Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗಾರರು ನೂರಾರುನಮಸ್ಯೆಗಳ ಮಧ್ಯ ಸಾವು ನೋವಿನ ಮಧ್ಯ ಹೋರಾಟ ಮಾಡುತ್ತಾ ಜೀವನ ಸಾಗಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಕುರಿತು ಆಗ್ರಹ ಮಾಡಿ ಮನವಿ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡುತ್ತಾ, ಇಡೀ ಕರ್ನಾಟಕದಲ್ಲಿ ಅಂದಾಜು ೧ ಲಕ್ಷ ಎಕರೆ ದ್ರಾಕ್ಷಿ ಬೆಳೆಯಲಾಗುತ್ತದೆ, ವಿಜಯಪುರದಲ್ಲಿ ೭೦% ದ್ರಾಕ್ಷಿ ಬೆಳೆಯುತ್ತಿದ್ದು, ಇದನ್ನು ನಂಬಿ ೧೫-೨೦ ಸಾವಿರ ರೈತ ಕುಟುಂಬಗಳು ಹಾಗೂ ಸಾವಿರಾರು ರೈತ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ, ಆದರೆ ದಲ್ಲಾಳಿಗಳ ಹಾವಳಿ, ಮಾರುಕಟ್ಟೆಯ ಕೊರತೆ, ಕೋಲ್ಡ್ ಸ್ಟೋರೆಜ್ ಕೊರತೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಖರ್ಚು, ಕೂಲಿಯವರ ಪಗಾರ, ಔಷಧ, ಗೊಬ್ಬರ ಇನ್ನಿತರ ಖರ್ಚು ಹತ್ತು ಪಟ್ಟು ಹೆಚ್ಚಾಗಿದೆ, ಇವುಗಳಿಂದ ಗೆದ್ದು…
ಲೇಖನ- ವೀಣಾ ಹೇಮಂತ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಅವಶ್ಯಕತೆಯ ಅರಿವು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದ್ದು, ಇದೀಗ ಪಾಲಕತ್ವದ ಅವಶ್ಯಕತೆಯ ಅರಿವು ಸಾರ್ವತ್ರಿಕವಾಗಿ ಮುನ್ನೆಲೆಗೆ ಬಂದಿದೆ.ಮಕ್ಕಳ ಕಣ್ಣಿಗೆ ಕಂಡದ್ದನ್ನು, ಕೇಳಿದ್ದನ್ನೆಲ್ಲ ಕೊಡಿಸುವುದು, ಮಕ್ಕಳು ಹೇಳಿದಂತೆಯೇ ನಡೆಯುವುದು, ಮಕ್ಕಳು ಬಯಸಿದ್ದನ್ನೇ ಉಣ ಬಡಿಸುವುದು ಒಳ್ಳೆಯ ಪಾಲಕತ್ವ ಎಂಬ ತಪ್ಪು ಕಲ್ಪನೆ ಬಹುತೇಕ ಜನರಲ್ಲಿ ಇದೆ.ಪಾಲಕತ್ವ ಅಂದ್ರೆ ನಮ್ಮ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಮಕ್ಕಳ ಹೇಳುವ ಎಲ್ಲ ಮಾತುಗಳಿಗೆ ಶರಣಾಗತರಾಗುವುದು ಅಂತ ಅರ್ಥ ಅಲ್ಲ.ಪಾಲಕತ್ವ ಪ್ರತಿಯೊಬ್ಬ ತಂದೆ ತಾಯಿಯು ಹೊರಲೇ ಬೇಕಾದ ಒಂದು ಉನ್ನತ ಜವಾಬ್ದಾರಿ. ಮಾನಸಿಕವಾಗಿ ಮಾಗಿದ ಪಾಲಕತ್ವ ಒಳ್ಳೆಯ ನಾಗರಿಕರನ್ನು ಈ ಸಮಾಜಕ್ಕೆ ಕಾಣಿಕೆಯಾಗಿ ನೀಡುತ್ತದೆಸುಮಾರು 30- 32ರ ವಯಸ್ಸಿನ ಬಿಸಿ ರಕ್ತದ ಪಾಲಕರಲ್ಲಿ ಮಕ್ಕಳ ಮೇಲೆ ಪ್ರಾಬಲ್ಯ ತುಸು ಹೆಚ್ಚೇ ಇರುತ್ತದೆ. ಅಂತಹ ಪಾಲಕರು ತಮಗೆ ಎಲ್ಲಾ ತಿಳಿದಿದೆ, ತಾವು ಹೇಳಿದಂತೆಯೇ ಮಕ್ಕಳು ಕೇಳಬೇಕು ಎಂಬಂತಹ ಧೋರಣೆಯನ್ನು ಹೊಂದಿದ್ದು, ಮಕ್ಕಳ ಮೇಲೆ ವಿಪರೀತ ಒತ್ತಡ…
ನರಸಲಗಿ ರಾಮಕೃಷ್ಣ ಆಶ್ರಮದ ಶ್ರೀಕಾಂತ್ ಗುರುಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಗತ್ತಿನಲ್ಲಿ ಜ್ಞಾನವೇ ಶ್ರೇಷ್ಠ. ಪುಸ್ತಕಗಳು ವಿದ್ಯಾರ್ಥಿಗಳನ್ನು ಎತ್ತರ ಮಟ್ಟಕ್ಕೆ ಕರೆದುಕೊಂಡು ಹೋಗುವ ಶಕ್ತಿ ಹೊಂದಿವೆ ಎಂದು ನರಸಲಗಿ ರಾಮಕೃಷ್ಣ ಆಶ್ರಮದ ಶ್ರೀಕಾಂತ್ ಗುರುಜಿ ಹೇಳಿದರು.ಸಮಾಜ ಕಲ್ಯಾಣ ಇಲಾಖೆಯ ಡಾ ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನರಸಲಗಿ ಯಲ್ಲಿ “ಅಧಿಕಾರಿಗಳ ನಡೆ ವಸತಿ ನಿಲಯದ ಕಡೆ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಸ್ಸು ಮತ್ತು ಬುದ್ಧಿ ಏಕವಾದಾಗ ಮಾತ್ರ ಸಾಧನೆ ಸಾಧ್ಯವಾಗುವುದು, ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಒದಗಿಸಿದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಜೀವನವನ್ನು ಸುಂದರಗೊಳಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೋಡೆಲ್ ಅಧಿಕಾರಿಗಳಾದ ಎಮ್ ಟಿ ಬಿರಾದಾರ ಮಾತನಾಡಿ, ನಿಲಯದಲ್ಲಿ ವಾಸಿಸುವ ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ಸುಂದರಗೊಳಿಸಲು ಓದುವುದು ನಿಮ್ಮ ಸಂಗಾತಿ ಆಗಬೇಕು, ನಿರಂತರ ಅಭ್ಯಾಸ ನಿಮ್ಮ ಶ್ರೇಷ್ಠ ನಾಗರಿಕರನ್ನಾಗಿ ಮಾಡುವುದು ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ಹೇಳಿ,…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಮಹಿಳೆಯರ ಸ್ವಾವಲಂಬನೆಗೆ ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಸಂಜಿವಿನಿ ಯೋಜನೆಗಳು ಸಹಕಾರಿಯಾಗಿವೆ ಎಂದು ರಬಕವಿ-ಬನಹಟ್ಟಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಹೇಳಿದರು.ಗ್ರಾಮದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ್ ಬಾಗಲಕೋಟ, ತಾಲೂಕಾ ಪಂಚಾಯತ್ ರಬಕವಿ-ಬನಹಟ್ಟಿ ಹಾಗೂ ಶೃಮಬಿಂದು ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯುಸರ ಕಂಪನಿ ಚಿಮ್ಮಡ ಇವರ ಸಂಯುಕ್ತ ಆಶೃಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಒಂದು ಸಾವಿರ ಮಹಿಳೆಯರ ರೈತ ಮಹಿಳೆಯರ ಸದಸ್ಯತ್ವ ಹೊಂದಿರುವ ಈ ಸಂಸ್ಥೆ ಮಹಿಳೆಯರ ಕೌಶಲ್ಯ, ಆರ್ಥಿಕ ಸಬಲೀಕರಣ ಹಾಗೂ ಗ್ರಾಮೀಣ ಭಾಗದ ರೈತ ಮಹಿಳೆಯರ ಶ್ರೇಯೊಭಿವೃದ್ದಿಯ ಗುರಿ ಹೊಂದಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆಯಬೇಕೆಂದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಜಿಲ್ಲಾ ವ್ಯವಸ್ಥಾಪಕ ಭೀಮಾನಂದ ಶೆಟ್ಟರ ಮಾತನಾಡಿ ರೈತ ಮಹಿಳೆಯರಿಂದ ಉತ್ಪಾದಕ ಗುಂಪುಗಳನ್ನು ಮಾಡಿ ಅವರಿಂದ ಕೃಷಿ ಉತ್ಪಣಗಳನ್ನು ನೇರವಾಗಿ ಖರೀದಿಸಿ ಅದರಿಂದ ಗುಣಮಟ್ಟದ ಮೌಲ್ಯ ವರ್ಧಿತ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತೆ ಇದರಿಂದ…
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹುಟ್ಟಿದ ಮೇಲೆ ಸಾವು ಖಚಿತ. ನಮ್ಮ ಸಾವಿನ ಬಳಿಕ ಜನ ನಮ್ಮನ್ನು ಗುರುತಿಸಬೇಕೆಂದರೆ ನಮ್ಮ ಜೀವಿತ ಕಾಲದಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದರೆ ಮಾತ್ರ ನಮ್ಮ ಹೆಸರು ಅಜರಾಮರವಾಗಿ ಉಳಿಯಲು ಸಾಧ್ಯ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.ತಾಲೂಕಿನ ಬಿದರಕುಂದಿಯ ಆರ್.ಎಂ.ಎಸ್.ಎ ಶಾಲೆಯ ರಸ್ತೆಯಲ್ಲಿರುವ ಮನಿಯಾರ್ ಶಾಲಾ ಆವರಣದಲ್ಲಿ ಮನಿಯಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಯೂಬ ಮನಿಯಾರ ಅವರ ತಂದೆ ತಾಯಿಗಳ ಸ್ಮರಣಾರ್ಥ ಹಾಗೂ ಶ್ರಾವಣ ಮಾಸದ ನಿಮಿತ್ಯ ಹಮಿಕೊಳ್ಳಲಾಗಿದ್ದ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧ ವಿತರಣೆ ಮತ್ತು ಮಾಶಾಸನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಗವಂತ ನೀಡಿದ ಸಂಪತ್ತನ್ನು ಸಮಾಜದಲ್ಲಿರುವ ಅಶಕ್ತ ಜನತೆಗೆ ಧಾರೆ ಎರೆದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಆ ಕಾರ್ಯವನ್ನು ಸತತ ೧೨ ವರ್ಷಗಳಿಂದ ಕಣ್ಣಿನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ೨೦೨೫-೨೬ನೇ ಸಾಲಿನ ಎಲೆಕ್ಟಿçÃಕ್ ಮೆಕ್ಯಾನಿಕ್ ಹಾಗೂ ಇಂಡಸ್ಟಿçÃಯಲ್ ರೊಬೋಟಿಕ್ ಆ್ಯಂಡ್ ಡಿಜಿಟಲ್ ಮ್ಯಾನುಪ್ಯಾಕ್ಚರಿಂಗ್ ಕೋರ್ಸ್ಗಳಿಗೆ ಖಾಲಿ ಇರುವ ಸೀಟುಗಳ ಪ್ರವೇಶಕ್ಕಾಗಿ ಎಸ್‌ಎಸ್‌ಎಲ್‌ಸಿ ಪಾಸ್ ಹಾಗೂ ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೩೦ರವರೆಗೆ ಅವಧಿ ವಿಸ್ತರಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ಅಥವಾ cite.karnataka.gov.inವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : ೯೯೮೬೧೨೩೮೯೩, ೯೦೦೮೬೯೨೨೭೦, ೯೯೦೨೮೩೫೬೨೬ ಹಾಗೂ ೯೯೮೦೨೩೦೭೧೦ ಸಂಪರ್ಕಿಸಬಹುದಾಗಿದೆ ಎಂದು ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೪-೨೯ನ್ನು ರೂಪಿಸಿ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ೩೩ ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ನೀತಿಯಡಿ ಗುರುತಿಸಿ ಅನುಮೋದನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ಪ್ರವಾಸೋದ್ಯಮ ಇಲಾಖೆಯಿಂದ ನೂತನ ಪ್ರವಾಸಿ ತಾಣಗಳನ್ನು ಗುರುತಿಸಲು ರಾಜ್ಯದ ಜಿಲ್ಲೆಗಳಿಗೆ ಸಂಬಂಧಿಸಿದ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ರಾಜ್ಯದ ೧೨೭೫ ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ನೀತಿ ೨೦೨೪-೨೯ರಡಿ ಸರ್ಕಾರ ಅನುಮೋದನೆ ನೀಡಿದೆ.ಜಿಲ್ಲೆಯ ಪ್ರವಾಸಿ ತಾಣಗಳಾದ ಗೋಲಗುಮ್ಮಟ, ಇಬ್ರಾಹಿಂರೋಜಾ, ದ್ಯಾಬೇರಿ ಗ್ರಾಮದ ಶ್ರೀ ವಾಗ್ದೇವಿ ದೇವಸ್ಥಾನ, ಕುಮಟಗಿ ಬೇಸಿಗೆ ಅರಮನೆ, ಶಿವಗಿರಿ ಶಿವನಮೂರ್ತಿ, ಸಾರಿಪುತ್ರ ಬೋಧಿಧಮ್ಮ ಬೌದ್ಧ ವಿಹಾರ ಪ್ರವಾಸಿ ತಾಣ, ಕತಕನಹಳ್ಳಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಮಠ, ತೊರಗಿ ಗ್ರಾಮದ ಶ್ರೀ ನರಸಿಂತಹ ದೇವಸ್ಥಾನ, ಸಂಗೀತ ಮಹಲ್, ತೊರವಿ ಶ್ರೀ ಲಕ್ಷ್ಮಿ ದೇವಸ್ಥಾನ, ಕನಮಡಿ ಗ್ರಾಮದ ಶ್ರೀ ದರಿದೇವರ ದೇವಸ್ಥಾನ, ಅರಕೇರಿಯ ಶ್ರೀ ಅಮೋಘಸಿದ್ದ ದೇವಸ್ಥಾನ, ತಿಕೋಟಾದ ಹಾಜಿಮಸ್ತಾನ ದರ್ಗಾ,…
ಪಾಕಿಸ್ತಾನ ಜಿಂದಾಬಾದ್ ಕೂಗುವವರ ವಿರುದ್ಧ ಕ್ರಮವಿಲ್ಲ | ಸಿ.ಟಿ ರವಿ ವಿರುದ್ಧ ಮಾತ್ರ ಎಫೈಆರ್ | ಬಿಜೆಪಿ ಕಿಡಿ ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಕೂಗುವವರು, ಪಾಕಿಸ್ತಾನ್ ಧ್ವಜ ಹಾರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವ ಕಾಂಗ್ರೆಸ್ ಸರ್ಕಾರ, ಮದ್ದೂರಿನ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಭಾವೋದ್ವೇಗದಲ್ಲಿ ಮಾತನಾಡಿರುವ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಿಸಿರುವುದು ವಿದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿರುವುದನ್ನು ಸಾಕ್ಷೀಕರಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬುಧವಾರ ನಡೆದ ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಪಾಕಿಸ್ತಾನ್ ಜಿಂದಾಬಾದ್ ಕೂಗುವವರು, ಪಾಕಿಸ್ತಾನ್ ಧ್ವಜ ಹಾರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವ ಕಾಂಗ್ರೆಸ್ ಸರ್ಕಾರ ಮದ್ದೂರಿನ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದ…
ವಿಜಯಪುರ ಜಿಪಂ ಯೋಜನಾಧಿಕಾರಿ ಸಿ.ಬಿ.ಕುಂಬಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಮೋಬೈಲ್ ಸ್ವೀಚ್ ಆಫ್ ಮಾಡುತ್ತಿರಿ ಮತ್ತು ಕರೆ ಸ್ವೀಕರಿಸುವುದಿಲ್ಲ ಎಂಬ ದೂರುಗಳಿವೆ ಮೊದಲು ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ. ನಮ್ಮ ಇಲಾಖೆಯ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯವಾಗಬೇಕು. ನಿಮ್ಮ ಇಲಾಖೆಗಳಿಗೆ ವಹಿಸಿಕೊಟ್ಟ ಕಾರ್ಯದಲ್ಲಿ ಪ್ರವೃತ್ತರಾಗಬೇಕು ಎಂದು ಜಿಪಂ ಯೋಜನಾಧಿಕಾರಿ ಸಿ.ಬಿ.ಕುಂಬಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸದರು.ಸಿಂದಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲ ಇರುವುದರಿಂದ ಬೆಳೆ ನಾಶ ಮತ್ತು ಮೆನೆಗಳು ಬಿದ್ದಿವೆ. ಹಾಗೂ ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದ್ದು ಅದಕ್ಕೆ ಬೇಕಾದ ಮುಂಜಾಗೃತ ಕ್ರಮಕೈಗೊಳ್ಳಬೇಕು. ತಾಲೂಕಿನಲ್ಲಿ ಈ ಬಾರಿ ಮಳೆ ಹೆಚ್ಚಾಗಿದ್ದು, ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ಮಾಡಲಾಗಿದೆಯೇ ಎಂದ ಪ್ರಶ್ನೆಗೆ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಉತ್ತರಿಸಿ, ಆಲಮೇಲ ಸರ್ವೇಯ ಬೀಮಾ ನದಿಯ ಸುತ್ತಮುತ್ತಲಿನ ೭೬೪ಹೆಕ್ಟರ್ ಹಾಗೂ ಮಳೆಯಿಂದಲೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಜ್ಯೋತಿ ಬಸ್ಸಿನಕರ್ ಅವರು ಸಲ್ಲಿಸಿದ್ದ “ಇಂಪ್ಯಾಕ್ಟ್ ಆಫ್ ಡಾ. ಬಿ.ಆರ್ ಅಂಬೇಡ್ಕರ್ ಡೆವಲಪ್ಮೆಂಟ್ ಕಾರ್ಪೋರೇಷನ್ ಆನ್ ವುಮನ್ ಎಂಪವರ್ಮೆಂಟ್ ಇನ್ ಕರ್ನಾಟಕ: ಅ ಸ್ಟಡಿ ಆಫ್ ಸೆಲ್ಫ ಎಂಪ್ಲಾಯಿಮೆಂಟ್ ಸ್ಲೀಮ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಜ್ಯೋತಿ ಬಸ್ಸಿನಕರ್ ಅವರು ಅರ್ಥಶಾಸ್ತ್ರ ವಿಭಾಗದ ಡಾ. ಸುರೇಶ ಕೆ.ಪಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಜ್ಯೋತಿ ಬಸ್ಸಿನಕರ್ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.
