Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ನಿಯಂತ್ರಿಸಲು ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿರುವ ಬೀದಿನಾಯಿಗಳನ್ನು ಹಿಡಿದು ಆಶ್ರಯ ತಾಣಕ್ಕೆ ಸಾಗಿಸಲಾಗುತ್ತಿದ್ದು, ಬೀದಿನಾಯಿ ದತ್ತು ಪಡೆಯಲು ಅಥವಾ ಆಶ್ರಯ ತಾಣದಲ್ಲಿರುವ ನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವವರು ಮಹಾನಗರಪಾಲಿಕೆಯ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ ಬಸ್ ಹಾಗೂ ರೈಲು ನಿಲ್ದಾಣಗಳ ಆವರಣದಲ್ಲಿ ಬೀದಿ ನಾಯಿಗಳು ಕಂಡುಬಂದಲ್ಲಿ ಸಂಬಂಧಿಸಿದವರು ಮಹಾನಗರ ಪಾಲಿಕೆ ಕಚೇರಿಯ ಸಹಾಯವಾಣಿ ಸಂಖ್ಯೆ: ೦೮೩೫೨-೨೨೨೪೭೪ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಆಲಮೇಲದ ವಾಣಿಜ್ಯ ಮಳಿಗೆಗಳು ಗೌಪ್ಯವಾಗಿ ಹರಾಜು ಮಾಡಲು ಮುಂದು | ಪ.ಪಂ ಸದಸ್ಯ ಸಂಜೀವಕುಮಾರ ಎಂಟಮಾನ ಆರೋಪ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಬಸವೇಶ್ವರ ವೃತದಲ್ಲಿ ನಿರ್ಮಾಣಗೊಂಡ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳು ಗೌಪ್ಯವಾಗಿ ಹರಾಜು ಮಾಡಲು ಮುಂದಾಗಿರುವ ಮುಖ್ಯಾಧಿಕಾರಿ ಮತ್ತು ಅದ್ಯಕ್ಷರು ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದಾರೆ ಎಂದು 2ನೇ ವಾರ್ಡಿನ ಪ.ಪಂ. ಸದಸ್ಯ ಸಂಜೀವಕುಮಾರ ಎಂಟಮಾನ ಹೇಳಿದರು.ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದ ಅವರು, ಪಂಚಾಯತಿಯ ವಾಣಿಜ್ಯ ಮಳಿಗೆಳ ಹಾರು ಪ್ರಕ್ರಿಯೆ ಕಾನೂನು ರೀತಿ ಮೀಸಲಾತಿ ಆದಾರದ ಮೇಲೆ ನಡೆಯಬೇಕು. ಮತ್ತು ಮುಂಚಿತವಾಗಿ ಪ್ರಚಲಿತ ವಿವಿದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಹರಾಜು ಮಾಡಬೇಕು ಎಂದು ಈ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ, ಅದು ಯಾವುದು ಪರಿಗಣನೆ ಮಾಡದೆ ಗೌಫ್ಯವಾಗಿ ಹರಾಜು ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕೆಲ ವ್ಯಾಪರಸ್ಥರು ಪ.ಪಂ ಸಿ.ಓ ಹೆಸರಿನ ಮೇಲೆ ವಿವಿದ ಬ್ಯಾಂಕುಗಳಲ್ಲಿ ಡಿಡಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕಡಳೆ ಬೆಳೆಗೆ ನ್ಯಾನೋ ಯುರಿಯಾ ಮತ್ತು ನ್ಯಾನೋ ಡಿ ಎ ಪಿ ಯನ್ನು ಡ್ರೋಣ ಮೂಲಕ ತಾಲೂಕಿನ ಅಥರ್ಗಾ ರೈತ ಸುನೀಲ ಪಾಟೀಲ ಇವರ ಹೊಲದಲ್ಲಿ ಸಿಂಪಡಣೆ ಮಾಡಲಾಯಿತು.ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಡ್ರೋನಗಳನ್ನು ಹೆಚ್ಚಾಗಿ ಬೆಳೆಗಳಿಗೆ ಕೀಟನಾಶಕ ರಸ ಗೊಬ್ಬರ ಸಿಂಪಡಿಸಲು ಬಳಸಲಾಗುತ್ತಿದೆ. ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ ಎಂದರು.ರೈತರು ಹೊಸ ಹೊಸ ತಂತ್ರಜ್ಞಾನ ಬಳಸಿ ಲಾಭ ಪಡೆದುಕೊಳ್ಳಬೇಕು ಎಂದರು.ಕೃಷಿ ಅಧಿಕಾರಿ ಎನ್.ಎಂ.ಹಿಟ್ಟಿನಹಳ್ಳಿ, ಸಹಾಯಕ ಅಧಿಕಾರಿ ಮಂಜುನಾಥ ಘಂಟಿ, ಉಮೇಶ ಜೇರಟಗಿ, ಶ್ರೀಕಾಂತ ಭೋಸಗಿ, ರಾಕೇಶ ಗೌಡಗಾಂವಿ, ಸಚಿನ್ ಬಿರಾದಾರ, ಈಶ್ವರ ಜೇವೂರ ಮತ್ತಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದಲ್ಲಿ ಹರಿಯುವ ಭೀಮಾನದಿಗೆ ಬರಬೇಕಾದ ನೀರಿನ ಪಾಲು ಕೇಳುವಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ.ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಯ ಜೀವನಾಢಿಯಾಗಿರುವ ಭೀಮಾ ನದಿಯು ಬೇಸಿಗೆಯಲ್ಲಿ ನೀರಿಲ್ಲದೆ ಸಂಪೂರ್ಣ ಒಣಗಿ ಹೋದರೂ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಬರಬೇಕಾದ ನೀರಿನ ಪಾಲು ಕೇಳುವಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದ್ದರಿಂದ ಜನ ಜಾನುವಾರು ಕುಡಿಯುವ ನೀರಿನ ತೊಂದರೆಯಾಗುತ್ತಿದೆ.ಭೀಮಾ ನದಿ ಮಹಾರಾಷ್ಟ್ರದ ಭೀಮಾಶಂಕರಿಯಲ್ಲಿ ಹುಟ್ಟಿ ಒಟ್ಟು ೭೮೬ ಕಿ.ಮಿ ಹರಿಯುವ ಈ ನದಿ ಕರ್ನಾಟಕದಲ್ಲಿ ೨೮೯ ಕಿ.ಮಿ ಹರಿಯುತ್ತದೆ. ನದಿಯ ಎರಡು ದಡದಲ್ಲಿ ಒಟ್ಟು ೧೬೪ ಹಳ್ಳಿಗಳ ಲಕ್ಷಾಂತರ ಜನ ಮತ್ತು ಜಾನುವಾರು ಭೀಮಾ ನದಿಯ ನೀರನ್ನೇ ನಂಬಿಕೊಂಡು ಬದುಕುತ್ತಿದ್ದಾರೆ.ಬಚಾವತ ಆಯೋಗದ ತೀರ್ಪಿನ ಪ್ರಕಾರ ೧೯೭೬ ರಲ್ಲಿ ನೀಡಿದ ತೀರ್ಪಿನಂತೆ ಮಹಾರಾಷ್ಟ್ರ ೯೫ ಟಿ ಎಂ ಸಿ ಮತ್ತು ಕರ್ನಾಟಕ ೧೫ ಟಿ.ಎಂಸಿ ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.ಮಹಾರಾಷ್ಟ್ರ ಸರಕಾರ ಒಮ್ಮೆಯೂ ೧೫ ಟಿ.ಎಂ.ಸಿ…

Read More

ಇಂಗಳೇಶ್ವರ ವಿರಕ್ತಮಠದ ಲಿಂ. ಶ್ರೀ ಚನ್ನಬಸವ ಮಹಾಸ್ವಾಮಿಗಳ ಅಂತಿಮ ದರ್ಶನ ಪಡೆದ ಸಚಿವ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂಗಳೇಶ್ವರ ವಿರಕ್ತಮಠದ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದರೂ ಅವರು ನಿರ್ಮಿಸಿರುವ ವಚನಶಿಲಾ ಮಂಟಪ ಮತ್ತು ಹಾಕಿಕೊಟ್ಟಿರುವ ಮಾರ್ಗ ಸೂರ್ಯ ಚಂದ್ರ ಇರುವವರೆಗೂ ಚಿರಸ್ಥಾಯಿಯಾಗಿರಲಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಇಂದು ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಲಿಂ. ಶ್ರೀ ಚನ್ನಬಸವ ಮಹಾಸ್ವಾಮಿಗಳ ಅಂತಿಮ ದರ್ಶನ ಪಡೆದ ಅವರು ಭಕ್ತಿಪೂರ್ವಕ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ನುಡಿನಮನ ಸಲ್ಲಿಸಿದರು.ಶ್ರೀಗಳನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ಬಸವಣ್ಣನವರ ಜನ್ಮಭೂಮಿಯಲ್ಲಿ ಬಸವಾದಿ ಶರಣರ ಸಾಹಿತ್ಯ, ವಚನಗಳು ಹಾಗೂ ತತ್ವ ಸಿದ್ಧಾಂತಕ್ಕೆ ತಕ್ಕಂತೆ ಶ್ರೀಗಳು ನಡೆದುಕೊಂಡಿದ್ದಾರೆ. ಅಲ್ಲದೇ, ಅವರ ತತ್ವಗಳ ಪ್ರಸಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯಾರ ನೆರವನ್ನೂ ಪಡೆಯದೆ ಕಷ್ಟಪಟ್ಟು, ಶ್ರಮವಹಿಸಿ, ವಚನಶಿಲಾ ಮಂಟಪ ನಿರ್ಮಿಸಿದ್ದಾರೆ. ೧೨ನೇ ಶತಮಾನದಲ್ಲಿ ಅನುಭವ ಮಂಟಪದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಶಿಲಾ…

Read More

ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿಗೆ ಸರಕಾರದ ಕೃಷಿ ಇಲಾಖೆಯಿಂದ ಮೆಕ್ಕೆ ಜೋಳ ಖರೀದಿ ಕೇಂದ್ರ ಸ್ಥಾಪಿಸದೆ ಇರುವುದು ಚಡಚಣ ತಾಲೂಕಿನ ರೈತರಲ್ಲಿ ಅಸಮಾಧಾನ ಉಂಟಾಗಿದೆ.ಚಡಚಣ ತಾಲೂಕಿಗಿಲ್ಲ ಸರಕಾರದ ಸೌಲಭ್ಯ: ಮೊದಲೆ ಈ ವರ್ಷ ಅಕಾಲಿಕ ಹಸಿ ಮಳೆಗಾಲದಲ್ಲಿ ಮತ್ತು ಭೀಮಾನದಿಯ ಪ್ರವಾಹಕ್ಕೆ ರೈತರ ಹೊಲಗದ್ದೆಗಳು ಸಿಲುಕಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು ಎಲ್ಲ ಅಧಿಕಾರಿಗಳಿಗೆ ಗೊತ್ತಿದ್ದರೂ ಚಡಚಣ ತಾಲೂಕು ಇದೆ ಎಂಬುದನ್ನು ಮರೆತ ಜಿಲ್ಲಾಧಿಕಾರಿಗಳು ಹಾಗು ಕೃಷಿ ಜಂಟಿ ನಿರ್ದೇಶಕರು ಚಡಚಣ ತಾಲೂಕಿಗೆ ಮೆಕ್ಕೆ ಜೋಳ ಖರೀದಿ ಕೇಂದ್ರ ಸ್ಥಾಪಿಸದೆ ಇರುವ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.೨೦೨೫-೨೬ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಮೆಕ್ಕೆಜೋಳ ಖರೀದಿಸಲು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ ಹಾಗೂ ಸಿಂದಗಿ ತಾಲೂಕಿನ ತಾಲೂಕಾ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ.ನಿ (ಟಿಎಪಿಸಿಎಂಎಸ್) ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ…

Read More

ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಹೊಸ ತಾಲೂಕು ಘೋಷಿಸಿದರೂ, ಆಲಮೇಲ ಜನತೆಗೆ ಸರ್ಕಾರ ಹಾಗೂ ಇಲಾಖೆಗಳಿಂದ ದೊರೆಯುತ್ತಿರುವುದು ಮಾತ್ರ ಭರವಸೆಗಳು, ಸೌಲಭ್ಯಗಳು ಅಲ್ಲ. ವಿಶೇಷವಾಗಿ ರಸ್ತೆ ಸಾರಿಗೆ ವಿಚಾರದಲ್ಲಿ ಜನರು ಪ್ರತಿದಿನ ಅನುಭವಿಸುತ್ತಿರುವ ಕಷ್ಟವು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಆಡಳಿತದ ತೀವ್ರ ವೈಫಲ್ಯವನ್ನು ಬಯಲಿಗೆಳೆಯುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಆರೋಪಿಸಿದ್ದಾರೆ.ಶುಕ್ರವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಆಲಮೇಲದಲ್ಲಿ ಸಂಜೆ 7 ಗಂಟೆಯ ನಂತರ ಆಲಮೆಲ್ ರಸ್ತೆ ಮಾರ್ಗದಲ್ಲಿ ಬಸ್ ಸೌಲಭ್ಯವೇ ಇಲ್ಲದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯ, ಮಹಿಳೆಯರ ಸುರಕ್ಷತೆಗೆ ಧಕ್ಕೆ, ಉದ್ಯೋಗಿಗಳ ಸಂಚಾರಕ್ಕೆ ಅಡಚಣೆ, ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ದೊರೆಯದ ಸ್ಥಿತಿ ಎಂಬ ಗಂಭೀರ ಪರಿಸ್ಥಿತಿಯನ್ನು ಉಂಟುಮಾಡಿದೆ. ಇದು ಹೊಸ ತಾಲೂಕಿಗೆ ಬೇಕಾದ ಮೂಲಭೂತ ಸೌಕರ್ಯಗಳತ್ತ ಸರ್ಕಾರ ತೋರಿಸಿರುವ ಪರಮ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನ ವಾಗಿದೆ ಎಂದಿದ್ದಾರೆ.ಆಲಮೇಲಿನಿಂದ ಹತ್ತಿರದಲ್ಲಿರುವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ೨೦೨೫-೨೬ನೇ ಒಂದನೇ ಹಾಗೂ ಎರಡನೇ ತ್ರೈಮಾಸಿಕದ ಸಭೆಯು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಡಿ.೨೨ ರಂದು ಬೆಳಿಗ್ಗೆ ೧೦:೩೦ಕ್ಕೆ ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಬರಿಮಲೆಯು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿಯು (ಮಣಿಕಂಠ) ಕೋಟ್ಯಾನುಕೋಟಿ ಭಕ್ತರ ಆರಾಧ್ಯ ದೈವನಾಗಿದ್ದಾನೆ. ಅಲ್ಲಿ ಬೆಳಗುವ ಮಕರ ಜ್ಯೋತಿಯ ದರ್ಶನ ಭಾಗ್ಯದಿಂದ ಭಕ್ತರು ಪುನೀತರಾಗುತ್ತಾರೆ. ಅಯ್ಯಪ್ಪ ಸ್ವಾಮಿಯ ಭಕ್ತರು ೪೧ ದಿನಗಳವರೆಗೆ ಕಠಿಣ ವ್ರತಾಚರಣೆ ಮಾಡುತ್ತಾ, ಸ್ವಾಮಿಯ ನಾಮಸ್ಮರಣೆಯ ಮೂಲಕ ಭಕ್ತಿ-ಭಾವವನ್ನು ತೋರ್ಪಡಿಸುತ್ತಾರೆ ಎಂದು ವಿಜಯಪುರದ ಗುರುಸ್ವಾಮಿ ಅವರು ಅಭಿಪ್ರಾಯಪಟ್ಟರು.ನಗರದ ಅಥಣಿ ರಸ್ತೆಯ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ನವರಸಪುರದ ಏಕತಾ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಡಿ.೧೦ ರಂದು ರಂದು ಜರುಗಿದ ಶ್ರೀ ಅಯ್ಯಪ್ಪ ಸ್ವಾಮಿ ಮಹಪೂಜೆ ಕರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಮಣಿಕಂಠ (ಅಯ್ಯಪ್ಪ ಸ್ವಾಮಿ)ಯ ಅನುಗ್ರಹ ಪಡೆಯಲು ಮತ್ತು ಕರುಣಾಮೃತಕ್ಕೆ ಪಾತ್ರರಾಗಲು ಪವಿತ್ರವಾದ ೧೮ ಮೆಟ್ಟಿಲುಗಳನ್ನು ಹತ್ತಿ ಧನ್ಯತಾ ಭಾವ-ಭಕ್ತಿಯನ್ನು ಹೊಂದುತ್ತಾರೆ. ಪ್ರತಿಯೊಂದು ಮೆಟ್ಟಿಲು ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದ್ದು, ಮೊದಲ ಐದು ಮೆಟ್ಟಿಲುಗಳು ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಈ ಎಲ್ಲ ಪಂಚೇಂದ್ರಿಗಳು ಸದಾ ದೇವರ…

Read More