆರಗು ನೀಡುತ್ತಿರುವ ಕಾರ್ಯ ಅನುಪಮವಾಗಿದೆ.
