ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ. ಕಲಾ – ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇದೇ ದಿ.10 ರಂದು ಬೆಳಿಗ್ಗೆ 10 ಕ್ಕೆ ತತ್ವಪದಕಾರ್ತಿಯರ ಲೋಕ ದೃಷ್ಟಿ ಎಂಬ ವಿಷಯದ ಕುರಿತು ರಾಷ್ಟೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯದಲ್ಲಿ ತತ್ವಪದಕ್ಕೆ ತನ್ನದೇ ಆದ ಮಹತ್ವವಿದ್ದು, ಕೀರ್ತನೆ, ವಚನಗಳಂತೆ ತತ್ವಪದಗಳು ಸಹ ಬಹುಮುಖ್ಯ ಪಾತ್ರ ವಹಿಸಿದ್ದು, ತತ್ವಪದಕಾರ್ತಿಯಯರ ತಾತ್ವಿಕ ವಿಷಯಗಳ ಕುರಿತು ಡಾ.ಗುರುಲಿಂಗಪಪ್ ದಬಾಲೆ, ತತ್ವಪದಕಾರ್ತಿಯರ ಕಲ್ಪನೆ ಎಂಬ ವಿಷಯದ ಕುರಿತು ಡಾ.ಗೌರ್ ಮೊದಲಾದ ಹಿರಿಯ ಚಿಂತಕರು ಉಪನ್ಯಾಸ ಮಂಡಿಸಲಿದ್ದಾರೆ. ಬಿಎಲ್‌ಡಿಇ ವಿವಿ ಸಮ ಕುಲಾಧಿಪತಿ ಡಾ.ವೈ.ಎಂ. ಜಯರಾಜ್, ಡಾ.ದಸ್ತಗೀರ ಸಾಬ್ ದಿನ್ನಿ, ಡಾ.ಶ್ರೀನಿವಾಸ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.