ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರೊ. ಉಜ್ವಲಾ ಪಾಟೀಲ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಣ್ಣು ಪ್ರತಿಯೊಂದು ಸಂದರ್ಭದಲ್ಲಿ ಸಂರಕ್ಷತೆಯಿಂದ ಇರುವುದು ಅವಶ್ಯಕ ವಿವಿಧ ಒತ್ತಡಗಳಲ್ಲಿ ಒಳಗಾಗದೆ ದೈಹಿಕ, ಮಾನಸಿಕ ಆರೋಗ್ಯದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹದು ಎಂದು ಅಂಜುಮನ್ ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಉಜ್ವಲಾ ಪಾಟೀಲ್ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ ಕ್ಯೂ ಎ ಸಿ, ಮಹಿಳಾ ಸಬಲೀಕರಣ ಮತ್ತು ವಿದ್ಯಾರ್ಥಿ ಸಮಾಲೋಚನಾ ಕೋಶ, ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ ಹೆಣ್ಣುಮಕ್ಕಳನ್ನು ಸಶಕ್ತ, ಸುರಕ್ಷಿತ ಭವಿಷ್ಯ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು ಮಹಿಳೆಯರ ಕುಟುಂಬ, ಸಮಾಜ, ಮದುವೆ, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ತಮ್ಮ ಅತ್ಮೂಲ್ಯವಾದ ಜೀವನವನ್ನ ಕಾಪಾಡಿಕೊಳ್ಳಬೇಕು. ಹೆಣ್ಣುಮಕ್ಕಳು ದೈಹಿಕವಾಗಿ, ಮಾನಸಿಕ, ಸಧೃಡತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಈ ವೇಳೆಯಲ್ಲಿ ಪ್ರಾಚಾರ್ಯೆ ಡಾ. ರಾಬಿಯಾ ಎಂ.ಮಿರ್ಧೆ ಮಾತನಾಡಿ ಮಹಿಳಾ ಸಬಲೀಕರಣದ ಬಗ್ಗೆ ಅಪಾರ ಮಾಹಿತಿಯನ್ನು ನೀಡಿದರು. ಮಹಿಳೆಯರು ತುಂಬಾ ಬಲವಾದ ಮನಸ್ಸಿನವರು ಮತ್ತು ಸಮಾಜದಲ್ಲಿ ಮಹಿಳೆಯರು ಹೇಗೆ ವರ್ತಿಸಬೇಕು ಎಂದು ಅವರು ಹೇಳಿದರು.
ಮಹಿಳಾ ಸಬಲೀಕರಣದ ಕೋಶದ ಅಧ್ಯಕ್ಷರಾಗಿದ್ದ ಪ್ರೊ. ವಿದ್ಯಾ ಪಾಟೀಲ್, ಮಹಿಳಾ ಸಬಲೀಕರಣದ ಶಕ್ತಿ ಮತ್ತು ಸಬಲೀಕರಣದ ಪ್ರಾಮುಖ್ಯತೆ, ಮಹಿಳಾ ಶಿಕ್ಷಣ ಮತ್ತು ಶೀಘ್ರದಲ್ಲೇ ಬರಲಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಪ್ರೊ.ಮಾಲತಿ ಚನಗೊಂಡ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೊ.ಆರ್.ಡಿ ಜೋಶಿ,ಪ್ರೊ.ಕವಿತಾ ಗೋರಗುಂಟಿ, ಮಹಾವಿದ್ಯಾಲಯದ ಇನ್ನಿತರ ಬೋಧಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೊ. ಶ್ವೇತಾ ಸವಣೂರ್ ಪ್ರಾರ್ಥಿಸಿದರು, ಪ್ರೊ. ಮಾಲತಿ ಚನಗೊಂಡ ಸ್ವಾಗತಿಸಿದರು, ಡಾ. ಗಿರಿಜಾ ನಿಂಬಾಳ ವಂದಿಸಿದರು.