ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳೆಯರಿಗಾಗಿ ಕಾಯಕ ಸ್ಪೂರ್ತಿ, ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ, ಕೌಶಲ್ಯ ಉನ್ನತೀಕರಣ ಯೋಜನೆ, ಚರ್ಮ ಶಿಲ್ಪ ಯೋಜನೆ, ವಸತಿ ಯೋಜನೆ, ಕಿರು ಆರ್ಥಿಕ ನೇರ ಸಾಲ, ಸ್ವಾವಲಂಭಿ-ಸಂಚಾರಿ ಮಾರಾಟ ಮಳಿಗೆ ಯೋಜನೆಗಳಿಗಾಗಿ ಅಕ್ಟೋಬರ್ ೮ರೊಳಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜಿಲ್ಲೆಯ ಜಿಲ್ಲಾ ಸಂಯೋಜಕರು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಕಚೇರಿಗೆ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.