ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶ್ವೇತಾ ಲ ಬಡಿಗೇರ ಅವರು ಸಲ್ಲಿಸಿದ್ದ “ಎಂಟ್ರಪ್ರೆನ್ಯೂರಿಯಲ್ ಬಿಹೆವಿಯರ್ ಆಫ್ ರೂರಲ್ ವುಮನ್ ಇನ್ ಡೈರಿ ಫಾರ್ಮ್ಸ: ಎ ಸ್ಟಡಿ ಆಫ್ ಧಾರವಾಡ ಡಿಸ್ಟಿçಕ್ಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ಶ್ವೇತಾ ಲ ಬಡಿಗೇರ ಅವರು ಅರ್ಥಶಾಸ್ತ್ರ ವಿಭಾಗದ ಪ್ರೊ.ಡಿ.ಎಮ್.ಮದರಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಶ್ವೇತಾ ಲ ಬಡಿಗೇರ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.