ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಮೋರಟಗಿ ವಲಯ ಮಟ್ಟದ ಕ್ರೀಡಾಕೂಟಗಳನ್ನು ಬಗಲೂರ ಪ್ರೌಢಶಾಲೆ ಯಲ್ಲಿ ಆಯೋಜಿಸಲಾಗಿತ್ತು.
ಈ ಕ್ರೀಡಾ ಕೂಟಗಳಲ್ಲಿ ಸರಕಾರಿ ಪ್ರೌಢಶಾಲೆ ಸೋಮಜಾಳ ವಿದ್ಯಾರ‍್ಥಿ/ನಿಯರು ಗಳು ಥ್ರೋ ಬಾಲ್ ನಲ್ಲಿ ಪ್ರಥಮ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ‍್ಥಿಗಳ ಈ ಸಾಧನೆಗೆ ಎಸ್ ಡಿ ಎಮ್ ಸಿ ಸದಸ್ಯರು ಮುಖ್ಯಪಾಧ್ಯಾಯರು ಶಿಕ್ಷಕರು ರ‍್ಷ ವ್ಯಕ್ತ ಪಡಿಸಿದ್ದಾರೆ.
ಈ ಸಂದರ‍್ಭದಲ್ಲಿ ದೈಹಿಕ ಶಿಕ್ಷಕ ಭೀಮರಾಯ ಅರಳಗುಂಡಗಿ, ಎನ್ ಎಸ್ ಬಿರಾದಾರ, ಸಂತೋಷ ಅಮರಗೊಂಡ, ಸೂರ‍್ಯಕಾಂತ್ ಸಾಲೋಟಗಿ, ರಾಕೇಶ್ ಬಿರಾದಾರ ಇದ್ದರು