ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಮಹಿಳೆಯರ ಸ್ವಾವಲಂಬನೆಗೆ ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಸಂಜಿವಿನಿ ಯೋಜನೆಗಳು ಸಹಕಾರಿಯಾಗಿವೆ ಎಂದು ರಬಕವಿ-ಬನಹಟ್ಟಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಹೇಳಿದರು.
ಗ್ರಾಮದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ್ ಬಾಗಲಕೋಟ, ತಾಲೂಕಾ ಪಂಚಾಯತ್ ರಬಕವಿ-ಬನಹಟ್ಟಿ ಹಾಗೂ ಶೃಮಬಿಂದು ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯುಸರ ಕಂಪನಿ ಚಿಮ್ಮಡ ಇವರ ಸಂಯುಕ್ತ ಆಶೃಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಒಂದು ಸಾವಿರ ಮಹಿಳೆಯರ ರೈತ ಮಹಿಳೆಯರ ಸದಸ್ಯತ್ವ ಹೊಂದಿರುವ ಈ ಸಂಸ್ಥೆ ಮಹಿಳೆಯರ ಕೌಶಲ್ಯ, ಆರ್ಥಿಕ ಸಬಲೀಕರಣ ಹಾಗೂ ಗ್ರಾಮೀಣ ಭಾಗದ ರೈತ ಮಹಿಳೆಯರ ಶ್ರೇಯೊಭಿವೃದ್ದಿಯ ಗುರಿ ಹೊಂದಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಜಿಲ್ಲಾ ವ್ಯವಸ್ಥಾಪಕ ಭೀಮಾನಂದ ಶೆಟ್ಟರ ಮಾತನಾಡಿ ರೈತ ಮಹಿಳೆಯರಿಂದ ಉತ್ಪಾದಕ ಗುಂಪುಗಳನ್ನು ಮಾಡಿ ಅವರಿಂದ ಕೃಷಿ ಉತ್ಪಣಗಳನ್ನು ನೇರವಾಗಿ ಖರೀದಿಸಿ ಅದರಿಂದ ಗುಣಮಟ್ಟದ ಮೌಲ್ಯ ವರ್ಧಿತ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತೆ ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಯಾಗಲು ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಕಂಪನಿಯ ಅಧ್ಯಕ್ಷರಾದ ಸುಜಾತಾ ಕವಟಕೊಪ್ಪ ವಹಿಸಿದ್ದರು, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿ, ತಾಲೂಕಾ ವ್ಯವಸ್ಥಾಪಕ ಪ್ರಕಾಶ ಕೊಡಬಾಗಿ, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ, ಶ್ರೀಶೈಲ ಮಠಪತಿ, ಮಹಿಳಾ ಕಿಸಾನ ಗುಂಪಿನ ಪದಾಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ರೂಪಾ ಮಿರ್ಜಿ ಸ್ವಾಗತಿಸಿದರು, ಸೋಮೇಶ ಹಿರೇಮಠ ನಿರೂಪಿಸಿದರು, ಶ್ರೀನಾಥ ಭೂವನ್ನರ ವಂದಿಸಿದರು.