ಶಿಕ್ಷಕಿ ಶಿವಲೀಲಾ ಬಿರಾದಾರ ಮತ್ತು ಶಿಕ್ಷಕಿ ಸುಶ್ಮಿತಾ ನಿಗಡೆ ಗೆ ಶಿಕ್ಷಕರತ್ನ ಪ್ರಶಸ್ತಿ ಪ್ರದಾನ | ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಮಂಗಳವಾರ ಪಟ್ಟಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಗುರುವಂದನಾ ಹಾಗೂ ವಿಜಯಪುರ ಜಿಲ್ಲಾ ಹಾಗೂ ತಾಲೂಕ ಅತ್ಯುತ್ತಮ ಶಿಕ್ಷಕರತ್ನ ಪ್ರಶಸ್ತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹಾಗೂ ಶ್ರೀ ಅಮೃತಾನಂದ ಸ್ವಾಮಿಗಳು ಜ್ಯೋತಿಬೇಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಅವರು, ವಿದ್ಯೆ ಕಲಿಸುವುದಷ್ಟೆ ಶಿಕ್ಷಣದ ಉದ್ದೇಶ ಅಲ್ಲ. ಸುಸಂಸ್ಕೃತರನ್ನಾಗಿ, ಒಳ್ಳೆಯ ಸತ್ಪ್ರಜೆಗಳನ್ನಾಗಿ ರೂಪಿಸುವುದಾಗಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಅಷ್ಟೆ ಅಲ್ಲ ದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಪಾಲುದಾರಿಕೆ ನೂರಕ್ಕೆ ೭೦ ರಿಂದ ೮೦ ಅಷ್ಟು ಇದೆ ಖಾಸಗಿ ಶಾಲೆ ಅಥವಾ ವಿದ್ಯಾಸಂಸ್ಥೆಯು ಇಂದು ಅತ್ಯುತ್ತಮ ಗುಣಮಟ್ಟದ ಶಿಕಣ ನೀಡುವಲ್ಲಿ ಪ್ರಥಮ ಸ್ಥಾನದಲ್ಲಿ ಇವೆ ಎಂದರೆ ತಪ್ಪಾಗಲಾರದು ಎಂದರು.
ದಿವ್ಯ ಸಾನಿದ್ಯ ವಹಿಸಿದ ಅಮೃತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಜಗತ್ತಿನ ಯಾವ ಅಧಿಕಾರಿಗಳಿಗೂ ಸಹ ಬ್ರಹ್ಮ ವಿಷ್ಣು ಮಹೇಶ್ವರ ಎಂದು ಕರೆದಿಲ್ಲ, ಗುರುವಿಗೆ ಮಾತ್ರ ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ ಎಂದು ಕರೆದು ಗುರುವಿಗೆ ಅಗ್ರ ಸ್ಥಾನದಲ್ಲಿ ಇರುವ ಹಾಗೆ ಪುರಾತನ ಕಾಲದಿಂದಲು ಗೌರವವಿದೆ. ಶಿಕ್ಷಕ ಸುಖಿಯಾಗಿದ್ದರೆ ಇಡಿ ಜಗತ್ತು ಸುಖಿಯಿಂದ ಇರಲು ಸಾಧ್ಯ ಆದ್ದರಿಂದ ಗುರುಗಳನ್ನು ಶಿಕ್ಷಣ ಸಂಸ್ಥೆಯವರು ಸುಖಿ ಇರುವ ಹಾಗೆ ನೋಡಿಕೊಂಡಿದ್ದಾರೆ ಎಂದರು.
ತಾಲೂಕ ಮಟ್ಟದ ಅತ್ಯುತ್ತಮ ಶಿಕ್ಷಕರತ್ನ ಪ್ರಶಸ್ತಿಗೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಾದ ಚಡಚಣದ ವಿಜಯ ವಿದ್ಯಾಪೀಠ ಸಂಸ್ಥೆಯ ಶಿಕ್ಷಕಿ ಶಿವಲೀಲಾ ಅನಿಲ ಬಿರಾದಾರ, ಪಟ್ಟಣದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಶ್ಮಿತಾ ನಿಗಡೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಅರ್ಹ ಶಿಕ್ಷಕರನ್ನು ತಾಲೂಕಾ ಮಟ್ಟದಲ್ಲಿ ತಾಲೂಕಿಗೆ ಒಬ್ಬರಂತೆ ೧೧ ಶಿಕ್ಷಕರು ಅತ್ಯುತ್ತಮ ಶಿಕ್ಷಕರತ್ನ ಪ್ರಶಸ್ತಿಗೆ ಭಾಜನರಾಗಿದ್ದರು ಮತ್ತು ಚಡಚಣ ತಾಲೂಕಿನ ಸುಮಾರು ೩೦ ಶಿಕ್ಷಕರು ಅತ್ಯುತ್ತಮ ಶಿಕ್ಷಕರತ್ನ ಪ್ರಶಸ್ತಿಗೆ ಭಾಜನರಾದರು.ಭಾಜನರಾದ ಎಲ್ಲ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಜಯ ವಿದ್ಯಾಪೀಠ ಸಂಸ್ಥೆಯ ಅಧ್ಯಕ್ಷ ಕೆ.ಪಿ.ಬೋಳೆಗಾಂವ, ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎ.ಬಿ.ಪಾಟೀಲ,ಮಹಾಂತೇಶ ಹಿರೇಮಠ, ಸಿದ್ದಣ್ಣ ಬಿರಾದಾರ, ಚಡಚಣ ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಎಸ್.ಎಸ್.ಹಾವಿನಾಳ, ರಮೇಶ ಜಿತ್ತಿ, ರವೀಂದ್ರ ಬಿರಾದಾರ, ಎ.ಆರ್.ಸೌದಿ, ಬಸವರಾಜ ಪೂಜಾರಿ, ಎಂ.ಆರ್.ತುಪ್ಪದ ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಶಿಕ್ಷಕರು, ಗಣ್ಯರು ಇದ್ದರು.