ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಿಂದೂ ಧರ್ಮವನ್ನೇ ಒಪ್ಪದವರಿಂದ ನಾಡ ಹಬ್ಬ ದಸರಾಹಬ್ಬ ಉದ್ಘಾಟಿಸುತ್ತಿರುವುದು ಖಂಡನಾರ್ಹ ಎಂದು ಯುವಾ ಬ್ರಿಗೇಡ್ ವಿಭಾಗದ ಸಹ ಸಂಚಾಲಕ ಶಿವಮೂರ್ತಿ ಕಾಟಕರ್ (ದೇವಣಗಾಂವ) ಹೇಳಿದರು.
ಅವರು ಯುವಾ ಬ್ರಿಗೇಡ್ ಸಿಂದಗಿ ವತಿಯಿಂದ ರಾಜ್ಯಪಾಲರಿಗೆ ಬರೆದಿರುವ ಮನವಿ ಪತ್ರವನ್ನು ಸಿಂದಗಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಸಲ್ಲಿಸಿ ಮಾತನಾಡುತ್ತಿದ್ದರು.
ದಸರಾ ಹಬ್ಬವು ಸಮಸ್ತ ಹಿಂದುಗಳ ಸಂಸ್ಕೃತಿ ಮತ್ತು ನಂಬಿಕೆಯ ಗುರುತಾಗಿದೆ, ನಮ್ಮ ಪರಂಪರೆಯ ಪ್ರತೀಕವಾಗಿದೆ ಎಂಥ ಭವ್ಯ ಪರಂಪರೆ ಹೊಂದಿರುವ ನಾಡಹಬ್ಬದಲ್ಲಿ ರಾಜಕೀಯ ಮಾಡಿ ಸಮಸ್ತ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಕೆಲಸ ಸರ್ಕಾರ ಮಾಡುತ್ತಿದೆ ಇದನ್ನು ನಾಡಿನ ಸಮಸ್ತ ಹಿಂದೂ ಜನತೆ ಇದನ್ನು ಒಪ್ಪುತ್ತಿಲ್ಲ ಈ ಕಾರಣಕ್ಕಾಗಿ ಭಾನು ಮುಸ್ತಾಕ್ ಅವರಿಂದ ಉದ್ಘಾಟನೆ ವಾಪಸ್ ಪಡೆಯುವ ಮೂಲಕ ಹಿಂದುಗಳ ಭಾವನೆಗೆ ಗೌರವಿಸಬೇಕಿದೆ. ಗೌರವಾನ್ವಿತ ರಾಜ್ಯಪಾಲರು ಮಧ್ಯೆಸ್ಥಿಕೆ ವಹಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಭಾಗ ಸಂಚಾಲಕ ರಾಜು ಪಾಟೀಲ,
ವಿ ಎಚ್ ಪಿ ಮುಖಂಡ ಶೇಖರಗೌಡ ಹರನಾಳ,
ಜಿಲ್ಲಾ ಸಂಚಾಲಕ ಮಡಿವಾಳ ವಾಲಿಕಾರ,
ಸಿಂದಗಿ ತಾಲೂಕು ಸಂಚಾಲಕ ನಿಂಗರಾಜ್ ಪಾಟೀಲ ,
ಆಕಾಶ ಕುಂಬಾರ,
ಮೌನೇಶ ಭಜಂತ್ರಿ,
ಪ್ರೀತಮ್ ಜ್ಯೋಶಿ ,
ಶ್ರೀನಿವಾಸ ನಾವಿ ಉಪಸ್ಥಿತರಿದ್ದರು.