ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೫-೨೬ನೇ ಸಾಲಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕರ್ನಾಟಕ ರಾಜ್ಯ ಕೌಶಲ್ಯ ಓಲಿಂಪಿಕ್ಸ್–೨೦೨೫ ಆರಂಭಿಸಿದೆ. ಕರ್ನಾಟಕ ರಾಜ್ಯ ಕೌಶಲ್ಯ ಓಲಿಂಪಿಕ್ಸ್–೨೦೨೫ ಅನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿ, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸುಧಾರಿತ ತರಬೇತಿ ನೀಡಿ, ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ, ಮುಂದಿನ ದಿನಗಳಲ್ಲಿ ಜರಗುವ India Skill competition Karnataka-2025&World Skills-೨೦೨೬ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ನೀಡಲಾಗುವುದು. ಈ ಕಾರ್ಯಕ್ರಮವು ಚೀನಾ ದೇಶದ ಶಾಂಘೈನಲ್ಲಿ ಆಯೋಜನೆಗೊಳ್ಳುವುದು.
ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ೬೩ ವಿವಿಧ ಕೌಶಲ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.ಆನ್‌ಲೈನ್ ನೋಂದಣಿಗಾಗಿ http://www.skillindiadigital.gov.in/homeಲಿಂಕ್‌ನ್ನು ಉಪಯೋಗಿಸಿ ಅಥವಾ ಇಲ್ಲಿರುವ ಕ್ಯೂಆರ್-ಕೋಡ್‌ನ್ನು ಸ್ಕ್ಯಾನ್ ಮಾಡಿ ದಿನಾಂಕ:೩೦-೦೯-೨೦೨೫ ರೊಳಗಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲೆಯ ಬಾಗಲಕೋಟೆ ರಸ್ತೆ, ಮಹಾನಗರ ಪಾಲಿಕೆ ಹತ್ತಿರವಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ದೂ.ಸಂಖ್ಯೆ: ೦೮೩೫೨-೨೯೭೦೧೯,ಮೊ: ೯೭೪೧೭೫೩೫೬೫, ಮೊ: ೮೨೧೭೬೧೫೨೫೭ ಹಾಗೂ ಮೊ: ೯೬೨೦೨೦೨೧೦೨ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.