ಉದಯರಶ್ಮಿ ದಿನಪತ್ರಿಕೆ
ಚಡಚಣ: ಶಾಲೆಯ ಪರಿಸರ ಕಾಳಜಿ, ಉತ್ತಮ ಕ್ರೀಡಾ ಅವರಣ, ಸುಸಜ್ಜಿತ ಶಾಲಾ ಕಟ್ಟಡ, ಮೂಲಭೂತ ಸೌಲಭ್ಯ ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಎಲ್ಲಾ ಸೌಲಭ್ಯಗಳನ್ನು ಈ ಶಾಲೆ ಒಳಗೊಂಡಿರುವುದರಿಂದ ಚಡಚಣ ತಾಲೂಕಿನ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ರೇವತಗಾಂವ ಗ್ರಾಮದ ಹರಿಜನ ಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದೊರೆತಿದೆ.
ಪತಿವರ್ಷ ಐದನೇ ಶಾಲೆಗಳಿಗೆ ತರಗತಿಯ ವಿದ್ಯಾರ್ಥಿಗಳು ಪ್ರತಿಷ್ಠಿತ ಮೊರಾರ್ಜಿ ದೇಸಾಯಿ, ಆದರ್ಶ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಶಾಲೆಯ ಮುಖ್ಯ ಗುರು ಸದಾಶಿವ ಪೂಜಾರಿ ಹಾಗೂ ಶಿಕ್ಷಕಿ ಎಸ್.ಎಂ. ಪತ್ತಾರ ಅವರ ಪರಿಶ್ರಮದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ, ಶಾಲೆಯ ಆವರಣದಲ್ಲಿ ಅನೇಕ ಗಿಡ ಮರಗಳನ್ನು ನೆಟ್ಟಿದ್ದಾರೆ. ಅತ್ಯುತ್ತಮ ಬಿಸಿಯೂಟ ಉಣಬಡಿಸುತ್ತಾ ಬಂದಿರುತ್ತಾರೆ. ಈ ಎಲ್ಲ ಕಾರ್ಯಗಳನ್ನು ಗಮನಿಸಿ ಹಾಗೂ ಶಾಲೆಯೂ ತಾಲೂಕಿನಲ್ಲಿಯೇ ಉತ್ತಮ ಸ್ಥಿತಿಯತ್ತ ಕೊಂಡೊಯುವಲ್ಲಿ ಶ್ರಮಿಸಿದ ಶಿಕ್ಷಕ ಹಾಗೂ ಎಸ್.ಡಿ.ಎಂ.ಸಿ.ಯವರ ಪರಿಶ್ರಮಕ್ಕೆ ದೊರೆತ ಪ್ರತಿಫಲ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.