ಕರ್ತವ್ಯ ನಿರ್ವಹಿಸುವ ಶಾಲೆಗೆ ₹ 51 ಸಾವಿರ ದೇಣಿಗೆ ನೀಡಿದ ಶಿಕ್ಷಕ ರಾಜಕುಮಾರ ಮಾಳಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲ್ಲೂಕಿನ ಜಂಬಗಿ (ಆ) ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ರಾಜಕುಮಾರ ಮಾಳಿ ಅವರಿಗೆ 2025-26 ನೇ ಶೈಕ್ಷಣಿಕ ಸಾಲಿನ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಪಡೆದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಸಾರೋಟದಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಸಾರೋಟದಲ್ಲಿ ಮುಖ್ಯೋಪಾಧ್ಯಾಯನಿ ಎಲ್.ಎಂ.ದಿಗ್ಗಾಯಿ ಆಸಿನರಿದ್ದರು.
ಶಿಕ್ಷಕ ಮಾಳಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿರುವುದಕ್ಕೆ ಗ್ರಾಮಸ್ಥರು, ಹಿರಿಯರು, ಯುವಕರು, ಮಕ್ಕಳು ಖುಷಿ ಇಮ್ಮಡಿಗೊಂಡಿತ್ತು. ಮೆರವಣಿಗೆ ಸಾಗುವಾಗ ವಾದ್ಯ ವೃಂದಗಳೊಂದಿಗೆ ಮಕ್ಕಳು ಹೆಜ್ಜೆ ಹಾಕುತ್ತಾ ಗೌರವ ಸಮರ್ಪಿಸಿದರು.
ಶಿಕ್ಷಕ ಸಂತರಾಮಸಿಂಗ್ ರಜಪೂತ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಾಧಕರನ್ನಾಗಿ ಮಾಡಿಸುತ್ತಾ ಹಗಲಿರುಳು ಸೇವೆ ಮಾಡುತ್ತಿರುವ ಶಿಕ್ಷಕನಿಗೆ ಈ ಪ್ರಶಸ್ತಿ ಒಲಿದಿದೆ. ಗ್ರಾಮದಲ್ಲಿ ಇನ್ನೂ ಹೆಚ್ಚು ಸಾಧಕರು ತಯರಾಗಲಿ ಎಂದು ಶುಭ ಹಾರೈಸಿದರು.
ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಜಿತ್ತಿ ಮಾತನಾಡಿ ಮಕ್ಕಳೊಂದಗೆ ಹೆಚ್ಚು ಕಾಲ ಕಳೆಯುತ್ತಾ ಶಾಲಾ ಅವಧಿಯ ನಂತರವು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿರುವದರಿಂದ ‘ಪುಲ್ ಟೈಮ್ ಮೇಷ್ಟ್ರು’ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ರಾಜಕುಮಾರ ಮಾಳಿ ನಮ್ಮ ಬದುಕು ಸಾಗಿಸುವ ಈ ವೃತ್ತಿಯಿಂದ ಮಕ್ಕಳ ಉಜ್ವಲ ಭವಿಷ್ಯ ರೂಪಗೊಳ್ಳಲು ಇನ್ನೂ ಹೆಚ್ಚಿನ ಶ್ರಮ ಕಾಳಜಿ ವಹಿಸಿಕೊಳ್ಳುತ್ತೇನೆ. ಪ್ರಶಸ್ತಿ ಆಗಮನದಿಂದ ಹೆಚ್ಚಿನ ಜವಾಬ್ದಾರಿ ಬಂದಿದ್ದು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಬದ್ದವಾಗಿರುತ್ತೇನೆ ಎಂದು ಹೇಳಿ ಕರ್ತವ್ಯ ನಿರ್ವಹಿಸುವ ಶಾಲೆಗೆ ₹ 51 ಸಾವಿರ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ರಾಮಯ್ಯ ಅಲಗೋಡ, ಎಸ್.ಆರ್.ರಾಠೋಡ, ಎಸ್.ಎ.ದಾಸ್ಯಾಳ, ಸಂಗಮೇಶ ದಿಂಡವಾರ, ಸಂಗಮೇಶ ಕಂಬಾರ, ಬಂದೇನಮಾಜ್ ಮುಲ್ಲಾ, ಎಲ್.ಎಂ.ದಿಗ್ಗಾಯಿ, ಆರ್.ವೈ.ಕೊಣ್ಣೂರ, ಸಿದ್ದು ತೋಟದ, ಡಿ.ಆರ್.ಸಂಕದ, ವಾಸಿಂ ಚಟ್ಟರಕಿ , ಬಿ.ಎಸ್‌ಮಠ, ಅನುಮೇಶ ಜಮಖಂಡಿ, ಸಂಗಮೇಶ ಸಗರ, ಬಸವಮನತರಾಯ ದೇಶಮುಖ, ಬಸವರಾಜ ದೇಸಾಯಿ, ಶರಣಪ್ಪಾ ಕಡ್ಲೆವಾಡ, ಪುಷ್ಪಾ ಗಚ್ಚಿನಮಠ, ಅಶೋಕ ಚನಬಸಗೋಳ, ಎಂ.ಎಸ್.ಟಕ್ಕಳಕಿ,ಸಿ.ಟಿ.ಜತ್ತಿ, ಗಣೇಶ ಬಡಿಗೇರ, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಎಸ್ಡಿಎಂಸಿ ಸದಸ್ಯರು, ಗ್ರಾಮದ ಹಿರಿಯರು ಇದ್ದರು.
ಸ್ಚಾಗತವನ್ನು ಗಣಪತಿ ಬಡಿಗೇರ, ನಿರೂಪಣೆಯನ್ನು ಗಣಪತಿ ಚವ್ಹಾಣ, ಪ್ರವೀಣ ಅರವತ್ತು, ಬಿ.ಎನ್.ಸುಂಕದ ವಂದನಾರ್ಪನೆಯನ್ನು ಎಂ.ಎ.ಬಿಸನಾಳ ನೆರವೇರಿಸಿದರು.