ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಚಲನಚಿತ್ರದ ನಾಯಕನಟರಲ್ಲಿ ಒಬ್ಬರಾದ ಡಾ.ವಿಷ್ಣುವರ್ಧನ ಅವರಿಗೆ ಕರ್ನಾಟಕ ಸರಕಾರ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಮಾಡಿರುವುದು. ಅವರ ಅಭಿಮಾನಿಗಳಲ್ಲಿ ತುಂಬಾ ಹರ್ಷವನ್ನುಂಟು ಮಾಡಿದೆ ಎಂದು ವಿಜಯಪುರ ಜಿಲ್ಲಾ ಘಟಕದ ವಿಷ್ಣು ಅಭಿಮಾನಿ ವಿಷ್ಣು ಸಂಗಮೇಶ ಸಂತಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಸುಮಾರು ಒಂದೂವರೆ ದಶಕದಿಂದ ಸಮಸ್ತ ಅಭಿಮಾನಿಗಳಿಗೆ ಅವರಿಗೆ ಕರ್ನಾಟಕ ರತ್ನ ಲಭಿಸಲಿ ಎಂದು ಬಯಸುತ್ತಿದ್ದರು. ಅವರ ಮೇರು ವ್ಯಕ್ತಿತ್ವಕ್ಕೆ ಸಂದ ಗೌರವ ಇದಾಗಿದ್ದು, ವಿಶೇಷ ವಾಗಿ ಕರ್ನಾಟಕ ಸರ್ಕಾರಕ್ಕೆ ವಿಜಯಪುರ ಜಿಲ್ಲಾ ಘಟಕದಿಂದ ವಿಷ್ಣು ಸಂಗಮೇಶ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.