ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಹಶೀಲ್ದಾರ ಕಾರ್ಯಾಲಯದಲ್ಲಿ ಸಮುದಾಯದ ಪ್ರಮುಖರಿಂದ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮರ ಭಾವಚಿತ್ರಕ್ಕೆ ಸಮುದಾಯದವರು ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಶಿಕ್ಷಕ ಅರುಣ ಕೋರವಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ ಸುರೇಶ ಮ್ಯಾಗೇರಿ, ಸಿಬ್ಬಂದಿ ಚನ್ನಬಸು ಹೊಸಮನಿ, ಶ್ರೀಮಂತ ತಳವಾರ(ನಿವಾಳಖೇಡ) ಸಮುದಾಯದ ವಿಶ್ವನಾಥ ಮೂರುಝಾವದಮಠ(ಆಲಮೇಲ) ನಾಗಯ್ಯ ಮೂರುಝಾವದಮಠ, ತೇಜಣ್ಣ ಕಕ್ಕಳಮೇಲಿ, ಮಹೇಶ ದೊಡಮನಿ, ಗಂಗಾಧರ ಆಲಮೇಲ, ಸುರೇಶ ಬಡಿಗೇರ, ಪ್ರಶಾಂತ ದೊಡಮನಿ, ಕಾಶೀಪತಿ ಬಡಿಗೇರ, ಮಹಾರುದ್ರ ಕಕ್ಕಳಮೇಲಿ, ದೇವೀಂದ್ರ ಕಕ್ಕಳಮೇಲಿ, ಪ್ರಶಾಂತ ಬಡಿಗೇರ, ಕಾಶೀಪತಿ ಬಡಿಗೇರ ಇದ್ದರು.

