ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಸ್‌ಎಸ್‌ಎಲ್‌ಸಿ ನಂತರದ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ಸ್ನಾತಕೊತ್ತರ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಹಾಗೂ ವಿಕಲಚೇತನರಿಗೆ ವಿವಾಹವಾದಲ್ಲಿ ನೀಡಲಾಗುವ ಪ್ರೋತ್ಸಾಹಧನಕ್ಕೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೆಪ್ಟೆಂಬರ್ ೩೦ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಜಗದೀಶ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ: ವಿಜಯಪುರ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮಾದರ ಮೊ: ೯೬೦೬೧೫೧೧೪೯, ವಿಜಯಪುರ ತಾಲೂಕ ಪಂಚಾಯತಿಯ ಸಂಯೋಜಕರಾದ ರವಿ ರಾಠೋಡ ಮೊ: ೯೦೩೫೫೫೩೩೩೭, ಇಂಡಿ ತಾಲೂಕ ಪಂಚಾಯತಿಯ ಸಂಯೋಜಕರಾದ ಪರಶುರಾಮ ಭೋಸಲೆ ಮೊ: ೯೯೭೨೪೪೧೪೬೪, ಸಿಂದಗಿ ತಾಲೂಕ ಪಂಚಾಯತಿಯ ಸಂಯೋಜಕರಾದ ಮೊ: ಮುತ್ತುರಾಜ ಸಾತಿಹಾಳ ಮೊ: ೯೯೮೦೦೧೯೬೩೫, ಮುದ್ದೇಬಿಹಾಳ ತಾಲೂಕ ಪಂಚಾಯತಿಯ ಸಂಯೋಜಕರಾದ ಎಸ್.ಕೆ.ಘಾಟಿ ಮೊ: ೯೭೪೦೬೮೨೯೭೯ ಹಾಗೂ ಬಸವನ ಬಾಗೇವಾಡಿ ತಾಲೂಕ ಪಂಚಾಯತಿಯ ಸಂಯೋಜಕರಾದ ಶೀವಲೀಲಾ ಬಿರಾದಾರ ಮೊ: ೮೭೨೨೧೩೫೬೬೦ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.