Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಮಾರುಕಟ್ಟೆ ಪ್ರದೇಶ ಮಳೆ ನೀರಿನಿಂದ ಆವೃತ್ತವಾಗಿ ಗ್ರಾಹಕರು ವ್ಯಾಪಾರ ಮಳಿಗೆಗಳಿಗೆ ತೆರಳಲು ಪ್ರಯಾಸ ಪಡುವಂತಾಗಿದೆ.ಪಟ್ಟಣದ ಬಸ್ ನಿಲ್ದಾಣದ ಎಡ, ಬಲಗಳಲ್ಲಿ ನಿಮಾಣವಾದ ನೂತನ ಮಾರುಕಟ್ಟೆ ಪ್ರದೇಶ ಅಕ್ಷರಶ ಮಳೆ ನೀರಿನಿಂದ ಆವೃತ್ತವಾಗಿ ಕೆಸರಿನ ಗದ್ದೆಯಂತಾಗಿದೆ. ತಾಲ್ಲೂಕು ಕೇಂದ್ರ ಹಾಗೂ ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶದ ವ್ಯಾಪಾರ ಮಳಿಗೆಗಳಿಗೆ ಕೊಳ್ಳಲು ಬರುವಂತ ಗ್ರಾಹಕರು ಮಳೆ ಬರುವುದೇ ತಡ ನಡೆಯಲು ಹರಸಾಹಸ ಪಡುವಂತಾಗಿದೆ. ಈ ಬಗ್ಗೆ ಗಣ್ಯವ್ಯಾಪಾರಿ ಶಿವಾನಂದ ಅತನೂರ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಮಳೆಗಾಲ ಬರುವುದೇ ತಡ ನೂತನ ಮಾರುಕಟ್ಟೆ ಪ್ರದೇಶ ಕೆಸರಿನಿಂದ ತುಂಬಿ ಗ್ರಾಹಕರ ಪ್ರವೇಶಕ್ಕೆ ಅವಕಾಶವಿಲ್ಲದಂತಾಗುತ್ತದೆ. ಇನ್ನೂ ದ್ವಿಚಕ್ರ ವಾಹನಗಳಲ್ಲಿ ಬರಬೇಕೆಂದರೆ ಅದು ಸಹ ಜಾರುತ್ತಲೇ ತೆರಳುತ್ತದೆ. ಪ್ರತಿ ವರ್ಷ ಮಳೆ ನೀರು ಎಲ್ಲೆಂದರಲ್ಲಿಯೇ ನಿಲ್ಲುವುದು ವ್ಯಾಪಾರಿಗಳು ಹಾಗೆಯೇ ಅಂಗಡಿಗಳನ್ನು ತೆರೆಯುವುದು ನಡೆದಿದ್ದು, ಗ್ರಾಹಕರು ಸಹ ಅನಿವಾರ್ಯವಾಗಿ ನಡೆದು ಬಂದು ವ್ಯಾಪಾರ ಮಾಡುವಂತಾಗಿದೆ.ನೂತನ ತಾಲ್ಲೂಕು ಕೇಂದ್ರದ ಈ ಮಾರುಕಟ್ಟೆ ಪ್ರದೇಶ ಮಳೆಗಾಲದಲ್ಲಿ ಮಾತ್ರ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಬಾಗಲಕೋಟ ಜಿಲ್ಲಾ ಆಡಳಿತ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ನಿರ್ಮಲಾ ಮ. ಬೀಳಗಿಯವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ.ಬಾಗಲಕೋಟ ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳಿಗಾಗಿ ಅವಿರತವಾಗಿ ಶ್ರಮಿಸಿದ ಶಿಕ್ಷಕರಿಗೆ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಜಿಲ್ಲಾ ಪಂಚಾಯತನಿಂದ ನೀಡಲಾಗುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ನಿರ್ಮಲಾ ಮ. ಬೀಳಗಿಯವರು ಭಾಜನರಾಗಿದ್ದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅಡಿವೆಪ್ಪ ಪರೀಟ ಮತ್ತು ಸದಸ್ಯರು ಹಾಗೂ ಸಮಸ್ತ ಶಿಕ್ಷಕರ ಬಳಗ ಅಭಿನಂದನೆ ಸಲ್ಲಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶ್ವೇತಾ ಲ ಬಡಿಗೇರ ಅವರು ಸಲ್ಲಿಸಿದ್ದ “ಎಂಟ್ರಪ್ರೆನ್ಯೂರಿಯಲ್ ಬಿಹೆವಿಯರ್ ಆಫ್ ರೂರಲ್ ವುಮನ್ ಇನ್ ಡೈರಿ ಫಾರ್ಮ್ಸ: ಎ ಸ್ಟಡಿ ಆಫ್ ಧಾರವಾಡ ಡಿಸ್ಟಿçಕ್ಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಶ್ವೇತಾ ಲ ಬಡಿಗೇರ ಅವರು ಅರ್ಥಶಾಸ್ತ್ರ ವಿಭಾಗದ ಪ್ರೊ.ಡಿ.ಎಮ್.ಮದರಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಶ್ವೇತಾ ಲ ಬಡಿಗೇರ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಬೆಂಗಳೂರಿನ ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಪ್ರಾಯೋಜಿಸಿದ ಉದ್ಯಮಶೀಲತಾಭಿವೃದ್ಧಿಯ ಕುರಿತು ೧೦ ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಂದ ಅರ್ಜಿ ಆಹ್ವಾನಿಸಲಾಗಿದೆ.ತರಬೇತಿಯಲ್ಲಿ ಉದ್ಯಮದ ಆಯ್ಕೆ, ಮಾರುಕಟ್ಟೆ ಸಮೀಕ್ಷೆ, ಕೈಗಾರಿಕಾ ಇಲಾಖೆಯ ಯೋಜನೆಗಳು, ಬ್ಯಾಂಕಿಂಗ್ ಯೋಜನೆಗಳನ್ನು ಪ್ರಸ್ತುತಪಡಿಸುವ ವಿಧಾನ, ಬಿಸಿನೆಸ್ ಪ್ಲಾö್ಯನ್, ಜಿಎಸ್‌ಟಿ, ಲೆಕ್ಕಶಾಸ್ತçಗಳ ಕುರಿತು ಮಾಹಿತಿ ನೀಡಲಾಗುವುದು. ಆಸಕ್ತರು ಸೆಪ್ಟೆಂಬರ್ ೧೯ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೮೮೮೪೧೮೪೪೩೯, ೮೭೬೨೪೮೩೪೭೮ ಸಂಪರ್ಕಿಸಬಹುದಾಗಿದೆ ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸಿ ಎಂದು ಶಿಕ್ಷಕರಿಗೆ ಕರೆಕೊಟ್ಟ ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಅವರು ವಿದ್ಯೆ ಕಲಿಸುವುದಷ್ಟೆ ಶಿಕ್ಷಣದ ಉದ್ದೇಶ ಅಲ್ಲ. ಮಕ್ಕಳನ್ನು ವಿಶ್ವ ಮಾನವರನ್ನಾಗಿ, ಸುಸಂಸ್ಕೃತರನ್ನಾಗಿ, ಒಳ್ಳೆಯ ಸತ್ಪçಜೆಗಳನ್ನಾಗಿ ರೂಪಿಸುವುದೂ ಶಿಕ್ಷಣದ ಗುರಿ ಆಗಬೇಕು ಎಂದು ಹೇಳಿದರು.ಪಟ್ಟಣದ ಗುರುಕೃಪಾ ಮಂಗಲ ಕಾರ್ಯಾಲಯದಲ್ಲಿ ತಾಲೂಕ ಆಡಳಿತ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರಪತಿಯಿಂದ ಹಿಡಿದು ರೈತರವರೆಗೆ ಮತ್ತು ಇಡೀ ಮನುಕುಲವನ್ನು ನಿರ್ಮಿಸುವವನು ಶಿಕ್ಷಕ.ಪ್ರಾಚೀನ ಕಾಲದಿಂದ ಗುರುಗಳನ್ನು ದೇವರ ರೂಪದಲ್ಲಿ ಪೂಜಿಸುತ್ತ ಬಂದಿರುವರು, ಶ್ರೇಷ್ಠ ಗುರು ಪರಂಪರೆ ಹೊಂದಿರುವ ದೇಶ ಭಾರತ. ನಳಂದ ಹಾಗೂ ತಕ್ಷಶಿಲಾ ವಿಶ್ವವಿದ್ಯಾಲಯಗಳು ಶ್ರೇಷ್ಠ ವಿದ್ಯೆ ನೀಡುವ ಗುರು ಪರಂಪರೆ ಹೊಂದಿರುವ ವಿದ್ಯಾ ಮಂದಿರಗಳು ಇವತ್ತಿಗು ಇವೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್ ಎಸ್ ಪಾಟೀಲ ಮಾತನಾಡಿದರು.ದಿವ್ಯ ಸಾನಿದ್ಯ ವಹಿಸಿದ ಅಮೃತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಜಗತ್ತಿನ ಯಾವ ಅಧಿಕಾರಿಗಳಿಗೂ…

Read More

ಶಿಕ್ಷಕಿ ಶಿವಲೀಲಾ ಬಿರಾದಾರ ಮತ್ತು ಶಿಕ್ಷಕಿ ಸುಶ್ಮಿತಾ ನಿಗಡೆ ಗೆ ಶಿಕ್ಷಕರತ್ನ ಪ್ರಶಸ್ತಿ ಪ್ರದಾನ | ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅಭಿಮತ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಮಂಗಳವಾರ ಪಟ್ಟಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಗುರುವಂದನಾ ಹಾಗೂ ವಿಜಯಪುರ ಜಿಲ್ಲಾ ಹಾಗೂ ತಾಲೂಕ ಅತ್ಯುತ್ತಮ ಶಿಕ್ಷಕರತ್ನ ಪ್ರಶಸ್ತಿ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹಾಗೂ ಶ್ರೀ ಅಮೃತಾನಂದ ಸ್ವಾಮಿಗಳು ಜ್ಯೋತಿಬೇಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮ ಕುರಿತು ಮಾತನಾಡಿದ ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಅವರು, ವಿದ್ಯೆ ಕಲಿಸುವುದಷ್ಟೆ ಶಿಕ್ಷಣದ ಉದ್ದೇಶ ಅಲ್ಲ. ಸುಸಂಸ್ಕೃತರನ್ನಾಗಿ, ಒಳ್ಳೆಯ ಸತ್ಪ್ರಜೆಗಳನ್ನಾಗಿ ರೂಪಿಸುವುದಾಗಬೇಕು ಎಂದು ಹೇಳಿದರು.ರಾಜ್ಯದಲ್ಲಿ ಅಷ್ಟೆ ಅಲ್ಲ ದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಪಾಲುದಾರಿಕೆ ನೂರಕ್ಕೆ ೭೦ ರಿಂದ ೮೦ ಅಷ್ಟು ಇದೆ ಖಾಸಗಿ ಶಾಲೆ ಅಥವಾ ವಿದ್ಯಾಸಂಸ್ಥೆಯು ಇಂದು ಅತ್ಯುತ್ತಮ ಗುಣಮಟ್ಟದ ಶಿಕಣ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರೊ. ಉಜ್ವಲಾ ಪಾಟೀಲ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೆಣ್ಣು ಪ್ರತಿಯೊಂದು ಸಂದರ್ಭದಲ್ಲಿ ಸಂರಕ್ಷತೆಯಿಂದ ಇರುವುದು ಅವಶ್ಯಕ ವಿವಿಧ ಒತ್ತಡಗಳಲ್ಲಿ ಒಳಗಾಗದೆ ದೈಹಿಕ, ಮಾನಸಿಕ ಆರೋಗ್ಯದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹದು ಎಂದು ಅಂಜುಮನ್ ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಉಜ್ವಲಾ ಪಾಟೀಲ್ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ ಕ್ಯೂ ಎ ಸಿ, ಮಹಿಳಾ ಸಬಲೀಕರಣ ಮತ್ತು ವಿದ್ಯಾರ್ಥಿ ಸಮಾಲೋಚನಾ ಕೋಶ, ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ ಹೆಣ್ಣುಮಕ್ಕಳನ್ನು ಸಶಕ್ತ, ಸುರಕ್ಷಿತ ಭವಿಷ್ಯ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು ಮಹಿಳೆಯರ ಕುಟುಂಬ, ಸಮಾಜ, ಮದುವೆ, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿಗಳು ತಮ್ಮ ಅತ್ಮೂಲ್ಯವಾದ ಜೀವನವನ್ನ ಕಾಪಾಡಿಕೊಳ್ಳಬೇಕು. ಹೆಣ್ಣುಮಕ್ಕಳು ದೈಹಿಕವಾಗಿ, ಮಾನಸಿಕ, ಸಧೃಡತೆಯನ್ನು ಕಾಯ್ದುಕೊಳ್ಳಬೇಕು ಎಂದರು.ಈ ವೇಳೆಯಲ್ಲಿ ಪ್ರಾಚಾರ್ಯೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲ್ಲೂಕಿನ ಕಾರಜೋಳ ಕ್ರಾಸ್ ಹತ್ತಿರ ಸೆ.10 ಬುಧವಾರ ರಂದು ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದ 100 ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ವಶಪಡಿಸಿಕೊಂಡಿದ್ದಾರೆ.ಕಳ್ಳಭಟ್ಟಿ ಸರಾಯಿ ಸಾಗಾಣಿಕೆ ಮಾಡುವಾಗ ಅಬಕಾರಿ ದಾಳಿ ಮಾಡಿ ಒಂದು ದ್ವೀಚಕ್ರ ವಾಹನ ಹಾಗೂ ಅಂದಾಜು 100 ಮಿಲಿ ಅಳತೆಯುಳ್ಳ 1000 ಕಳ್ಳಭಟ್ಟಿ ಸರಾಯಿ ತುಂಬಿರುವ ಪಾಕೀಟುಗಳನ್ನು ಜಪ್ತು ಪಡಿಸಿಕೊಂಡು ಮಾಹಾದೇವ ಪೂಜಾರಿ ಅಬಕಾರಿ ನಿರೀಕ್ಷಕರು ಉಪ-ವಿಭಾಗ ವಿಜಯಪುರ ರವರು ಪ್ರಕರಣವನ್ನು ಧಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದಾರೆ.ಆರೋಪಿತನು ಸ್ಥಳದಲ್ಲಿಯೇ ವಾಹನ ಮತ್ತು ಮುದ್ದೇಮಾಲು ಬಿಟ್ಟು ಪರಾರಿ ಆಗಿರುತ್ತಾನೆ.ಈ ದಾಳಿಯಲ್ಲಿ ಅಬಕಾರಿ ಹಿರಿಯ ಪೇದೆಗಳಾದ PK ಕುಂಬಾರ, ML ಪೂಜಾರಿ ಅನೀಲ್ ಕುಂಬಾರ ಮತ್ತು ಯಲ್ಲಪ್ಪ ಭಜೆಂತ್ರಿ ಪಾಲ್ಗೊಂಡಿದ್ದರು.ಸದರಿ ಧಾಳಿಯಲ್ಲಿ ಜಪ್ತುಪಡಿಸಿಕೊಂಡ ಕಳ್ಳಭಟ್ಟಿ ಸರಾಯಿ ಮತ್ತು ಮತ್ತು ದ್ವೀಚಕ್ರ ವಾಹಣದ ಅಂದಾಜು ಮೊತ್ತ 80,000/- ರೂಪಾಯಿಯಷ್ಟು ಇರುತ್ತದೆ.ಡಾ. ವೈ ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಜಾರಿ & ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ,…

Read More

ವಿಜಯಪುರದ ಅಂಗನವಾಡಿ, ವಸತಿ ಶಾಲೆ, ಹಾಸ್ಟೆಲ್ಗಳಿಗೆ ದಿಡೀರ್ ಭೇಟಿ ನೀಡಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಂಗನವಾಡಿ ಹಾಸ್ಟೆಲ್, ವಸತಿ ಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಅಧಿಕಾರಿಗಳೊಂದಿಗೆ ದಿಡೀರ್ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರ ಸಂಗಮೇಶ ಬಬಲೇಶ್ವರ ಅವರು ಎಸ್ ಎಸ್ ಎಲ್ ಸಿ ಮಕ್ಕಳೊಂದಿಗೆ “ಭಯಮುಕ್ತವಾಗಿ ಪರೀಕ್ಷೆ ಎದುರಿಸುವುದು ಹೇಗೆ? ಎನ್ನುವ ಕುರಿತು ಸಂವಾದ ನಡೆಸಿದರು.ಶಾಲೆ ಅಂಗನವಾಡಿ ವಸತಿ ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಿಸುವಂತೆ ಹಾಗೂ ಮಕ್ಕಳ ಸ್ನೇಹಿಯಾದ ವಾತಾವರಣ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಕಂಡುಬಂದ ನ್ಯೂನ್ಯತೆಗಳ ಪಟ್ಟಿ ಮಾಡಿದ ಅವರು ಭೇಟಿ ನೀಡಿದ ಸ್ಥಳದಿಂದಲೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಗತ್ಯ ಕ್ರಮ ಕೈಗೊಂಡು ವ್ಯವಸ್ಥೆ ಸರಿಪಡಿಸುವಲ್ಲಿ ಅಧಿಕಾರಿಗಳ ಮೇಲೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆ ಅಭಿವೃದ್ಧಿ(Curriculum Vitae)ಕಾರ್ಯಕ್ರಮ ಬರವಣಿಗೆ) ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಎ.ಎಸ್.ಪಿ‌ ಕಾಮರ್ಸ್ ಕಾಲೇಜಿನ ಎಂ.ಬಿ.ಎ ವಿಭಾಗದ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ ಮಾತನಾಡಿ, ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆಯಲ್ಲಿ ಇರಬೇಕಾದ ಘಟಕಾಂಶಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು.ಇದೇ ವೇಳೆ ಪ್ರಶಿಕ್ಷಣಾರ್ಥಿಗಳಿಗೆ ಮಾದರಿ ಬರವಣಿಗೆಯನ್ನು ಯನ್ನು ಸಿದ್ಧಪಡಿಸಿ ತೋರಿಸಿದರು.ಈ ಸಂದರ್ಭದಲ್ಲಿ‌ ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವೈ. ಖಾಸನಿಸ, ಸಹಪ್ರಾಧ್ಯಾಪಕ ಡಾ. ಎಂ. ಎಸ್. ಹಿರೇಮಠ, ಡಾ.ಎಂ.ಬಿ. ಕೋರಿ, ಸಹಾಯಕ ಪ್ರಾಧ್ಯಾಪಕ ಡಾ. ಜೆ.ಎಸ್. ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್. ಎಸ್. ಪಾಟೀಲ, ಪಿ. ಡಿ ಮುಲ್ತಾನಿ, ಡಾ. ಎಸ್.ಪಿ. ಶೇಗುಣಸಿ, ಮಲ್ಲಯ್ಯ ಎಸ್. ಹಿರೇಮಠ ದೈಹಿಕ ಶಿಕ್ಷಣ ನಿರ್ದೇಶಕ ಎಂ. ಪಿ. ಕುಪ್ಪಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಪ್ರಶಿಕ್ಷಣಾರ್ಥಿ ವೈಷ್ಣವಿ ಹಡಪದ ನಿರೂಪಿಸಿ, ವಂದಿಸಿದರು.

Read More