Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮಹಾಭಾರತದಲ್ಲಿ ಒಂದು ಕಥೆ ಬರುತ್ತದೆ. ಭೀಮ ಮತ್ತು ಅರ್ಜುನ ಇಬ್ಬರೂ ಶಿವನ ದೊಡ್ಡ ಭಕ್ತರು. ಅರ್ಜುನ ದಿನವೂ ಶಿವನನ್ನು ಎರಡು ಗಂಟೆಗಳ ಕಾಲ ಪ್ರಾರ್ಥಿಸುತ್ತಿದ್ದ. ಆದರೆ ಭೀಮ ಕೇವಲ ಎರಡು ನಿಮಿಷ ಪ್ರಾರ್ಥಿಸುತ್ತಿದ್ದ. ಒಂದು ದಿನ ಪ್ರಾರ್ಥನೆ ಮಾಡುವಾಗ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಅರ್ಜುನ ತನ್ನ ಮತ್ತು ಭೀಮನ ನಡುವೆ ನಿಮ್ಮ ಉತ್ತಮ ಭಕ್ತ ಯಾರು ಎಂದು ಶಿವನನ್ನು ಕೇಳುತ್ತಾನೆ. ಹಾಗೆ ಕೇಳುವಾಗ ಅರ್ಜುನನಿಗೆ ಶಿವನ ಉತ್ತಮ ಭಕ್ತ ತಾನೆ ಎಂದು ಖಚಿತವಾಗಿ ಅನಿಸಿರುತ್ತದೆ. ಆದರೆ ಶಿವ ನನ್ನ ಉತ್ತಮ ಭಕ್ತ ಭೀಮ ಎಂದು ಹೇಳುತ್ತಾನೆ. ಆಗ ಅರ್ಜುನ ಅಚ್ಚರಿಯಿಂದ ಶಿವನನ್ನು ಕೇಳುತ್ತಾನೆ. ‘ನಾನು ಪ್ರತಿದಿನ ಎರಡು ಗಂಟೆ ಪ್ರಾರ್ಥನೆ ಮಾಡುತ್ತೇನೆ. ಆದರೆ ಭೀಮ ಕೇವಲ ಎರಡೇ ನಿಮಿಷ ಪ್ರಾರ್ಥನೆ ಮಾಡುತ್ತಾನೆ. ಹಾಗಾದರೆ ಭೀಮ ಹೇಗೆ ಉತ್ತಮ ಭಕ್ತ?’ ಆಗ ಏಕಾಗ್ರತೆಯ ಬಗ್ಗೆ ಶಿವ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ. ‘ನೀನು…
ಲೇಖನ- ಸಿದ್ಧಾಪುರ ಶಿವಕುಮಾರ್ಲೇಖಕ-ಪತ್ರಕರ್ತ ಉದಯರಶ್ಮಿ ದಿನಪತ್ರಿಕೆ ಇದು ವೈವಿಧ್ಯಮಯ ಜಗತ್ತು. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಆಯ್ಕೆ ಆಕರ್ಷಣೆ ಮೆಚ್ಚುಗೆ ಅಭಿಮಾನ ಮೂಡುತ್ತವೆ. ಅದು ಅವರವರ ವೈಯಕ್ತಿಕ ಸ್ವಭಾವ ಆಸಕ್ತಿ ಗ್ರಹಿಕೆಗಳ ಮೇಲೆ ಸೃಜಿಸುವಂತಹದ್ದು. ನಮಗೆ ಮೆಚ್ಚುಗೆ ಆದದ್ದು ಇನ್ನೊಬ್ಬರಿಗೆ ಇಷ್ಟವಾಗಲಾರದು. ಆದರೆ ಅಭಿಮಾನ ಆದರ್ಶವಾಗಿರಲು ಅದರದೇ ಆದ ಗೌರವಯುತ ಗ್ರಹಿಕೆ ಮತ್ತು ಅಧ್ಯಯನ ಬೇಕಾಗುತ್ತದೆ. ಅಭಿಮಾನ ಮತ್ತು ಅಭಿಮಾನಿಸಲ್ಪಡುವ ವ್ಯಕ್ತಿತ್ವ ಮತ್ತು ನುಡಿದಂತೆ ನಡೆದ ಬದುಕಿನ ಚಾರಿತ್ರ್ಯ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿದ್ದಲ್ಲಿ ಅವರವರ ಅಭಿಮಾನಕ್ಕೂ ಹೆಮ್ಮೆ ಘನತೆ ಇರುತ್ತದೆ. ಹೀಗಾಗಿಯೇ ಅಭಿಮಾನ ಎಂಬುದು ಅದು ಪರಿಶುದ್ಧ ಅಂತಃಕರಣದ್ದಾಗಿರಬೇಕು. ಏಕಮುಖಿ ಧೋರಣೆಯಿಂದ ಕೂಡಿರಬಾರದು. ತಾನು ಮೆಚ್ಚಿಕೊಂಡವರನ್ನು ಹೊರತುಪಡಿಸಿ ಇತರರಿಗೆ ಶ್ರೇಯಸ್ಸು ಆದರೆ, ಅಸಂಬದ್ಧವಾಗಿ ಕಾಮೆಂಟಿಸಿ ಹೊಟ್ಟೆಕಿಚ್ಚಿನಿಂದ ನರಳಬಾರದು. ಈ ಮಾನಸಿಕ ಕೀಳರಮೆಯ ನರುಳುವಿಕೆ ಎಂದಿಗೂ ಸಜ್ಜನಿಕೆಯಾಗಲಿ ಪ್ರಬುದ್ಧ ಅಭಿಮಾನವಾಗಲಿ ಆಗಲಾರದು. ಇನ್ನೊಬ್ಬರ ಶ್ರೇಯಸ್ಸು ಗೆಲುವು ನಮ್ಮನ್ನು ಕಂಗೆಡಿಸಿದರೆ ನಮ್ಮನ್ನು ನಾವೇ ಅವಿವೇಕಿಗಳಂತೆ ತೋರಿಸಿಕೊಂಡಂತೆ. ದುರಾಭಿಮಾನ ನಮ್ಮ ವ್ಯಕ್ತಿತ್ವಕ್ಕೆ ಖಂಡಿತವಾಗಿ ದಕ್ಕೆ ತರುತ್ತದೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಇದೇ ದಿ.೨೨ ರಿಂದ ಸೆ.೩೦ ರವರೆಗೆ ಎಂಟು ದಿನಗಳ ಕಾಲ ನಡೆಯಲಿರುವ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದ ಯುವ ಪ್ರತಿನಿಧಿ ಮಂಡಳದ ನೇತೃತ್ವವನ್ನು ವಿಜಯಪುರ ಯುವತಿ ಕು.ಶಿಫಾ ಜಮಾದಾರ ವಹಿಸಲಿರುವುದು ಜಿಲ್ಲೆಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು.ಇದೇ ಪ್ರಥಮ ಬಾರಿಗೆ ಜಾಗತಿಕ ಮಟ್ಟದ ಶೃಂಗ ಸಭೆಯಲ್ಲಿ ವಿಜಯಪುರ ಯುವ ಪ್ರತಿಭೆಯೊಬ್ಬರು ಭಾರತ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.ವಿಶ್ವ ಅಣು ದಿನಾಚರಣೆ ಅಂಗವಾಗಿ ರಷ್ಯಾ ಸರ್ಕಾರ ತನ್ನ ರಾಜಧಾನಿಯಲ್ಲಿ ಸೆ.೨೨ ರಂದು ವಿಶ್ವ ಯುವ ಶೃಂಗ ಸಭೆ ಆಯೋಜಿಸಿದ್ದು, ಭಾರತದಿಂದ ಓರ್ವ ಯುವತಿ, ಓರ್ವ ಯುವಕ ಭಾಗವಹಿಸಲಿದ್ದು, ವಿಜಯಪುರ ಯುವತಿಗೆ ಈ ಅಪೂರ್ವ ಅವಕಾಶ ಪ್ರಾಪ್ತವಾಗಿರುವುದು ಜಿಲ್ಲೆಯಲ್ಲಿ ಹೊಸ ಸಂತಸದ ಅಲೆ ಸೃಷ್ಟಿಸಿದೆ. ಒಟ್ಟು ೧೬೦ ರಾಷ್ಟçಗಳ ಯುವ ಪ್ರತಿನಿಧಿಗಳು ಈ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.ವಿಶ್ವ ಶಾಂತಿಯಲ್ಲಿ ಯುವಜನರ ಪಾತ್ರ ಎಂಬ ವಿಷಯವಾಗಿ ಕು. ಶಿಫಾ ಜಮಾದಾರ ತಮ್ಮ ವಿದ್ವತಪೂರ್ಣ ವಿಚಾರಗಳನ್ನು ಮಂಡಿಸಲಿದ್ದಾರೆ.ತನ್ನ ಅಧ್ಯಯನವನ್ನು ಶ್ರದ್ಧೆಯಿಂದ…
ವಿಜಯಪುರದ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮುಕುಂದ ಕುಲಕರ್ಣಿ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೩೦,೭೫,೧೮೯ ರೂ. ನಿವ್ವಳ ಲಾಭಗಳಿಸುವ ಮೂಲಕ ಪ್ರಗತಿಯತ್ತ ದಾಪುಗಾಲು ಇರಿಸಿದೆ ಎಂದು ಶ್ರೀ ಮಹಾಲಕ್ಷ್ಮೀಸಹಕಾರಿ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ಪ್ರಕಟಿಸಿದರು.ವಿಜಯಪುರದ ಶ್ರೀ ಸಂಗನ ಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಶ್ರೀ ಮಹಾಲಕ್ಷೀ ಸಹಕಾರಿ ಬ್ಯಾಂಕ್ ೯೫ ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಬ್ಯಾಂಕಿನ ಪ್ರಗತಿಯನ್ನು ವಿಶ್ಲೇಷಿಸಿದ ಅವರು, ಬ್ಯಾಂಕ ದಿನದಿಂದ ದಿನಕ್ಕೆ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಹಾಗೂ ಸಿಬ್ಬಂದಿಯ ಕಾರ್ಯದಕ್ಷತೆ ಹಾಗೂ ಸದಸ್ಯರ ಸಹಕಾರವೇ ಕಾರಣ ಎಂದರು.ಪ್ರಸ್ತಕ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಒಟ್ಟು ಲಾಭಾಂಶ ೪೬.೪೮ ಲಕ್ಷ ರೂ. ಇದ್ದು ಅದರಲ್ಲಿ ೯.೭೩ ಲಕ್ಷ ರೂ. ತೆರಿಗೆ ಪಾವತಿ ಮಾಡಲಾಗಿದ್ದು ಆ ಮೂಲಕ ೩೦,೭೫,೧೮೯ ರೂ. ನಿವ್ವಳ ಲಾಭ…
ವಿಜಯಪುರದಲ್ಲಿ ರೂ.1,36,98,523/- ಮೌಲ್ಯದ “ಲೈಪ್ ಅಗ್ರೋ ಕೆಮಿಕಲ್” ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕ ಔಷಧಗಳು ಜಪ್ತಿ! ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕೆಐಎಡಿಬಿ ಸರ್ವೆ ನಂ: 1051/ಎ1/ಎ, ಪ್ಲಾಟ್ ನಂ: 279 ರಲ್ಲಿನ ಗೊಡಾವನದಲ್ಲಿ ಅನಧಿಕೃತವಾಗಿ ನಕಲಿ ಕ್ರಿಮಿನಾಶಕ ಔಷಧಿಗಳು ತಯಾರಿಸುತ್ತಿದ್ದ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸೆ11 ರಂದು ಸಂಜೆ 4.30 ಗಂಟೆಯ ಸುಮಾರಿಗೆ ಆರೋಪಿತರಾದ ವಿದ್ಯಾಸಾಗರ ತಂದೆ ಚಿನ್ನಾರೆಡ್ಡಿ ಮಲ್ಲಾಬಾದಿ, 42 ವರ್ಷ, ಸಾ|| ಕೊಂಡಗೂಳಿ ಹಾಗೂ ಅಮರ ತಂದೆ ಗುರುನಾಥ ರೆಡ್ಡಿ, 19 ವರ್ಷ, ಸಾ|| ಬೊಳನಿ ತಾ|| ಆಳಂದ ಜಿ|| ಕಲಬುರ್ಗಿ ಇವರು “ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೋಟೆಕ್ಷನ್” ಎನ್ನುವ ಕಂಪನಿಯ ಬೋರ್ಡ್ ಹಾಕಿಕೊಂಡು ಸದರಿ ಗೋಡಾವನಲ್ಲಿ “ಲೈಪ್ ಅಗ್ರೋ ಕೆಮಿಕಲ್” ಕಂಪನಿಯ ಹೆಸರಿನಲ್ಲಿ ತಾವೇ ತಯಾರಿಸಿದ ನಕಲಿ ಕ್ರಿಮಿನಾಶಕ ಔಷಧಗಳಿಗೆ “ಲೈಪ್ ಅಗ್ರೋ ಕೆಮಿಕಲ್”* ಕಂಪನಿಯ ಲೇಬಲ್‌ಗಳನ್ನು ಅಂಟಿಸಿ, ಅನಧೀಕೃತವಾಗಿ ನಕಲಿ ಕ್ರಿಮಿನಾಶಕ ಔಷಧಗಳನ್ನು ತಯಾರಿಸಿ, ಗೋಡಾವನದಲ್ಲಿ ಸಂಗ್ರಹಿಸಿ ಇಟ್ಟುಕೊಂಡು…
ಸಿಂದಗಿಯಲ್ಲಿ ೮೪ ಕುಟುಂಬಗಳ ಮನೆಗಳನ್ನು ತೆರವುಗೊಳಿಸಿದ ಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಖಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಂದಗಿ ನಗರದಲ್ಲಿ ೮೪ ಕುಟುಂಬಗಳ ಮನೆಗಳನ್ನು ತೆರವುಗೊಳಿಸಿ ನಿರ್ಗತಿಕರನ್ನಾಗಿ ಮಾಡಿರುವುದು ಅತ್ಯಂತ ಖಂಡನೀಯ, ಕೂಡಲೇ ಈ ಎಲ್ಲ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಬಡವರ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ, ತೆರವು ಕಾಮಗಾರಿ ನಡೆಸುವ ಪೂರ್ವದಲ್ಲಿ ಶಾಶ್ವತ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಏಕಾಏಕಿ ಕಾಮಗಾರಿ ನಡೆಸಿದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.ಸಿಂದಗಿ ನಗರ ವ್ಯಾಪ್ತಿಯ ವಾರ್ಡ ನಂ-೨೩ ರಲ್ಲಿನ ಸರ್ವೆ ಸಂ- ೮೪೨/೧ಅ ಕ್ಷೇತ್ರ ೪.೦೦ ಎಕರೆ ಪುರಸಭೆಯ ಜಮೀನಿನಲ್ಲಿ ೨೦೦೪ ನೇ ಸಾಲಿನಲ್ಲಿ ಅಂದಿನ ಶಾಸಕರು, ಪುರಸಭೆ ಅಧಿಕಾರಿಗಳು ಹಾಗೂ ತಹಶೀಲ್ದಾರರ ಸಮ್ಮುಖದಲ್ಲಿ ಸರಿಸುಮಾರು ೮೪ ಮುಗ್ಧ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಮಹಾವೀರ ಕಾಲೋನಿಯಲ್ಲಿರುವ ಶ್ರೀ ಸಂಗನಬಸವ ಸಮುದಾಯ ಭವನದಲ್ಲಿ ಇದೇ ಸೆ.೧೪ ರಂದು ಬೆಳಿಗ್ಗೆ ೧೧ ಕ್ಕೆ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ನಿಯಮಿತ ೯೫ ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಕರೆಯಲಾಗಿದೆ.ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದು, ಸದಸ್ಯರು ಸಭೆಗೆ ಪಾಲ್ಗೊಳ್ಳಬೇಕು ಎಂದು ವ್ಯವಸ್ಥಾಪಕಿ ಪದ್ಮಾವತಿ ವಿ ಕುಲಕರ್ಣಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಬಳಗಾನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಭಾರತಿ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ.ಈ ವೇಳೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಸತತ ಪ್ರಯತ್ನದ ಫಲವಾಗಿ ಕ್ರೀಡಾ ಸ್ಪೂರ್ತಿ ಇಟ್ಟುಕೊಂಡು ಆಟ ಆಡಿದ್ದರಿಂದ ಓಟ, ಉದ್ದ ಜಿಗಿತ ಹಾಗೂ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುವುದು ಸಂತಸ ತಂದಿದೆ. ವಿದ್ಯಾರ‍್ಥಿಗಳು ಆಟ ಹಾಗೂ ಪಾಠಗಳನ್ನು ಸಮಾನವಾಗಿ ತೆಗೆದುಕೊಂಡು ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ಕ್ರೀಡಾ ಸ್ಪೂರ್ತಿಯಿಂದ ಆಟ ಆಡಿದ ವಿದ್ಯಾರ್ಥಿಗಳು ಹಾಗೂ ಸತತವಾಗಿ ತರಬೇತಿ ನೀಡಿದ ಕ್ರೀಡಾ ಶಿಕ್ಷಕಿಯರು ನಮ್ಮ ಶಾಲೆಯ ರತ್ನಗಳು ಇದ್ದಂತೆ ಎಂದು ಶ್ಲಾಘಿಸಿದರು.ಈ ವೇಳೆ ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಲಕ್ಷ್ಮೀಬಾಯಿ ಹಳೇಮನಿ, ಸುವರ‍್ಣ ಸಾರಂಗಮಠ, ಸೀತಾ…
ಮಾಜಿ ಶಾಸಕ ಭೂಸನೂರ ತಮ್ಮ ತಪ್ಪು ಮುಚ್ಚಿಕೊಳ್ಳಲು ನಮ್ಮ ಕುಟುಂಬದ ಬಗ್ಗೆ ಆಪಾದನೆ | ಶಾಸಕ ಅಶೋಕ ಮನಗೂಳಿ ವಾಗ್ದಾಳಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತೆರವುಗೊಳಿಸಲಾದ ಸರ್ವೇ ನಂ.೮೪೨ರ ಜಾಗೆಯ ಬಗ್ಗೆ ನನಗೇನೂ ಗೊತ್ತೇ ಇಲ್ಲ ಎಂದು ಹೇಳುವ ಮಾಜಿ ಶಾಸಕರು ಉಪ-ಚುನಾವಣೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಇದೇ ವಿಷಯ ಕುರಿತು ಸಲ್ಲಿಸಿದ ಮನವಿ ಪತ್ರ ನಮ್ಮ ಬಳಿ ಇದೆ. ತಮ್ಮ ಅವಧಿಯಲ್ಲಿ ಮಾಜಿ ಶಾಸಕ ಭೂಸನೂರ ಇದರ ಕುರಿತು ಪರಿಹಾರ ಕಂಡುಕೊಳ್ಳಬಹುದಿತ್ತು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವೈಯಕ್ತಿಕವಾಗಿ ನಮ್ಮ ಕುಟುಂಬದ ಬಗ್ಗೆ ಆಪಾದನೆ ಮಾಡುವ ಮುಖಾಂತರ ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹರಿಹಾಯ್ದರು.ಸಿಂದಗಿ ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಕುರಿತು ಮಾಡಿದ ೧೬ ಆಪಾದನೆಗಳಲ್ಲಿ ಎಪಿಎಂಸಿಯಲ್ಲಿನ ಕಟ್ಟಡದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಮಾಡಿದ್ದು ನನ್ನ ತಪ್ಪು, ಅದನ್ನು ನಾನು ಒಪ್ಪಿಕೊಂಡು ಕಾರ್ಯಾಲಯವನ್ನು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ ಸೆ.೧೪ರಂದು ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್-೨೦೨೫ ಟಿ೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಗೆದ್ದು ಬರಲಿ ಎಂದು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಪ್ರಶಿಕ್ಷಣಾರ್ಥಿಗಳು ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದರು.ಈ ವೇಳೆ ಪ್ರಾಧ್ಯಾಪಕ ದಾನಯ್ಯ ಮಠಪತಿ, ಸುಧಾಕರ ಚೌವ್ಹಾಣ, ಚನ್ನು ಕತ್ತಿ ಮಾತನಾಡಿ, ಭೀಕರ ಪೆಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಉತ್ತರದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವೇಷ ಹೊಗೆಯಾಡುತ್ತಿದೆ. ಇಂತಹ ಬಿಗುವಿನ ವಾತಾವರಣದಲ್ಲಿ ಉಭಯ ದೇಶಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುವುದು ಅಷ್ಟು ಸುಲಭದ ಮಾತಲ್ಲ. ಈ ಬಾರಿ ಟಿ-೨೦ ಏಷ್ಯಾ ಕಪ್‌ನಲ್ಲಿ ಪಂದ್ಯಾವಳಿಗಿಂತಲೂ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಪೆಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆ ಬಳಿಕ ಆಪರೇಷನ್ ಸಿಂಧೂರ ಸೇನಾ…
