Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರು ನಿತ್ಯ, ಸತ್ಯ, ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದವರು. ಪರಂಪರೆ, ಸಂಸ್ಕೃತಿ, ಜಾಗೃತಿ ಹಾಗೂ ಸಮಾಜದಲ್ಲಿರುವ ಬಡ ಜನರ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಏಳ್ಗೆಗೆ ಶ್ರಮಿಸಿದ ಕೀರ್ತಿ ಹಾನಗಲ್ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು.ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ ಶಿವಾನುಭವ ಗೋಷ್ಠಿಯಲ್ಲಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳ ಅನುಭಾವ ಕುರಿತು ಮಾತನಾಡುತ್ತ ಶರಣರ ವಿಚಾರಗಳೇ ನಮಗೆ ಆದರ್ಶ ನಿತ್ಯ ಸ್ಪೂರ್ತಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಸಂಸ್ಥೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಂದಿನ ಹಿರಿಯರು ಸಂಸ್ಥೆಯ ಏಳ್ಗೆಗಾಗಿ ಸಾಮಾನ್ಯ ಜನರಿಗೆ ಶೈಕ್ಷಣಿಕ ಸೌಲಭ್ಯ ಉಚಿತ ಪ್ರಸಾದ ನಿಲಯಗಳನ್ನು ತೆರೆದು ಸಮಾಜದ ಒಳತಿಗಾಗಿ ಶ್ರಮಿಸಿದವರು. ಪೂಜ್ಯರ ಸ್ಮರಣೆ ವೀರಶೈವ ಲಿಂಗಾಯತ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ ಮಹಾಪುರುಷರು ಎಂದರು.ಮಹಾಸಭೆ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಶರಣರ…
ಕರ್ತವ್ಯ ನಿರ್ವಹಿಸುವ ಶಾಲೆಗೆ ₹ 51 ಸಾವಿರ ದೇಣಿಗೆ ನೀಡಿದ ಶಿಕ್ಷಕ ರಾಜಕುಮಾರ ಮಾಳಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲ್ಲೂಕಿನ ಜಂಬಗಿ (ಆ) ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ರಾಜಕುಮಾರ ಮಾಳಿ ಅವರಿಗೆ 2025-26 ನೇ ಶೈಕ್ಷಣಿಕ ಸಾಲಿನ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಪಡೆದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಸಾರೋಟದಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಸಾರೋಟದಲ್ಲಿ ಮುಖ್ಯೋಪಾಧ್ಯಾಯನಿ ಎಲ್.ಎಂ.ದಿಗ್ಗಾಯಿ ಆಸಿನರಿದ್ದರು.ಶಿಕ್ಷಕ ಮಾಳಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿರುವುದಕ್ಕೆ ಗ್ರಾಮಸ್ಥರು, ಹಿರಿಯರು, ಯುವಕರು, ಮಕ್ಕಳು ಖುಷಿ ಇಮ್ಮಡಿಗೊಂಡಿತ್ತು. ಮೆರವಣಿಗೆ ಸಾಗುವಾಗ ವಾದ್ಯ ವೃಂದಗಳೊಂದಿಗೆ ಮಕ್ಕಳು ಹೆಜ್ಜೆ ಹಾಕುತ್ತಾ ಗೌರವ ಸಮರ್ಪಿಸಿದರು.ಶಿಕ್ಷಕ ಸಂತರಾಮಸಿಂಗ್ ರಜಪೂತ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಾಧಕರನ್ನಾಗಿ ಮಾಡಿಸುತ್ತಾ ಹಗಲಿರುಳು ಸೇವೆ ಮಾಡುತ್ತಿರುವ ಶಿಕ್ಷಕನಿಗೆ ಈ ಪ್ರಶಸ್ತಿ ಒಲಿದಿದೆ. ಗ್ರಾಮದಲ್ಲಿ ಇನ್ನೂ ಹೆಚ್ಚು ಸಾಧಕರು ತಯರಾಗಲಿ ಎಂದು ಶುಭ ಹಾರೈಸಿದರು.ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಪ್ರಸಕ್ತ ಸಾಲಿನ ನಿಡಗುಂದಿ “ಬಿ” ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಮೀಪದ ಚಿಮ್ಮಲಗಿ -೨ ಸರ್ಕಾರಿ ಪ್ರೌಢಶಾಲೆ ಕ್ರೀಡಾಪಟುಗಳು ಅಮೋಘ ಜಯ ದಾಖಲಿಸಿದ್ದಾರೆ.ವಿವಿಧ ಸ್ಪಧೆ೯ಗಳಲ್ಲಿ ವೀರೋಚಿತ ಗೆಲುವು ಸಾಧಿಸಿ ಕ್ರೀಡಾಕೂಟದಲ್ಲಿ ಸಾಧನೆ ಮೆರೆದಿದ್ದಾರೆ.ಈ ಬಾರಿಯೂ ಬಾಲಕರ ಕಬಡ್ಡಿ ಸ್ಪಧೆ೯ಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸತತವಾಗಿ ೪ ನೇ ಬಾರಿಗೆ ಚಾಂಪಿಯನ್ ಶಿಪ್ ಪಟ್ಟ ತಮ್ಮದಾಗಿಸಿಕೊಂಡಿದ್ದು ವಿಶೇಷ.೧೦೦ ಮೀ ಓಟದಲ್ಲಿ ಸ್ಪಧೆ೯ಯಲ್ಲಿ ಪ್ರಥಮ,ದ್ವೀತಿಯ ಎರಡು ಸ್ಥಾನಗಳನ್ನು ಈ ಶಾಲೆಯ ಮಕ್ಕಳು ಬಾಚಿದ್ದಾರೆ.೧೦೦ಮೀ,ಓಟದಲ್ಲಿ ಮುತ್ತಗಿ ಪ್ರಥಮ ಸ್ಥಾನ ಪಡೆದರೆ ೧ ದ್ವಿತೀಯ ಸ್ಥಾನ ಪ್ರಜ್ವಲ್ ಅಳ್ಳಿಚಂಡಿ ಪಡೆದಿದ್ದಾನೆ. ೨೦೦ಮೀ ಓಟದಲ್ಲಿ ರಾಜು ಮುತ್ತಗಿ ಪ್ರಥಮ, ೮೦೦ಮೀ ಓಟದಲ್ಲಿ ಸುದೀಪ್ ತಿಪ್ಪನಗೌಡರ ಪ್ರಥಮ, ೪೦೦ ಮೀ ಓಟದಲ್ಲಿ ಸುದೀಪ್ ತಿಪ್ಪನಗೌಡರ ತೃತೀಯ,೧೫೦೦ ಮೀ ಓಟದಲ್ಲಿ ಪ್ರಜ್ವಲ್ ಅಳ್ಳಿಚಂಡಿ ದ್ವೀತಿಯ ಪಡೆದಿದ್ದಾರೆ. ಬಾಲಕಿಯರ ೩೦೦೦ ಮೀ.ಓಟದಲ್ಲಿ ಲಕ್ಷ್ಮೀ ಲಮಾಣಿ ದ್ವೀತಿಯ ಸ್ಥಾನ ಗಳಿಸಿದರೆ ೪್ಠ೧೦೦ ರಿಲೇ ಓಟದಲ್ಲಿ ದ್ವಿತೀಯ ಶಾಲಾ ತಂಡ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಮ್ಯಾಟ್ರಿಕ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಅವ್ಯವಸ್ಥೆಯ ಆಗರವಾಗಿದೆ ಎಂದು ಆಗ್ರಹಿಸಿ ಇಂದು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.ಆಹಾರ ಸಾಮಗ್ರಿಗಳು ಸರಿಯಾಗಿ ಇರುವದಿಲ್ಲ. ಆಹಾರಕ್ಕೆ ಬಳಸುವ ತರಕಾರಿ ಕೋಳೆತದ್ದು ಇರುತ್ತದೆ. ಶೌಚಾಲಯ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇರುವದಿಲ್ಲ ಎಂದು ಹೇಳಿದರು.ಈ ಕುರಿತು ಬಿ.ಸಿ.ಎಂ ಅಧಿಕಾರಿಗಳಿಗೆ ಪ್ರತಿ ಬಾರಿಯೂ ಫೋನು ಮೂಲಕ ಸಂಪರ್ಕಿಸಿದಾಗ ಮಿಟಿಂಗನಲ್ಲಿ ಇದ್ದೇನೆ, ನಾನು ಭೇಟಿ ನೀಡಿ ಕ್ರಮ ಕೈಕೊಳ್ಳುವದಾಗಿ ಹೇಳುತ್ತಾರೆ. ಒಮ್ಮೆಯೂ ಸ್ಪಂದಿಸಿಲ್ಲ ಎಂದರು.ಕಂದಾಯ ಉಪ ವಿಬಾಗಾಧಿಕಾರಿ ಅನುರಾಧಾ ವಸ್ತçದ ಇವರಿಗೆ ಮನವಿ ಸಲ್ಲಿಸಿದರು.ಎಬಿವಿಪಿಯ ಭೀಮುಗೌಡ ಬಗಲಿ, ಸಚೀನ ಧನಗೊಂಡ, ಗಣೇಶ ಹಂಜಗಿ, ರಾಹುಲ ಜಾಧವ, ಸೋಮನಾಥ ಕಟಗೇರಿ ಮಾತನಾಡಿದರು.ವಿಕಾಸ ಬಡಿಗೇರ, ಯಲಗೊಂಡ ಹಿರೆಕುರಬರ, ಸಣ್ಣಪ್ಪ ಹಿರೇಕುರಬರ, ಶ್ರೀಕಾಂತ ಬಜಂತ್ರಿ, ಚನ್ನಪ್ಪ ಕುಂಬಾರ, ಪ್ರದೀಪ ಆನೂರ, ನಾಜರಾಜ ಕೊಡಹೊನ್ನ, ಬೀಮರಾಯ ಮೇತ್ರಿ, ವಾಸಿಮ ಚೌಧರಿ ಮತ್ತಿತರಿದ್ದರು.
ಸೆ.೧೫ರಿಂದ ಲಿಂಗತ್ವ ಅಲ್ಪಸಂಖ್ಯಾತರ-ಮಾಜಿ ದೇವದಾಸಿ ಮಹಿಳೆಯರ ಸಮೀಕ್ಷೆ | ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಇದೇ ಸೆ.೧೫ ರಿಂದ ೪೫ ದಿನಗಳ ನಡೆಯಲಿದ್ದು, ವ್ಯವಸ್ಥಿತವಾಗಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷ್ಷೆ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ೪೫ ದಿನಗಳ ಕಾಲ ನಡೆಯುವ ಸಮೀಕ್ಷೆಯಲ್ಲಿ ಸರ್ಕಾರಿ ತಾಲೂಕಾ ಆಸ್ಪತ್ರೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಮತ್ತು ಶಿಶು ಅಭಿವೃದಿ ಯೋಜನಾ ಕಚೇರಿಗಳಲ್ಲಿ ಮಾಜಿ ದೇವದಾಸಿ ಮಹಿಳೆಯರ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ಕೈಗೊಂಡು ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.ಜಿಲ್ಲಾ ಪಂಚಾಯತ್ ಮುಖ್ಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ ಇವರ ಸಹಯೋಗದಲ್ಲಿ ಹೆಚ್‌ಐವಿ ಮುಕ್ತ ಜಿಲ್ಲೆಯನ್ನಾಗಿಸಲು ಜಾಗೃತಿಗಾಗಿ ಸೆ.೧೨ರಂದು ಬೈಕ್ ರ‍್ಯಾಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.ಬೈಕ್ ರ‍್ಯಾಲಿ ಜಾಗೃತಿ ಜಾಥಾಕ್ಕೆ ಆರೋಗ್ಯ ಇಲಾಖೆ ಅಪ್ ನಿರ್ದೇಶಕರಾದ ಡಾ.ಚೆನ್ನಮ್ಮಾ ಕಟ್ಟಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಮತ್ತು ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಚಾಲನೆ ನೀಡಿದರು.ಬೈಕ್ ರ‍್ಯಾಲಿಯಲ್ಲಿ ೧೦೦ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಾಗವಹಿಸಿದ್ದು, ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಏಡ್ಸ್ ನಿಯಂತ್ರಣ ಕಚೇರಿಯಿಂದ ಆರಂಭಗೊಂಡ ರ‍್ಯಾಲಿ ನಗರದ ರಹಿಂ ನಗರ, ಇಬ್ರಾಹಿಂರೋಜಾ, ಬಬಲೇಶ್ವರ ನಾಕಾ, ಮೀನಾಕ್ಷಿ ಚೌಕ್, ಕೇಂದ್ರ ಬಸ್ ನಿಲ್ದಾಣ, ಕಣಕಿ ಬಜಾರ ಮಾರ್ಗವಾಗಿ ಜುಮ್ಮಾ ಮಸೀದ ರಸ್ತೆ, ಹಕೀಮ ಚೌಕ್, ಗೋಲಗುಂಬಜ್‌ದಿಂದ ಗಾಂಧಿಚೌಕ್, ಶಿವಾಜಿ ಸರ್ಕಲ್, ವಾಟರ್ ಟ್ಯಾಂಕ್ ಮಾರ್ಗವಾಗಿ ಜಿಲ್ಲಾ ಆಸ್ಪತ್ರೆವರೆಗೆ ಸಾಗಿತು.ಬೈಕ್ ರ‍್ಯಾಲಿಯಲ್ಲಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಶಾಲೆಯ ಪರಿಸರ ಕಾಳಜಿ, ಉತ್ತಮ ಕ್ರೀಡಾ ಅವರಣ, ಸುಸಜ್ಜಿತ ಶಾಲಾ ಕಟ್ಟಡ, ಮೂಲಭೂತ ಸೌಲಭ್ಯ ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಎಲ್ಲಾ ಸೌಲಭ್ಯಗಳನ್ನು ಈ ಶಾಲೆ ಒಳಗೊಂಡಿರುವುದರಿಂದ ಚಡಚಣ ತಾಲೂಕಿನ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ರೇವತಗಾಂವ ಗ್ರಾಮದ ಹರಿಜನ ಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದೊರೆತಿದೆ.ಪತಿವರ್ಷ ಐದನೇ ಶಾಲೆಗಳಿಗೆ ತರಗತಿಯ ವಿದ್ಯಾರ್ಥಿಗಳು ಪ್ರತಿಷ್ಠಿತ ಮೊರಾರ್ಜಿ ದೇಸಾಯಿ, ಆದರ್ಶ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಶಾಲೆಯ ಮುಖ್ಯ ಗುರು ಸದಾಶಿವ ಪೂಜಾರಿ ಹಾಗೂ ಶಿಕ್ಷಕಿ ಎಸ್.ಎಂ. ಪತ್ತಾರ ಅವರ ಪರಿಶ್ರಮದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ, ಶಾಲೆಯ ಆವರಣದಲ್ಲಿ ಅನೇಕ ಗಿಡ ಮರಗಳನ್ನು ನೆಟ್ಟಿದ್ದಾರೆ. ಅತ್ಯುತ್ತಮ ಬಿಸಿಯೂಟ ಉಣಬಡಿಸುತ್ತಾ ಬಂದಿರುತ್ತಾರೆ. ಈ ಎಲ್ಲ ಕಾರ್ಯಗಳನ್ನು ಗಮನಿಸಿ ಹಾಗೂ ಶಾಲೆಯೂ ತಾಲೂಕಿನಲ್ಲಿಯೇ ಉತ್ತಮ ಸ್ಥಿತಿಯತ್ತ ಕೊಂಡೊಯುವಲ್ಲಿ ಶ್ರಮಿಸಿದ ಶಿಕ್ಷಕ ಹಾಗೂ ಎಸ್.ಡಿ.ಎಂ.ಸಿ.ಯವರ ಪರಿಶ್ರಮಕ್ಕೆ ದೊರೆತ ಪ್ರತಿಫಲ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಚಲನಚಿತ್ರದ ನಾಯಕನಟರಲ್ಲಿ ಒಬ್ಬರಾದ ಡಾ.ವಿಷ್ಣುವರ್ಧನ ಅವರಿಗೆ ಕರ್ನಾಟಕ ಸರಕಾರ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಮಾಡಿರುವುದು. ಅವರ ಅಭಿಮಾನಿಗಳಲ್ಲಿ ತುಂಬಾ ಹರ್ಷವನ್ನುಂಟು ಮಾಡಿದೆ ಎಂದು ವಿಜಯಪುರ ಜಿಲ್ಲಾ ಘಟಕದ ವಿಷ್ಣು ಅಭಿಮಾನಿ ವಿಷ್ಣು ಸಂಗಮೇಶ ಸಂತಸ ವ್ಯಕ್ತಪಡಿಸಿದ್ದಾರೆ.ಗುರುವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಸುಮಾರು ಒಂದೂವರೆ ದಶಕದಿಂದ ಸಮಸ್ತ ಅಭಿಮಾನಿಗಳಿಗೆ ಅವರಿಗೆ ಕರ್ನಾಟಕ ರತ್ನ ಲಭಿಸಲಿ ಎಂದು ಬಯಸುತ್ತಿದ್ದರು. ಅವರ ಮೇರು ವ್ಯಕ್ತಿತ್ವಕ್ಕೆ ಸಂದ ಗೌರವ ಇದಾಗಿದ್ದು, ವಿಶೇಷ ವಾಗಿ ಕರ್ನಾಟಕ ಸರ್ಕಾರಕ್ಕೆ ವಿಜಯಪುರ ಜಿಲ್ಲಾ ಘಟಕದಿಂದ ವಿಷ್ಣು ಸಂಗಮೇಶ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯರು ಹೋಬಳಿ ಮಟ್ಟದ ಪಂದ್ಯಾವಳಿಯ ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದು ತಾಲುಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸಿದ್ದು ಸವದಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಶ್ರೀ ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯರು ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಸಿದ್ದು ಸವದಿ ಕಾರ್ಯದರ್ಶಿ ವಿದ್ಯಾಧರ ಸವದಿ, ಪ್ರಾಚಾರ್ಯ ರಮೇಶ ಪೂಜಾರಿ, ದೈಹಿಕ ಶಿಕ್ಷಕ ಅನೀಲ ಗುಬಚಿ, ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ಸಾಹಸಸಿಂಹ ದಿ.ವಿಷ್ಣುವರ್ಧನ್, ಪದ್ಮಶ್ರಿ ದಿ. ಬಿ.ಸರೋಜಾದೇವಿಗೆ ಮರಣೋತ್ತರ ಪ್ರಶಸ್ತಿ ಘೋಷಣೆ | ರಾಷ್ಟ್ರಕವಿ ಕುವೆಂಪು ರಿಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ಪತ್ರ | ಸಂಪುಟ ಸಭೆಯಲ್ಲಿ ನಿರ್ಧಾರ ಬೆಂಗಳೂರು: ವಿಷ್ಣು ಅಭಿಮಾನಿಗಳ ದಶಕಗಳ ಬೇಡಿಕೆ ಫಲಿಸಿದ್ದು ರಾಜ್ಯ ಸರ್ಕಾರ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.ನಟರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಇನ್ನು ಪ್ರಶಸ್ತಿಯನ್ನು ಯಾವಾಗ, ಎಲ್ಲಿ ಪ್ರದಾನ ಮಾಡಬೇಕೆಂದು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ. ಇಂದಿನ ಸಂಪುಟ ಸಭೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರಕ್ಕೆ ಪತ್ರ ಕಳುಹಿಸಲು ನಿರ್ಣಯ ಅಂಗೀಕರಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಅವರು ಮನವಿ ಮಾಡಿಕೊಂಡಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ…
