Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದೇಶದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಪಟ್ಟಣದ ಕಲ್ಮೇಶ್ವರನಿಗೆ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸುವುದರ ಮೂಲಕ ಅವರ ಆಯುಷ್ಯ, ಆರೋಗ್ಯ, ಯಶಸ್ಸಿಗಾಗಿ ಪ್ರಾರ್ಥಿಸಿದರು.ಪಟ್ಟಣದ ಕಲ್ಮೇಶ್ವರ ದೇವಸ್ಥಾನಕ್ಕೆ ಭಾನುವಾರ ಬೆಳಿಗ್ಗೆ ೬ ಗಂಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ನರೇಂದ್ರ ಮೋದಿಯವರ ಅಭಿಮಾನಿಗಳು ಅಭಿಷೇಕ ನೆರವೇರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಮಾತನಾಡಿದರು.ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಹಿರೇಮಠ, ಬಿಜೆಪಿ ಕಾರ್ಯಕರ್ತರಾದ ಕಲ್ಮೇಶ ಬುದ್ನಿ, ಚೇತನ ಇಂಡಿ, ವಿಜಯಕುಮಾರ ಹಿರೇಮಠ, ಮಹಾಂತೇಶ ಬಿರಾದಾರ (ಡೋಣಿ ಬೂದಿಹಾಳ), ಪ್ರಶಾಂತ ಹೊನ್ನುಟಗಿ, ಶ್ರೀಶೈಲ ಯಂಭತ್ನಾಳ, ಪ್ರಕಾಶ ಡೋಣೂರ, ಸಚೀನ ಕೋರಿ, ಅಭಿಷೇಕ ಅಂಬಲಗಿ, ಪಿಂಟೂ ಭಾಸುತ್ಕರ್ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಸೇರಿದಂತೆ ವಿವಿಧ ರೀತಿಯ ಸೇವೆಯ ರೂಪದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಜಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.ಬಿಜೆಪಿ ನಗರ ಮಂಡಳ ವತಿಯಿಂದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಹಲವಾರು ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಜನ್ಮದಿನದ ಶುಭಾಷಯ ಕೋರಿದರು. ೭೬ ಜನ ಕಾರ್ಯಕರ್ತರು ರಕ್ತದಾನ ಮಾಡಿದರು.ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.ಈ ವೇಳೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ, ಕೇವಲ ಜನಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡು ಹೋರಾಟ ಹಾಗೂ ದಿವ್ಯ ದೇಶಭಕ್ತಿಯ ಮೂಲಕ ಈ ದೇಶದ ಚುಕ್ಕಾಣಿ ಹಿಡಿದಿರುವ ಈ ಅವಧಿಯಲ್ಲಿ ಭಾರತ ಅಭಿವೃದ್ಧಿಯಲ್ಲಿ ನಾಗಾಲೋಟ ಬೀರುತ್ತಿದೆ, ಮೊನ್ನೆಯಷ್ಟೇ ಜೀವನಾವಶಕ್ಯ ವಸ್ತುಗಳನ್ನು ಜಿಎಸ್‌ಟಿಯ ಪರಿಧಿಯಲ್ಲಿ ಹೊರಗಿಡುವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರಾಧಾ ಅವರು ಸಲ್ಲಿಸಿದ್ದ “ಆನ್ ಇವ್ಯಾಲುವೇಶನ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಇನ್ ಕಲಬುರ್ಗಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ರಾಧಾ ಅವರು ಅರ್ಥಶಾಸ್ತ್ರ ವಿಭಾಗದ ಪ್ರೊ.ಡಿ.ಎಮ್.ಮದರಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ರಾಧಾ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಹಶೀಲ್ದಾರ ಕಾರ್ಯಾಲಯದಲ್ಲಿ ಸಮುದಾಯದ ಪ್ರಮುಖರಿಂದ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮರ ಭಾವಚಿತ್ರಕ್ಕೆ ಸಮುದಾಯದವರು ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಶಿಕ್ಷಕ ಅರುಣ ಕೋರವಾರ ಮಾತನಾಡಿದರು.ಕಾರ್ಯಕ್ರಮದಲ್ಲಿ ಶಿರಸ್ತೇದಾರ ಸುರೇಶ ಮ್ಯಾಗೇರಿ, ಸಿಬ್ಬಂದಿ ಚನ್ನಬಸು ಹೊಸಮನಿ, ಶ್ರೀಮಂತ ತಳವಾರ(ನಿವಾಳಖೇಡ) ಸಮುದಾಯದ ವಿಶ್ವನಾಥ ಮೂರುಝಾವದಮಠ(ಆಲಮೇಲ) ನಾಗಯ್ಯ ಮೂರುಝಾವದಮಠ, ತೇಜಣ್ಣ ಕಕ್ಕಳಮೇಲಿ, ಮಹೇಶ ದೊಡಮನಿ, ಗಂಗಾಧರ ಆಲಮೇಲ, ಸುರೇಶ ಬಡಿಗೇರ, ಪ್ರಶಾಂತ ದೊಡಮನಿ, ಕಾಶೀಪತಿ ಬಡಿಗೇರ, ಮಹಾರುದ್ರ ಕಕ್ಕಳಮೇಲಿ, ದೇವೀಂದ್ರ ಕಕ್ಕಳಮೇಲಿ, ಪ್ರಶಾಂತ ಬಡಿಗೇರ, ಕಾಶೀಪತಿ ಬಡಿಗೇರ ಇದ್ದರು.

Read More

ಸರಕಾರಕ್ಕೆ ಗಡುವು ನೀಡಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆಗ್ರಹ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಪರಿಹಾರವನ್ನು ೩ ಆರ್ಥಿಕ ವರ್ಷದ ಹಂತದಲ್ಲಿ ಕೊಡುವ ನಿರ್ಣಯ ಕೈಗೊಂಡಿರುವದನ್ನು ಸರಕಾರವು ಕೈಬಿಟ್ಟು ಇದೇ ೨೦೨೬ರ ಮಾರ್ಚ ತಿಂಗಳಿನ ಬಜೆಟ್‌ನ ಒಳಗಾಗಿ ಅವಳಿ ಜಿಲ್ಲೆಯ ರೈತರಿಗೆ ಒಂದೇ ಹಂತದಲ್ಲಿ ವಿತರಣೆ ಮಾಡಬೇಕು ಇಲ್ಲದಿದ್ದರೆ ಮುಂದೊಂದು ದಿನ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸರಕಾರಕ್ಕೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಗಡುವು ನೀಡಿದರು.ಪಟ್ಟಣದ ಯುಕೆಪಿ ವೃತ್ತದಲ್ಲಿ ಪ್ರವಾಸಿ ಮಂದಿರದ ಎದುರುಗಡೆ ಆಲಮಟ್ಟಿ ಆಣೆಕಟ್ಟನ್ನು ೫೨೪ ಮೀ ಎತ್ತರ ಏರಿಸುವದರಿಂದ ಮುಳಗಡೆಯಾಗುವ ರೈತರ ಜಮೀನುಗಳಿಗೆ ನೀರಾವರಿ ಒಂದು ಎಕರೆಗೆ ೫೫ ಲಕ್ಷ ರೂ, ಒಣ ಬೇಸಾಯಕ್ಕೆ ೪೫ ಲಕ್ಷ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸಿ ನಡೆದ ಸರದಿ ಉಪವಾಸ ಸತ್ಯಾಗ್ರಹವನ್ನು ಅವಳಿ ಜಿಲ್ಲೆಯ ರೈತರ ಹಾಗೂ ಗಣ್ಯ ಮಾನ್ಯರ ಜನಪ್ರತಿನಿಧಿಗಳ ಸೂಚಣೆ ಮೇರೆಗೆ ತಾತ್ಕಾಲಿಕವಾಗಿ ಹಿಂತೆಗೆದುಕೊಂಡ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ಅವಳಿ ಜಿಲ್ಲೆಯಲ್ಲಿ ಬಾಗಲಕೋಟ,…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಇವರ ಪ್ರಯತ್ನದ ಫಲವಾಗಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಮಕ್ಕೆ ಸರ್ಕಾರ ಹೊಸದಾಗಿ ಪಶು ಚಿಕಿತ್ಸಾಲಯ ಮಂಜೂರು ಮಾಡಿದೆ.ಈ ಕುರಿತು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ಮಂಗಳಗೌರಿ ಅಧಿಕೃತವಾಗಿ ತಳೇವಾಡ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.ತಳೇವಾಡ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಮಂಜೂರು ಮಾಡಿದ್ದರಿಂದ ಈ ಭಾಗದ ಹಲವು ಹಳ್ಳಿಗಳ ಜಾನುವಾರು ಪಾಲಕರಿಗೆ ತಮ್ಮ ಪಶುಗಳಿಗೆ ತ್ವರಿತವಾಗಿ ಆರೋಗ್ಯ ಸೇವೆ ಪಡೆಯುವುದಕ್ಕೆ ಅನುಕೂಲ ಆಗಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಿರುವ ಸಚಿವರಾದ ಶಿವಾನಂದ ಪಾಟೀಲ ಅವರ ಅಭಿವೃದ್ಧಿ ಪರ ಬದ್ಧತೆಗೆ ಕ್ಷೇತ್ರದ ಜನರು ಅಭಿನಂದನೆ ಸಲ್ಲಿಸಿದ್ದಾರೆ.ವಿಜಯಪುರ ಜಿಲ್ಲೆಗೆ ಕೊಲ್ಹಾರ ತಾಲೂಕಿನ ತಳೇವಾಡ ಮಾತ್ರವಲ್ಲದೆ ಇಂಡಿ ತಾಲೂಕಿನ ಬಬಲಾದ,…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಶ್ವಕರ್ಮ ಸಮಾಜದವರು ಶ್ರಮಜೀವಿಗಳು, ಇತರ ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ ಹೊಂದಿದವರಾಗಿದ್ದಾರೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಹೇಳಿದರು.ಅವರು ಪಟ್ಟಣದ ಕಾಳಿಕಾ ದೇವಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ವಿಶ್ವಕರ್ಮ ಸಮಾಜದವರು ಪ್ರತಿಯೊಂದು ಗ್ರಾಮದಲ್ಲಿರುವ ಎಲ್ಲ ಸಮಾಜದವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಅವರಿಗೆ ಅವಶ್ಯಕತೆ ಇರುವ ರೈತರಿಗೆ , ಗ್ರಾಮಸ್ಥರಿಗೆ ಪ್ರತಿಯೊಬ್ಬರಿಗೂ ಕೂಡ ಅವಶ್ಯಕವಿರುವ ಎಲ್ಲ ಸಲಕರಣೆಗಳನ್ನು ಮಾಡುವ ಮೂಲಕ ಇತರರಿಗೆ ಸಹಾಯಕ ಜೀವಿಯಾಗಿದ್ದಾರೆ ಎಂದರು.ಧರ್ಮಸಭೆಯ ಸಾನಿಧ್ಯವನ್ನು ಈರಯ್ಯ ಮಹಾಸ್ವಾಮಿಗಳು ಮೂರುಜಾವದಮಠ, ಮುಖ್ಯ ಅತಿಥಿಗಳಾಗಿಆಲಮೇಲ ತಹಸಿಲ್ದಾರ್ ಧನಪಾಲ ಶೆಟ್ಟಿ, ಪಿಎಸ್ಐ ಅರವಿಂದ್ ಅಂಗಡಿ, ಡಾ.ಪತ್ತಾರ, ವಿಶ್ವಕರ್ಮ ಸಮಾಜದ ಹಿರಿಯರಾದ ಲಚ್ಚಪ್ಪ ಪತ್ತಾರ್ ಈರಣ್ಣ ಪತ್ತಾರ, ಚಂದ್ರಕಾಂತ ಅಕ್ಕಲಕೋಟ, ಕಾಶಿನಾಥ್ ಬಡಿಗೇರ, ಈರಣ್ಣ ಪತ್ತಾರ, ಹಾಗೂ ವಿಶ್ವಕರ್ಮ ಸಮಾಜದ ಹಿರಿಯರು ಭಾಗವಹಿಸಿದ್ದರು.ಸಭೆಯಲ್ಲಿ ದಿವಂಗತ ಮೌನೇಶ ಆಚಾರ್ಯರ ಆಸೆಯಂತೆ ಕುಂಭಮೇಳಕ್ಕೆ ಹೋಗಿ ಬಂದ ಭಕ್ತಾದಿಗಳಿಗೆ ಸನ್ಮಾನಿಸಿ ಗೌರವಿಸಿ ಅವರ ಕನಸನ್ನು ನನಸುಗೊಳಿಸುವಲ್ಲಿ ಅವರ ಶ್ರೀಮತಿಯವರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ಕಣ್ಣಿನ ತಪಾಸಣೆ ಮಾಡಿ ದೃಷ್ಟಿ ದೋಷ ಇರುವ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸುವ ಕಾರ್ಯ ಶ್ಲಾಘನೀಯವಾದುದು ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.ತಾಲ್ಲೂಕಿನ ನಾಗಠಾಣ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ ಕಂಪನಿ ಬೆಂಗಳೂರು, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ತಾಲ್ಲೂಕಿನ ಸರಕಾರಿ, ಅನುದಾನಿತ ಶಾಲೆಗಳ ಒಟ್ಟು 56,000 ಸಾವಿರ ಮಕ್ಕಳಿಗೆ ಶಾಲೆಗೆ ಹೋಗಿ ಕಣ್ಣಿನ ತಪಾಸಣೆ ಮಾಡಿ ಅದರಲ್ಲಿ 1038 ಮಕ್ಕಳಿಗೆ ಉಚ್ಚ ಗುಣಮಟ್ಟದ ಕನ್ನಡಕಗಳನ್ನು ವಿತರಿಸುವದು. 768 ಮಕ್ಕಳಿಗೆ ಶಸ್ತ್ರ ಚಿಕಿತ್ಸೆಗಾಗಿ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇಲ್ಲಿಗೆ ಸಿಪಾರಸ್ಸು ಆಗಿದ್ದು, ಅದರಲ್ಲಿ ಈಗಾಗಲೆ 94 ಮಕ್ಕಳು ಉಚಿತ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಇನ್ನುಳಿದ ಮಕ್ಕಳ ಶಸ್ತ್ರ ಚಿಕಿತ್ಸೆ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಹೇಳಿದರು.ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಹದಿ ಹರೆಯದವರು ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ನಿರೀಕ್ಷಣಾಧಿಕಾರಿ ಲವ ಚವ್ಹಾಣ ಹೇಳಿದರು.ತಾಲ್ಲೂಕಿನ ಘೋಣಸಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಸ್ವಸ್ತ ನಾರಿ ಸ್ವಶಕ್ತ ಪರಿವಾರ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಭಿಯಾನದ ಅಂಗವಾಗಿ ಎಲ್ಲ ಗರ್ಭಿಣಿ ಮಹಿಳೆಯರಿಗೆ ಹೆರಿಗೆಯ ಸಮಯದಲ್ಲಿ ಆಗುವ ತೊಡಕುಗಳ ಬಗ್ಗೆ ಮತ್ತು ರಕ್ತ ಹೀನತೆ, ರಕ್ತದೊತ್ತಡ ಮಧುಮೇಹ ಕ್ಯಾನ್ಸರ್, ಹದಿಹರೆಯದವರು ಸ್ವ ಕಾಳಜಿ ವಹಿಸಬೇಕು. ಸಮಾಜದಲ್ಲಿ ಮಹಿಳೆಯರು ಆರೋಗ್ಯವಂತ ಮತ್ತು ಸಬಲ ಜೀವನ ನಡೆಸಲು ಸ್ವಚ್ಛತೆಯ ಬಗ್ಗೆ ಜಾಗೃತಿ ತುಂಬಾ ಅವಶ್ಯಕವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರಸವ ಪೂರ್ವ ಗರ್ಭಿಣಿ ಆರೈಕೆ ಮತ್ತು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಅಂಜನಾ ಪವಾರ, ಸಮುದಾಯ ಆರೋಗ್ಯ ಅಧಿಕಾರಿಜಮಾಲುದ್ದೀನ್ ಮುಲ್ಲಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮೀಣ ಭಾಗಗಳಲ್ಲಿ ನಡೆಯುವ ಪ್ರತಿಯೊಂದು ಕ್ರೀಢೆಗಳಿಗೆ ಸಾಂಪ್ರದಾಯಿಕ ಹಿನ್ನೆಲೆಯಿದ್ದು ಅದು ರೈತರ ಜನಜೀವನಕ್ಕೆ ಸ್ಪೂರ್ತಿಯಾಗಿದೆ ಎಂದು ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವಿದ್ಯಾಧರ ಸವದಿ ಹೇಳಿದರು.ಗ್ರಾಮದ ಆರಾದ್ಯದೇವತೆ ಶ್ರೀ ಎಲ್ಲಮ್ಮಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ದಾ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಭೂತಾಯಿಯನ್ನು ನಂಬಿರುವ ರೈತರು ಅದಕ್ಕೆ ಉಳುಮೆ ಮಾಡುವ ಎತ್ತುಗಳಿಗೆ ಬಸವಣ್ಣ ದೇವರೆಂದು ಪೂಜಿಸುತಿದ್ದು ಅವುಗಳ ಸಾಮರ್ಥ್ಯ ಮತ್ತು ಅವುಗಳನ್ನು ಮೇಯಿಸುವ ರೈತರ ಸಾಮರ್ಥ್ಯ ಪರೀಕ್ಷಿಸಲು ತೆರಬಂಡಿ, ಕುದುರೆ ಚಕ್ಕಡಿ ಬಂಡಿ ಓಡಿಸುವ ಸ್ಪರ್ದೆ ಸೇರಿದಂತೆ ಹಲವಾರು ಸ್ಪರ್ದೆಗಳನ್ನು ಹಮ್ಮಿಕೊಂಳ್ಳುವ ಸಾಂಪ್ರದಾಯಿಕ ಹಿನ್ನೆಲೆಯಿದ್ದು ಇಂದಿನ ಆಧುನಿಕ ಯುಗದಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಅವು ಜೀವಂತವಾಗಿರುವುದು ನಿದರ್ಶನ ಎಂದರು.ಸಮಾರಂಭದ ಸಾನಿಧ್ಯ ವಹಿಸಿದ ಶ್ರೀ ಜನಾರ್ಧನ ಮಹಾರಾಜರು ಪೂಜಾ ಕಾರ್ಯಕ್ರಮ ನೆರವೇರಿಸಿದರು.ಶ್ರೀ ಎಲ್ಲಮ್ಮದೇವಿ ಸೇವಾ ಸಮೀತಿಯ ಕಳ್ಳೆಪ್ಪ ನಡುವಿನಮನಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಂತೇಶ ಜಾಲಿಕಟ್ಟಿ, ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯಣ್ಣವರ,…

Read More