ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಮ್ಯಾಟ್ರಿಕ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಅವ್ಯವಸ್ಥೆಯ ಆಗರವಾಗಿದೆ ಎಂದು ಆಗ್ರಹಿಸಿ ಇಂದು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.
ಆಹಾರ ಸಾಮಗ್ರಿಗಳು ಸರಿಯಾಗಿ ಇರುವದಿಲ್ಲ. ಆಹಾರಕ್ಕೆ ಬಳಸುವ ತರಕಾರಿ ಕೋಳೆತದ್ದು ಇರುತ್ತದೆ. ಶೌಚಾಲಯ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇರುವದಿಲ್ಲ ಎಂದು ಹೇಳಿದರು.
ಈ ಕುರಿತು ಬಿ.ಸಿ.ಎಂ ಅಧಿಕಾರಿಗಳಿಗೆ ಪ್ರತಿ ಬಾರಿಯೂ ಫೋನು ಮೂಲಕ ಸಂಪರ್ಕಿಸಿದಾಗ ಮಿಟಿಂಗನಲ್ಲಿ ಇದ್ದೇನೆ, ನಾನು ಭೇಟಿ ನೀಡಿ ಕ್ರಮ ಕೈಕೊಳ್ಳುವದಾಗಿ ಹೇಳುತ್ತಾರೆ. ಒಮ್ಮೆಯೂ ಸ್ಪಂದಿಸಿಲ್ಲ ಎಂದರು.
ಕಂದಾಯ ಉಪ ವಿಬಾಗಾಧಿಕಾರಿ ಅನುರಾಧಾ ವಸ್ತçದ ಇವರಿಗೆ ಮನವಿ ಸಲ್ಲಿಸಿದರು.
ಎಬಿವಿಪಿಯ ಭೀಮುಗೌಡ ಬಗಲಿ, ಸಚೀನ ಧನಗೊಂಡ, ಗಣೇಶ ಹಂಜಗಿ, ರಾಹುಲ ಜಾಧವ, ಸೋಮನಾಥ ಕಟಗೇರಿ ಮಾತನಾಡಿದರು.
ವಿಕಾಸ ಬಡಿಗೇರ, ಯಲಗೊಂಡ ಹಿರೆಕುರಬರ, ಸಣ್ಣಪ್ಪ ಹಿರೇಕುರಬರ, ಶ್ರೀಕಾಂತ ಬಜಂತ್ರಿ, ಚನ್ನಪ್ಪ ಕುಂಬಾರ, ಪ್ರದೀಪ ಆನೂರ, ನಾಜರಾಜ ಕೊಡಹೊನ್ನ, ಬೀಮರಾಯ ಮೇತ್ರಿ, ವಾಸಿಮ ಚೌಧರಿ ಮತ್ತಿತರಿದ್ದರು.