ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ೨೦೨೫-೨೬ನೇ ಸಾಲಿನ ಎಲೆಕ್ಟಿçÃಕ್ ಮೆಕ್ಯಾನಿಕ್ ಹಾಗೂ ಇಂಡಸ್ಟಿçÃಯಲ್ ರೊಬೋಟಿಕ್ ಆ್ಯಂಡ್ ಡಿಜಿಟಲ್ ಮ್ಯಾನುಪ್ಯಾಕ್ಚರಿಂಗ್ ಕೋರ್ಸ್ಗಳಿಗೆ ಖಾಲಿ ಇರುವ ಸೀಟುಗಳ ಪ್ರವೇಶಕ್ಕಾಗಿ ಎಸ್‌ಎಸ್‌ಎಲ್‌ಸಿ ಪಾಸ್ ಹಾಗೂ ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೩೦ರವರೆಗೆ ಅವಧಿ ವಿಸ್ತರಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ಅಥವಾ cite.karnataka.gov.inವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : ೯೯೮೬೧೨೩೮೯೩, ೯೦೦೮೬೯೨೨೭೦, ೯೯೦೨೮೩೫೬೨೬ ಹಾಗೂ ೯೯೮೦೨೩೦೭೧೦ ಸಂಪರ್ಕಿಸಬಹುದಾಗಿದೆ ಎಂದು ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.