ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲ್ಲೂಕಿನ ಕಾರಜೋಳ ಕ್ರಾಸ್ ಹತ್ತಿರ ಸೆ.10 ಬುಧವಾರ ರಂದು ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದ 100 ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳಭಟ್ಟಿ ಸರಾಯಿ ಸಾಗಾಣಿಕೆ ಮಾಡುವಾಗ ಅಬಕಾರಿ ದಾಳಿ ಮಾಡಿ ಒಂದು ದ್ವೀಚಕ್ರ ವಾಹನ ಹಾಗೂ ಅಂದಾಜು 100 ಮಿಲಿ ಅಳತೆಯುಳ್ಳ 1000 ಕಳ್ಳಭಟ್ಟಿ ಸರಾಯಿ ತುಂಬಿರುವ ಪಾಕೀಟುಗಳನ್ನು ಜಪ್ತು ಪಡಿಸಿಕೊಂಡು ಮಾಹಾದೇವ ಪೂಜಾರಿ ಅಬಕಾರಿ ನಿರೀಕ್ಷಕರು ಉಪ-ವಿಭಾಗ ವಿಜಯಪುರ ರವರು ಪ್ರಕರಣವನ್ನು ಧಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದಾರೆ.
ಆರೋಪಿತನು ಸ್ಥಳದಲ್ಲಿಯೇ ವಾಹನ ಮತ್ತು ಮುದ್ದೇಮಾಲು ಬಿಟ್ಟು ಪರಾರಿ ಆಗಿರುತ್ತಾನೆ.
ಈ ದಾಳಿಯಲ್ಲಿ ಅಬಕಾರಿ ಹಿರಿಯ ಪೇದೆಗಳಾದ PK ಕುಂಬಾರ, ML ಪೂಜಾರಿ ಅನೀಲ್ ಕುಂಬಾರ ಮತ್ತು ಯಲ್ಲಪ್ಪ ಭಜೆಂತ್ರಿ ಪಾಲ್ಗೊಂಡಿದ್ದರು.
ಸದರಿ ಧಾಳಿಯಲ್ಲಿ ಜಪ್ತುಪಡಿಸಿಕೊಂಡ ಕಳ್ಳಭಟ್ಟಿ ಸರಾಯಿ ಮತ್ತು ಮತ್ತು ದ್ವೀಚಕ್ರ ವಾಹಣದ ಅಂದಾಜು ಮೊತ್ತ 80,000/- ರೂಪಾಯಿಯಷ್ಟು ಇರುತ್ತದೆ.
ಡಾ. ವೈ ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಜಾರಿ & ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ, ಫಕೀರಪ್ಪ ಚಲವಾದಿ ಅಬಕಾರಿ ಜಂಟಿ ಆಯುಕ್ತರು ಜಾರಿ & ತನಿಖೆ ಬೆಳಗಾವಿ ವಿಭಾಗ ಹಾಗೂ ಮುರಳಿದರ ಅಬಕಾರಿ ಉಪ ಆಯುಕ್ತರು ವಿಜಯಪುರ ಜಿಲ್ಲೆ ಮತ್ತು ಎಸ್,ಎನ್ ಹಿರೆಮಠ ಅಬಕಾರಿ ಉಪ-ಅಧೀಕ್ಷಕರು ಉಪ-ವಿಭಾಗ ವಿಜಯಪುರ ಇವರ ಮಾರ್ಗದರ್ಶನದಲ್ಲಿ ಹಾಗೂ ಮಹಾದೇವ ಪೂಜಾರಿ ಅಬಕಾರಿ ನಿರೀಕ್ಷಕರು ಉಪ-ವಿಭಾಗ ವಿಜಯಪೂರ ರವರ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ.