Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಬಸವರಾಜ್ ಹೂಗಾರ (ಆಲಮೇಲ)ನಿಕಟ ಪೂರ್ವ ಜಿಲ್ಲಾಧ್ಯಕ್ಷರು, ಬಿಜೆಪಿ ಮೋರ್ಚಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ 2025ರ ನವೆಂಬರ್—ಭಾರತೀಯ ಕ್ರೀಡಾ ಇತಿಹಾಸದಲ್ಲಿ ಮೈಲುಗಲ್ಲು“ಮಹಿಳಾ ವಿಜಯದ ನವೆಂಬರ್”.ಒಂದೇ ತಿಂಗಳಲ್ಲಿ, ಒಂದೇ ಆತ್ಮಸತ್ಯದಿಂದ, ಒಂದೇ ರಾಷ್ಟ್ರಧ್ವಜದ ಕೆಳಗೆ—ಭಾರತದ ಮೂವರು ಮಹಿಳಾ ತಂಡಗಳು ಜಾಗತಿಕ ವೇದಿಕೆಯಲ್ಲಿ ಮೂರು ವಿಶ್ವಕಪ್‌ಗಳನ್ನು ಗೆದ್ದು ರಾಷ್ಟ್ರದ ಹೆಮ್ಮೆಯನ್ನು ದಶಪಟ್ಟು ಹೆಚ್ಚಿಸಿವೆ.ನವೆಂಬರ್ 2ರಂದು ಮಹಿಳಾ ಏಕದಿನ ಕ್ರಿಕೆಟ್ ತಂಡ ವಿಶ್ವಕಪ್ ಎತ್ತಿ ಹಿಡಿದಾಗ, ಅದು ಕೇವಲ ಟ್ರೋಫಿ ಅಲ್ಲ; ದಶಕಗಳ ಪರಿಶ್ರಮ, ಮೌನದ ಹೋರಾಟ ಮತ್ತು ವಿಶ್ವಮಟ್ಟದ ಸಾಮರ್ಥ್ಯದ ಘೋಷಣೆ.ಅದೇ ದಿನ, ನವೆಂಬರ್ 2ರ ನಸುಕಿನ ಸುದ್ದಿಯಲ್ಲೇ ಮತ್ತೊಂದು ಮಿಂಚು ಅಂಧರ ಮಹಿಳಾ ಟಿ–20 ವಿಶ್ವಕಪ್‌ನಲ್ಲಿ ಭಾರತದ ಅಚಲ ವಿಜಯ. ಕಣ್ಣು ಕಾಣದಿದ್ದರೂ, ಲಕ್ಷ್ಯ ತಪ್ಪದ ಧೈರ್ಯ. ಮೈದಾನದಲ್ಲೇ ಅಲ್ಲ, ಮನಸ್ಸಿನಲ್ಲೂ ಬೆಳಕು ಬೀರುವ ಜಯ.ಈ ಜಯಗಳ ಜೋಡಿ ದೇಶದೊಳಗೆ ಸಂಭ್ರಮದ ಹೊಳೆ ಹರಿಸುತ್ತಿರುವಾಗ, ನವೆಂಬರ್ 23ರಂದು ಮತ್ತೊಂದು ಗರಳಿನ ಗುರುತು—ಭಾರತ ಮಹಿಳಾ ತಂಡದ ಟಿ–20 ವಿಶ್ವಕಪ್ ಜಯ. ಕ್ರಿಕೆಟ್‌ನ ಎರಡೂ ಸ್ವರೂಪಗಳನ್ನೂ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಕಾಳಿಕಾ ನಗರದ ನಿವಾಸಿ ಶಕುಂತಲಾ ವಿಶ್ವನಾಥ ಗೋಲಾ (೮೪) ರವಿವಾರ ನಿಧನರಾಗಿದ್ದಾರೆ. ಮೃತರು ಪತಿ ಮತ್ತು ಜಿ.ಪಿ.ಪೋರವಾಲ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಅವರು ಸೇರಿದಂತೆ ಈರ್ವರು ಸುಪುತ್ರ ಮತ್ತು ಸುಪುತ್ರಿಯರನ್ನು ಅಗಲಿದ್ದಾರೆ.ರವಿವಾರ ಸಂಜೆ ಸಿಂದಗಿಯ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ವಿಧಿವತ್ತಾಗಿ ನೆರವೇರಿತು.ಸಂತಾಪ: ಮೃತರಿಗೆ ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯರು, ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಮಾಜಿ ವಿಪ ಶಾಸಕ ಅರುಣ ಶಹಾಪೂರ, ಅಶೋಕ ವಾರದ, ಇಂದುಶೇಖರ ಮಣೂರ, ಎಂ.ಎಂ.ಹಂಗರಗಿ, ಮುತ್ತು ಮುಂಡೇವಾಡಗಿ ಸೇರಿದಂತೆ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ನಿರ್ದೇಶಕ ಮಂಡಳಿ ಮತ್ತು ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಾಂಗ್ರೆಸ್‌ನವರು ತಮ್ಮ ಸ್ವಾರ್ಥಕ್ಕಾಗಿ, ನೆಹರೂ ಮನೆತನ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ಸಂವಿಧಾನ ತಿದ್ದುಪಡಿ ಮಾಡಿದ್ದರು. ಸಂವಿಧಾನವನ್ನು ಯಾರು ಎಷ್ಟು ಬಾರಿ ತಿದ್ದುಪಡಿ ಮಾಡಿದರು, ಏತಕ್ಕಾಗಿ ಮಾಡಿದರು ಎಂಬುದು ಮುಖ್ಯ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಸಿಂದಗಿ ಪಟ್ಟಣದ ಮಾಂಗಲ್ಯ ಭವನದಲ್ಲಿ ಸಿಂದಗಿ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳ ಅನಾವರಣ ಹಾಗೂ ಹೊಸ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೯೭೫ರ ತುರ್ತು ಪರಿಸ್ಥಿತಿ, ೧೯೫೧ರಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೆರಲು ಮಾಡಿದ ತಿದ್ದುಪಡಿ ಸೇರಿದಂತೆ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ೭೬ಬಾರಿ ಸಂವಿಧಾನ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದು ಕಾಂಗ್ರೆಸ್ ಎಂದು ಆರೋಪ ಮಾಡಿದರು.ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ವಿರುದ್ಧ ಚುನಾವಣಾ ತಕರಾರು ಪ್ರಕರಣ ದಾಖಲಿಸಲು ನಿರ್ಬಂಧ ವಿಧಿಸುವ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುವಂತಿಲ್ಲ ಎಂದಿದ್ದು ಕಾಂಗ್ರೆಸ್. ಕಾಂಗ್ರೆಸ್ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ” ಎಂಬ ಅಂಬೇಡ್ಕರ್ ಮಾತು…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ದತ್ತ ಜಯಂತಿ ನಿಮಿತ್ಯ ಮಹಾರಾಷ್ಟ್ರದ ಭಕ್ತರು ದತ್ತಾತ್ರೆ ಮೂರ್ತಿಯ ಪಲ್ಲಕಿಯೊಂದಿಗೆ ಪಾದಯಾತ್ರೆ ಮೂಲಕ ಗಾಣಗಾಪೂರಕ್ಕೆ ತೆರಳುತ್ತಿರುವ ದತ್ತಾತ್ರೆಯ ಪಾದಯಾತ್ರಿಗಳು ಬಾನುವಾರ ಆಲಮೇಲ ಪಟ್ಟಣಕ್ಕೆ ಆಗಮಿಸಿದ್ದು ಸ್ಥಳಿಯ ಭಕ್ತರು ಸ್ವಾಗತಿಸಿದರು.ನಂತರ ಅಫಜಲಪೂರ ರಸ್ತೆಯ ಮಹಾದೇವ ಗೋಪಾಳ ಬಂಡಗಾರ ಇವರ ತೊಟದ ಮನೆಯಲ್ಲಿ ವಾಸ್ತವ್ಯ ಮಾಡಿದರು. ಬಂಡಗಾರ ಕುಟುಂಬ ಭಕ್ತಿಯಿಂದ ಸ್ವಾಗತಿಸಿ ವಿಶೇಷ ಪೂಜೆಗೈದು ಬಿಳಕೊಟ್ಟರು.ಬೆಳಗ್ಗೆ 11 ಗಂಟೆಗೆ ಬಂಡಗಾರ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಮದ್ಯಾಹ್ನ ಪ್ರಸಾದ ಸೇವಿಸಿ ಸಾಯಂಕಾಲ 4 ಗಂಟೆಗೆ ಮತ್ತೆ ಪಾದಯಾತ್ರೆ ಮೂಲಕ ದೇವಣಗಾಂವ ಮಾರ್ಗವಾಗಿ ಗಾಣಗಾಪೂರಕ್ಕೆ ತೆರಳಿದರು. ಪಾದಯಾತ್ರಿಕರು ಮಹಾರಾಷ್ಟ್ರದ ಸೊಲಾಪೂರ ಜಿಲ್ಲೆಯ ಮಾಳಸಿರಸ ನಗರದ ಶ್ರೀ ಗುರುದೇವ ದತ್ತ ಸೇವಾ ಮಂಡಳಿ ನೇತೃತ್ವದಲ್ಲಿ ಮೂರೆನೆ ವರ್ಷ ಹೊಸ ಪಲ್ಲಕ್ಕಿಯೊಂದಿಗೆ ಪಾದಯಾತ್ರೆಯ ಮೂಲಕ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪೂರ ದತ್ತಾತ್ರಾಯ ದರ್ಶನಕ್ಕೆ ತೆರಳುತ್ತಿರುವದಾಗಿ ಶ್ರೀ ಗುರುದೇವ ದತ್ತ ಸೇವಾ ಮಂಡಳಿ ಪ್ರಮುಖ ಪೂಜಾರಿ ದಾದಾ ಮಹಾರಾಜ ತಿಳಿಸಿದರು.ಪಾದಯಾತ್ರೆಯಲ್ಲಿ ಪ್ರಮುಖರಾದ ಬಾರಮತಿಯ…
ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಚಿಂಚೋಳಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪಾಟೀಲ್, ಲಿಂಗಾಯತ ಸಮುದಾಯದ ಪ್ರಬಲ ಬಣಜಿಗ ಉಪಪಂಗಡಕ್ಕೆ ಸೇರಿದವರು . 1957 ರಲ್ಲಿ ಎಸ್. ನಿಜಲಿಂಗಪ್ಪ ಸರ್ಕಾರದಲ್ಲಿ ಅವರನ್ನು ಮೊದಲು ಗೃಹ ಸಚಿವರನ್ನಾಗಿ ಮಾಡಲಾಯಿತು. ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಹಲವಾರು ಬಾರಿ ಆಯ್ಕೆಯಾದರು. ತಮ್ಮ ಯೌವನದಲ್ಲಿ, ಪಾಟೀಲ್ ರಾಮಕೃಷ್ಣ ಹೆಗಡೆ ಅವರೊಂದಿಗೆ ಕೈಜೋಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಯ ಮೇಲೆ ಹಿಡಿತ ಸಾಧಿಸಿದರು. ನಿಜಲಿಂಗಪ್ಪ ಸಂಪುಟದಲ್ಲಿ ಯುವ ಮತ್ತು ವರ್ಚಸ್ವಿ ಸಚಿವರಾಗಿದ್ದ ಅವರಿಬ್ಬರನ್ನೂ ‘ಲವ-ಕುಶ’ ಎಂದು ಕರೆಯಲಾಗುತ್ತಿತ್ತು. ಅವರು ಫೆಡರಲ್ ರಾಜಕೀಯಕ್ಕೆ ತೆರಳಿದಾಗ, ಶ್ರೀ ನಿಜಲಿಂಗಪ್ಪ ಶ್ರೀ ವೀರೇಂದ್ರ ಪಾಟೀಲ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡರು.ಶ್ರೀ ವೀರೇಂದ್ರ ಪಾಟೀಲ್ ಅವರ ಮುಖ್ಯಮಂತ್ರಿಯಾಗಿ ಮೊದಲ ಇನ್ನಿಂಗ್ಸ್ 33 ತಿಂಗಳು 10 ದಿನಗಳ ಕಾಲ ನಡೆಯಿತು. ರಾಜ್ಯ ಆಡಳಿತದ ಮೇಲಿನ ಅವರ ನಿಯಂತ್ರಣವು, ಅವರು ತಮ್ಮ ಮಾರ್ಗದರ್ಶಕ, ಆಗ ಅಖಿಲ ಭಾರತ ಕಾಂಗ್ರೆಸ್…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಜಯಪುರ ಜಿಲ್ಲೆ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ನೀಡುವ ರಾಜ್ಯಮಟ್ಟದ ೨೦೨೫ನೇ ಸಾಲಿನ ಪ್ರೊ.ಎಚ್.ಟಿ.ಪೋತೆ ಹಸ್ತಪ್ರತಿ ಪ್ರಶಸ್ತಿಗೆ ಸಿಂದಗಿಯ ದೇವೂ ಮಾಕೊಂಡ ಅವರ “ಯುದ್ಧ ಮೃದಂಗ’ ಅನುವಾದಿತ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿದೆ ಹಾಗೂ ಪ್ರೊ.ಎಚ್.ಟಿ.ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಡಾ.ಪದ್ಮನಿ ನಾಗರಾಜು ಅವರ ಸಮುದ್ರದ ತೆರೆಯ ಸರಿಸಿ ಕಥಾ ಸಂಕಲನ ಮತ್ತು ವಿಜಯಪುರದ ಡಾ. ಸುಜಾತ ಚಲವಾದಿ ಅವರ ಲಚಮವ್ವ ಮತ್ತು ಇತರ ಕತೆಗಳು ೨೦೨೪ರ ಕೃತಿಗಳನ್ನು ಆಯ್ಕೆಮಾಡಲಾಗಿದೆ, ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ೨೦೨೪ರ ಸಾಲಿನ ಸೃಜನೇತರ ವಿಭಾಗದ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆಯ ಮಹಾದೇವ ಬಸರಕೋಡ ಅವರ ಸುರಧೇನು ಮತ್ತು ತುಮಕೂರಿನ ಅನಂತ ಕುಣಿಗಲ್ ಅವರ ‘ಅಪ್ಪನ ಅಟೋಗ್ರಾಫ್’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆಯ ವಿಜಯಲಕ್ಷ್ಮಿ ಆರ್. ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬೆರಗು ಪ್ರಕಾಶನವು ಕಳೆದ ೬ ವರ್ಷಗಳಿಂದಲೂ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು. ಪ್ರಸಕ್ತ ವರ್ಷದ ಪ್ರಶಸ್ತಿಗೆ ೧೧೮ ಪುಸ್ತಕಗಳು, ಹಾಗೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಶೈಲಯ್ಯ ಮಡಿವಾಳಯ್ಯ ಮಠಪತಿ(84) ಇಂದು ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ.ನಗರದ ಕೆ.ಎಚ್.ಬಿ ಕಾಲನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಅವರು ಸೇವೆ ಸಲ್ಲಿಸಿದ್ದರು.ವಯೋಸಹಜ ಕಾಯಿಲೆಯಿಂದ ನಿಧನರಾದ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಗಳು ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಚಾಲುಕ್ಯ ನಗರದ ರುದ್ರಭೂಮಿಯಲ್ಲಿ ಸಂಜೆ ನಡೆಯಿತು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ನೋಂದಣಿ ಮಾಡಿರುವ ಓಟಗಾರರಿಗೆ ಟಿ-ಶರ್ಟ್ ಹಾಗೂ ಬಿಬ್ ವಿತರಣೆ ಮತ್ತು ಪೂರ್ವಭಾವಿ ಕಾರ್ಯಕ್ರಮಗಳು ಡಿಸೆಂಬರ್ 5 ಮತ್ತು 6 ರಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ.ಟಿ-ಶರ್ಟ್ ಮತ್ತು ಬಿಬ್ ವಿತರಣೆಡಿಸೆಂಬರ್ 5 ಮತ್ತು 6 ರಂದು ಟಿ-ಶರ್ಟ್ ಮತ್ತು ಬಿಬ್ ವಿತರಿಸಲಾಗುವುದು. ಈಗಾಗಲೇ ನೋಂದಣಿ ಮಾಡಿಸಿರುವ ಓಟಗಾರರು ಸೂಕ್ತ ನೋಂದಣಿ ದಾಖಲೆಗಳೊಂದಿಗೆ ಆಗಮಿಸಿ, ಟಿ-ಶರ್ಟ್ ಮತ್ತು ಬಿಬ್ ಪಡೆದುಕೊಳ್ಳಬೇಕು ಎಂದು ಸಮಿತಿಯ ಪ್ರಮುಖರಾದ ಅಪ್ಪು ಭೈರಗೊಂಡ ಹಾಗೂ ಸಚಿನ ಪಾಟೀಲ ತಿಳಿಸಿದ್ದಾರೆ.ವಿಚಾರಗೋಷ್ಠಿ ಮತ್ತು ಬಹುಮಾನ ವಿತರಣೆಡಿಸೆಂಬರ್ 6 ರಂದು ಶನಿವಾರ ಬೆ.10.30 ರಿಂದ 12ಗಂಟೆಯವರೆಗೆ ವಿಚಾರಗೋಷ್ಠಿ ಮತ್ತು ಬಹುಮಾನ ವಿತರಣೆ ನಡೆಯಲಿದೆ. ವಿಜಯಪುರ ಹೆರಿಟೇಜ್ ಕುರಿತು ಇತಿಹಾಸ ತಜ್ಞ ಡಾ. ಕೃಷ್ಣ ಕೋಲ್ಹಾರಕುಲಕರ್ಣಿ, ಧಾರವಾಡ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ಅಧಿಕಾರಿ ರಮೇಶ ಮೂಲಿಮನಿ, ಇತಿಹಾಸ ತಜ್ಞ ಆನಂದ ಕುಲಕರ್ಣಿ ಮುಖ್ಯ ಭಾಷಣ ಮಾಡಲಿದ್ದಾರೆ. ಅಮೀನುದ್ದೀನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವ ಏಡ್ಸ್ ದಿನದ ಅಂಗವಾಗಿ ನ.೩೦ರಂದು ಸಂಜೆ ೬ ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಕೆ.ಸಿ.ಮಾರ್ಕೆಟ್ ಮಾರ್ಗವಾಗಿ ಗಾಂಧಿವೃತ್ತದವರೆಗೆ ದೀಪ ನಡಿಗೆ (ಕ್ಯಾಂಡಲ್ ಮಾರ್ಚ್) ಜಾಥಾ ಹಾಗೂ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣದ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಡಿ.೦೧ ರಂದು ವಿಶ್ವ ಏಡ್ಸ್ ದಿನದ ಅಂಗವಾಗಿ ಬೆಳಿಗ್ಗೆ ೮-೩೦ಕ್ಕೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಿಂದ ಡಾ.ಬಿ.ಆರ್.ಅಂಬೇಡ್ಕರ್ ನಗರ (ರಾಣಿ ಬಗೀಚಾ), ಅಪ್ಸರಾ ಚಿತ್ರಮಂದಿರ ಮಾರ್ಗವಾಗಿ ಅಹಲ್ಯಾಬಾಯಿ ಹೋಳಕರ್ ವೃತ್ತದ ಮೂಲಕ ನೀಲಕಂಠೇಶ್ವರ ಮಂಗಲ ಕಾರ್ಯಾಲಯ, ಇಂಡಿ ರಸ್ತೆ ವಿಜಯಪುರ ವರೆಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ನಗರದ ಇಂಡಿ ರಸ್ತೆಯ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ವಿಶ್ವ ಏಡ್ಸ್ ದಿನದ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಾಥಾ ಹಾಗೂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಆಧುನಿಕ ಕೃಷಿ ಯಂತ್ರೋಪಕರಣಗಳು ಕುರಿತು ಡಿಸೆಂಬರ್ ೮ ರಿಂದ ೧೦ರವರೆಗೆ ಮೂರು ದಿವಸದ ತರಬೇತಿಯನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.ಆಸಕ್ತ ರೈತರು ಹಾಗೂ ರೈತ ಮಹಿಳೆಯರು ಡಿ.೦೬ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿಯಾದ ಗೀತಾ ಭಜಂತ್ರಿ (ಮೊ: ೯೯೮೬೦೫೪೭೫೦) ಸಂಪರ್ಕಿಸುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
