ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿಜಯಪುರ ಜಿಲ್ಹಾ ಅಮೇಚೂರ ಕಬಡ್ಡಿ ಸಂಸ್ಥೇಯ ಪ್ರಧಾನ ಕಾರ್ಯದರ್ಶೀಯಾಗಿ ಮತ್ತು ರಾಜ್ಯ ಸೈಕ್ಲಿಂಗ್ ಅಸೋಷೀಯೇಶನ್ ಸಂಘಟನಾ ಕಾರ್ಯದರ್ಶಿಯಾಗಿ ಕಳೆದ ಮೂರು ದಶಕಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೇ ಬಯಸದೆ ವೇತನವಿಲ್ಲದೆ ನಿಸ್ವಾರ್ಥ ಮನೋಬಲದಿಂದ ಆಟಗಾರರಿಗೆ ಸ್ಥೈರ್ಯ ತುಂಬುತ್ತಿದ್ದ ಕ್ರೀಡಾ ಪ್ರೇಮಿ ರಮೇಶ ಪಾಟೀಲ ಇನ್ನು ನೆನಪು ಮಾತ್ರ.
ಕೃಷ್ಣಾ ನದಿ ತೀರದ ಅವಳಿ ಜಿಲ್ಹೆಯ ನೂರಾರು ಯುವಕ ಯುವತಿಯರಿಗೆ ಕ್ರೀಡೆಯ ಬಗ್ಗೆ ಅದರಲ್ಲೂ ಕಬಡ್ಡಿ ಆಟ ಮತ್ತು ಸೈಕ್ಲೀಂಗ್ ಸ್ಪರ್ಧೇಯ ಬಗ್ಗೆ ಆಸಕ್ತಿ ಮೂಡಿಸಿ ಸ್ಪೂರ್ತಿ ತುಂಬಿ ಗ್ರಾಮೀಣ ಪಟ್ಟಣ ನಗರ ಪ್ರದೇಶದ ಹಲವಾರು ಆಟಗಾರರು ತಂಡಗಳು ತಾಲೂಕು ಜಿಲ್ಹಾ ರಾಜ್ಯ ಹಾಗೂ ರಾಷ್ಟç ಮಟ್ಟದ ಅತ್ಯುತ್ತಮ ಕ್ರೀಡಾ ಪ್ರತಿಭೆಗಳು ಮಿಂಚಿ ಪ್ರಶಸ್ತಿ ಪಡೆಯಲು ಕಾಣದ ಕೈಯಂತೆ ಶಕ್ತಿ ತುಂಬಲು ಶ್ರಮಿಸಿದವರು ರಮೇಶ ತ್ರೀವಿಕ್ರಮ ಪಾಟೀಲ.
ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಕ್ರೀಡಾ ಸಾಧಕರನ್ನು ನಾಡಿಗೆ ಪರಿಚಯಿಸಿದ ರಮೇಶ ಜನಿಸಿದ್ದು ಕೆನೆಮೋಸರ ಸವಿನಾಡು ಕೊಲ್ಹಾರದಲ್ಲಿ. ಇವರು ದೈಹಿಕ ಶಿಕ್ಷಣವನ್ನು ಓದದೆ ಇದ್ದರೂ ಪಟ್ಟಣ ಸುತ್ತಲಿನ ಗ್ರಾಮಗಳಲ್ಲಿನ ಶಾಲೆಯ ಮಕ್ಕಳಿಗೆ ಕಬಡ್ಡಿ ಆಟವನ್ನು ಆಡಿಸುವ ಕಲಿಸುವ ಹವ್ಯಾಸ ಇವರಿಗೆ ರೂಡಿಗತವಾಗಿತ್ತು. ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ವೇತನ ಪಡೆಯುವ ದೈಹಿಕ ಶಿಕ್ಷಣ ಕಲಿಸುವ ಶಿಕ್ಷಕರು ಕ್ರೀಡಾ ಇಲಾಖೆಯ ಅಧಿಕಾರಿಗಳು ಕ್ರೀಡಾ ಚಟುವಟಿಕೆಯಲ್ಲಿ ಯುವಕ ಯುವತಿಯರನ್ನು ಕರೆತರಲು ಹಿಂಜರಿಕೆ ಮಾಡುವ ಕಾಲಘಟ್ಟದಲ್ಲಿ ಹೊಸ ಹೊಸ ಆಟಗಾರರನ್ನು ತಯಾರು ಮಾಡುವಲ್ಲಿ ನಿಸ್ಸೀಮರಾಗಲು ಅವರಲ್ಲಿನ ಕ್ರೀಡಾ ಆಸಕ್ತಿ ಮತ್ತು ಕಬಡ್ಡಿ ಆಟ ಹಾಗೂ ಸೈಕ್ಲಿಂಗ್ ಸ್ಪರ್ಧೆಯ ಮೇಲಿನ ಪ್ರೀತಿಯೇ ಕಾರಣ ಎನ್ನಬಹುದು.
ಕಬಡ್ಡಿ ಪಂದ್ಯಾವಳಿ ಮತ್ತು ಸೈಕ್ಲೀಂಗ್ ಸ್ಪರ್ಧೇಗಳು ನಾಡಿನ ದೇಶದ ಯಾವುದೆ ಒಂದು ಊರಿನಲ್ಲಿ ನಡೆದರೂ ಕ್ರಿಕೇಟ್ ಆಟಗಾರರ ಜೊತೆ ಥ್ರೋಬಾಲ್ ಎಸೆಯುವ ರಾಘವೇಂದ್ರ ಇರುವ ಹಾಗೆ ಕೊಲ್ಹಾರದ ರಮೇಶ ಪಾಟೀಲ ಇಲ್ಲದೆ ಆಟಗಳು ಸ್ಪರ್ಧೆಗಳು ನಡದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬಾಗವಹಿಸುವ ಹವ್ಯಾಸವನ್ನು ನಾಲ್ಕು ದಶಕಗಳ ಕಾಲ ರೂಡಿಗತ ಮಾಡಿಕೊಂಡಿದ್ದ ರಮೇಶ ತಂಡದ ಆಟಗಾರರಿಗೆ ಪ್ರೋತ್ಸಾಹ ಕೊಟ್ಟು ಬಹುಮಾನ ಪಡೆಯುವಲ್ಲಿ ಪಾಟೀಲ ಕೈಚಳಕ ಇರುತ್ತಿತ್ತು ಎನ್ನುತ್ತಾರೆ ಪ್ರೇರಣೆ ಪಡೆದ ಆಟಗಾರರು.
ಕೊಲ್ಹಾರ ಪುಟ್ಟ ಪಟ್ಟಣದಲ್ಲಿ ರಾಜ್ಯ ಅಂತರ್ ರಾಜ್ಯ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗಳು ಏನಾದರೂ ಜರುಗಿರಬೇಕಾದರೆ ಆಯೋಜಕರ ಮನ ಒಲಿಸುವ ಕಾರ್ಯ ಮಾಡಿದ ಪ್ರತಿಫಲವೇ ಅಂತರ್ ರಾಷ್ಟ್ರೀಯ ಕಬಡ್ಡಿ ಆಟಗಾರರಾದ ಬಿ.ಸಿ. ರಮೇಶ ಬಿ.ಸಿ. ಸುರೇಶ ಮತ್ತು ಹೊನ್ನಪ್ಪನಂತವರು ಕೊಲ್ಹಾರಕ್ಕೆ ಬರಲು ಪಾಟೀಲರ ಒಡನಾಟವೇ ಕಾರಣ. ಇವರಿಗೆ ಪ್ರೇರಕ ಶಕ್ತಿಯಾದವರು ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಚಂದ್ರಶೇಖರ ಸಂಗಣ್ಣ ಬೆಳ್ಳುಬ್ಬಿ, ಆತ್ಮೀಯ ಸ್ನೇಹಿತ ಎಸ್.ಎನ್. ಗಿಡ್ಡಪ್ಪಗೋಳ ಎಂದರೆ ತಪ್ಪಾಗಲಾರದು.
ಅದರಂತೆ ರಮೇಶ ಕಬಡ್ಡಿ ಆಟದ ನಿರ್ಣಾಯಕರಾಗಿ ತರಬೇತುದಾರರಾಗಿ ಹಲವಾರು ಪಂದ್ಯಾವಳಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಸೈಕ್ಲೀಂಗ್ ರೇಸ್ ನಲ್ಲಿಯೂ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿಭೆಗಳು ರಾಜ್ಯ ರಾಷ್ಟç ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೇಯಲ್ಲಿ ಬಾಗವಹಿಸಿ ಬಹುಮಾನ ಪಡೆದು ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿ ಕ್ರೀಡಾ ಕೋಟಾ ಅಡಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ನೆಮ್ಮದಿ ಜೀವನ ಸಾಗಿಸುವಲ್ಲಿ ರಮೇಶ ಪಾಟೀಲರ ಕೊಡುಗೆ ಅವಿಸ್ಮರಣೀಯವಾಗಿದೆ ಎನ್ನಬಹುದು. ಆಟಗಳಲ್ಲಿ ಬಾಗವಹಿಸಲು ಹಿಂದೇಟು ಹಾಕಿ ದೈಹಿಕ ಶ್ರಮ ವ್ಯರ್ಥವಾಗಬಾರದೆಂದು ಯುವಕ ಯುವತಿಯರನ್ನು ಎಲ್ಲ ತರಹದ ಆಟಗಳಲ್ಲಿ ಪಾಲ್ಗೋಳ್ಳವಂತೆ ಹುರಿದುಂಬಿಸುತ್ತಿದ್ದ ಕ್ರೀಡಾ ಕ್ಷೇತ್ರದ ಅಪ್ಪಟ ಚಿನ್ನ ರಮೇಶ ಪಾಟೀಲ ನಮ್ಮನ್ನೇಲ್ಲಾ ಅಗಲಿರುವದು ಕೊಲ್ಹಾರದ ಕ್ರೀಡಾ ಜ್ಯೋತಿ ನಂದಿತು ಎನ್ನುವಂತಾಗಿದೆ. ಆದ್ದರಿಂದ ಅವರ ನೆನಪು ಕಾರ್ಯಕ್ರಮ ಸೆ.೧೧ ಗುರುವಾರ ಜರುಗುವುದು.