ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ ಇವರ ಸಹಯೋಗದಲ್ಲಿ ಹೆಚ್‌ಐವಿ ಮುಕ್ತ ಜಿಲ್ಲೆಯನ್ನಾಗಿಸಲು ಜಾಗೃತಿಗಾಗಿ ಸೆ.೧೨ರಂದು ಬೈಕ್ ರ‍್ಯಾಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಬೈಕ್ ರ‍್ಯಾಲಿ ಜಾಗೃತಿ ಜಾಥಾಕ್ಕೆ ಆರೋಗ್ಯ ಇಲಾಖೆ ಅಪ್ ನಿರ್ದೇಶಕರಾದ ಡಾ.ಚೆನ್ನಮ್ಮಾ ಕಟ್ಟಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಮತ್ತು ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಚಾಲನೆ ನೀಡಿದರು.
ಬೈಕ್ ರ‍್ಯಾಲಿಯಲ್ಲಿ ೧೦೦ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಾಗವಹಿಸಿದ್ದು, ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಏಡ್ಸ್ ನಿಯಂತ್ರಣ ಕಚೇರಿಯಿಂದ ಆರಂಭಗೊಂಡ ರ‍್ಯಾಲಿ ನಗರದ ರಹಿಂ ನಗರ, ಇಬ್ರಾಹಿಂರೋಜಾ, ಬಬಲೇಶ್ವರ ನಾಕಾ, ಮೀನಾಕ್ಷಿ ಚೌಕ್, ಕೇಂದ್ರ ಬಸ್ ನಿಲ್ದಾಣ, ಕಣಕಿ ಬಜಾರ ಮಾರ್ಗವಾಗಿ ಜುಮ್ಮಾ ಮಸೀದ ರಸ್ತೆ, ಹಕೀಮ ಚೌಕ್, ಗೋಲಗುಂಬಜ್‌ದಿಂದ ಗಾಂಧಿಚೌಕ್, ಶಿವಾಜಿ ಸರ್ಕಲ್, ವಾಟರ್ ಟ್ಯಾಂಕ್ ಮಾರ್ಗವಾಗಿ ಜಿಲ್ಲಾ ಆಸ್ಪತ್ರೆವರೆಗೆ ಸಾಗಿತು.
ಬೈಕ್ ರ‍್ಯಾಲಿಯಲ್ಲಿ ಬಿಎಲ್‌ಡಿಇ ಸಂಸ್ಥೆಯ ಎ.ಎಸ್.ಪಾಟೀಲ ಕಾಲೇಜಿನ ವಿದ್ಯಾರ್ಥಿಗಳು, ಐಸಿಟಿಸಿ, ಎ.ಆರ್.ಟಿ., ಡಿ.ಎಸ್.ಆರ್.ಸಿ., ಎನ್‌ಟಿಇಪಿ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು.