ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಪ್ರಸಕ್ತ ಸಾಲಿನ ನಿಡಗುಂದಿ “ಬಿ” ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಮೀಪದ ಚಿಮ್ಮಲಗಿ -೨ ಸರ್ಕಾರಿ ಪ್ರೌಢಶಾಲೆ ಕ್ರೀಡಾಪಟುಗಳು ಅಮೋಘ ಜಯ ದಾಖಲಿಸಿದ್ದಾರೆ.
ವಿವಿಧ ಸ್ಪಧೆ೯ಗಳಲ್ಲಿ ವೀರೋಚಿತ ಗೆಲುವು ಸಾಧಿಸಿ ಕ್ರೀಡಾಕೂಟದಲ್ಲಿ ಸಾಧನೆ ಮೆರೆದಿದ್ದಾರೆ.
ಈ ಬಾರಿಯೂ ಬಾಲಕರ ಕಬಡ್ಡಿ ಸ್ಪಧೆ೯ಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸತತವಾಗಿ ೪ ನೇ ಬಾರಿಗೆ ಚಾಂಪಿಯನ್ ಶಿಪ್ ಪಟ್ಟ ತಮ್ಮದಾಗಿಸಿಕೊಂಡಿದ್ದು ವಿಶೇಷ.
೧೦೦ ಮೀ ಓಟದಲ್ಲಿ ಸ್ಪಧೆ೯ಯಲ್ಲಿ ಪ್ರಥಮ,ದ್ವೀತಿಯ ಎರಡು ಸ್ಥಾನಗಳನ್ನು ಈ ಶಾಲೆಯ ಮಕ್ಕಳು ಬಾಚಿದ್ದಾರೆ.೧೦೦ಮೀ,ಓಟದಲ್ಲಿ ಮುತ್ತಗಿ ಪ್ರಥಮ ಸ್ಥಾನ ಪಡೆದರೆ ೧ ದ್ವಿತೀಯ ಸ್ಥಾನ ಪ್ರಜ್ವಲ್ ಅಳ್ಳಿಚಂಡಿ ಪಡೆದಿದ್ದಾನೆ. ೨೦೦ಮೀ ಓಟದಲ್ಲಿ ರಾಜು ಮುತ್ತಗಿ ಪ್ರಥಮ, ೮೦೦ಮೀ ಓಟದಲ್ಲಿ ಸುದೀಪ್ ತಿಪ್ಪನಗೌಡರ ಪ್ರಥಮ, ೪೦೦ ಮೀ ಓಟದಲ್ಲಿ ಸುದೀಪ್ ತಿಪ್ಪನಗೌಡರ ತೃತೀಯ,೧೫೦೦ ಮೀ ಓಟದಲ್ಲಿ ಪ್ರಜ್ವಲ್ ಅಳ್ಳಿಚಂಡಿ ದ್ವೀತಿಯ ಪಡೆದಿದ್ದಾರೆ. ಬಾಲಕಿಯರ ೩೦೦೦ ಮೀ.ಓಟದಲ್ಲಿ ಲಕ್ಷ್ಮೀ ಲಮಾಣಿ ದ್ವೀತಿಯ ಸ್ಥಾನ ಗಳಿಸಿದರೆ ೪್ಠ೧೦೦ ರಿಲೇ ಓಟದಲ್ಲಿ ದ್ವಿತೀಯ ಶಾಲಾ ತಂಡ ಪಡೆದಿದೆ. ೫ ಕಿಮೀ ನಡಿಗೆಯಲ್ಲಿ ಆಕಾಶ್ ಸಿದ್ದನಾಥ ಪ್ರಥಮ ಸ್ಥಾನ ಪಡೆದರೆ ಇದೇ ೫ ಕಿಮೀ ನಡಿಗೆ ಸ್ಪಧೆ೯ಯಲ್ಲಿ ದಸ್ತಿಗೀರ್ ತೊರವಿ ತೃತೀಯ ಸ್ಥಾನ ತನ್ನದಾಗಿಸಿಕೊಂಡಿದ್ದಾನೆ. ೩೦೦೦ ಮೀ, ಓಟದಲ್ಲಿ ಸಾಬಣ್ಣ ಕೂಡ್ಲಪ್ಪಗೋಳ ತೃತೀಯ ಪಡೆದಿದ್ದಾರೆ. ಬಾಲಕಿಯರ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡಾಕೂಟದಲ್ಲಿ ಸಾಧನೆ ಗೈದು ಶಾಲೆಗೆ ಕೀತಿ೯ ತಂದಿರುವ ಕ್ರೀಡಾಪಟುಗಳಿಗೆ ಹಾಗೂ ತರಬೇತಿಗೊಳಿಸಿ ದೈಹಿಕ ಶಿಕ್ಷಕ ಬಿ.ಎಂ.ಬಳಬಟ್ಟಿ ಅವರನ್ನು ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.