ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿಶ್ವಕರ್ಮ ಸಮಾಜದವರು ಶ್ರಮಜೀವಿಗಳು, ಇತರ ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ ಹೊಂದಿದವರಾಗಿದ್ದಾರೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಕಾಳಿಕಾ ದೇವಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿಶ್ವಕರ್ಮ ಸಮಾಜದವರು ಪ್ರತಿಯೊಂದು ಗ್ರಾಮದಲ್ಲಿರುವ ಎಲ್ಲ ಸಮಾಜದವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಅವರಿಗೆ ಅವಶ್ಯಕತೆ ಇರುವ ರೈತರಿಗೆ , ಗ್ರಾಮಸ್ಥರಿಗೆ ಪ್ರತಿಯೊಬ್ಬರಿಗೂ ಕೂಡ ಅವಶ್ಯಕವಿರುವ ಎಲ್ಲ ಸಲಕರಣೆಗಳನ್ನು ಮಾಡುವ ಮೂಲಕ ಇತರರಿಗೆ ಸಹಾಯಕ ಜೀವಿಯಾಗಿದ್ದಾರೆ ಎಂದರು.
ಧರ್ಮಸಭೆಯ ಸಾನಿಧ್ಯವನ್ನು ಈರಯ್ಯ ಮಹಾಸ್ವಾಮಿಗಳು ಮೂರುಜಾವದಮಠ, ಮುಖ್ಯ ಅತಿಥಿಗಳಾಗಿ
ಆಲಮೇಲ ತಹಸಿಲ್ದಾರ್ ಧನಪಾಲ ಶೆಟ್ಟಿ, ಪಿಎಸ್ಐ ಅರವಿಂದ್ ಅಂಗಡಿ, ಡಾ.ಪತ್ತಾರ, ವಿಶ್ವಕರ್ಮ ಸಮಾಜದ ಹಿರಿಯರಾದ ಲಚ್ಚಪ್ಪ ಪತ್ತಾರ್ ಈರಣ್ಣ ಪತ್ತಾರ, ಚಂದ್ರಕಾಂತ ಅಕ್ಕಲಕೋಟ, ಕಾಶಿನಾಥ್ ಬಡಿಗೇರ, ಈರಣ್ಣ ಪತ್ತಾರ, ಹಾಗೂ ವಿಶ್ವಕರ್ಮ ಸಮಾಜದ ಹಿರಿಯರು ಭಾಗವಹಿಸಿದ್ದರು.
ಸಭೆಯಲ್ಲಿ ದಿವಂಗತ ಮೌನೇಶ ಆಚಾರ್ಯರ ಆಸೆಯಂತೆ ಕುಂಭಮೇಳಕ್ಕೆ ಹೋಗಿ ಬಂದ ಭಕ್ತಾದಿಗಳಿಗೆ ಸನ್ಮಾನಿಸಿ ಗೌರವಿಸಿ ಅವರ ಕನಸನ್ನು ನನಸುಗೊಳಿಸುವಲ್ಲಿ ಅವರ ಶ್ರೀಮತಿಯವರು ಭಾಗಿಯಾಗಿದ್ದರು.
ಹಾಗೂ ವಿಶ್ವಕರ್ಮರ ಜಯಂತ್ಯೋತ್ಸವದ ಕಾರ್ಯಕ್ರಮಕ್ಕೆ ಆಲಮೇಲ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹಿರಿಯರು, ಯುವಕರು, ತಾಯಂದಿಯರು ಆಗಮಿಸಿದ್ದರು.
ಶಿಕ್ಷಕ ಅಶೋಕ್ ಬಡಿಗೇರ ಸ್ವಾಗತಿಸಿದರು,
ಪ್ರೊ. ಗಂಗಾಧರ ಪತ್ತಾರ ನಿರೂಪಿಸಿದರು,
ಮಲ್ಲಿಕಾರ್ಜುನ ಉಪ್ಪಿನ ಹಾಗೂ ಸಂಗಡಿಗರಿಂದ ಸಂಗೀತ ಸೇವೆ ಜರುಗಿತು. ಜಯಂತಿ ಉತ್ಸವ ಮತ್ತು ಧರ್ಮಸಭೆಗೆ ಆಗಮಿಸಿದ ವಿಶ್ವಕರ್ಮರ ಭಕ್ತಾದಿಗಳಿಗೆ ಅನ್ನಪ್ರಸಾದ ಬಹಳ ಅಚ್ಚುಕಟ್ಟಾಗಿ ಮಾಡಲಾಗಿತ್ತು.

