ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಸಿಮೆಂಟ ತುಂಬಿಕೊಂಡು ಹೊರಟ್ಟಿದ್ದ ಲಾರಿ, ಕಂಕರ ತುಂಬಿಕೊಂಡು ಹೊರಟಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನ ಕಾಲು ಕಟ್ ಆಗಿರುವ ಘಟನೆ ತಾಲೂಕಿನ ಗೊಬ್ಬೂರ ವಾಡಿ ಕ್ರಾಸ್ ಬಳಿ ನಡೆದಿದೆ.
ಅಪಘಾತದಲ್ಲಿ ಲಾರಿ ಚಾಲಕ ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಶರಣಬಸಪ್ಪ ಸಾಯಬಣ್ಣ ತಳವಾರ(೨೮) ಎಂಬಾತನ ಕಾಲು ಮುರಿದಿದ್ದು ಸ್ಥಳಕ್ಕೆ ದೇವಲ ಗಾಣಗಾಪೂರ ಠಾಣೆ ಪಿಎಸ್‌ಐ ಸಂಗೀತಾ ಸಿಂಧೆ ಹಾಗೂ ಸಿಬ್ಬಂದಿಗಳಾದ ಸಂಗಣ್ಣ ತಳವಾರ, ಹೈವೆ ಪೆಟ್ರೊಲಿಂಗ್ ಎಎಸ್‌ಐ ಹಣಮಂತ ಚವಾಣ, ಎಚ್‌ಸಿಪಿ ಅವ್ವಣ್ಣಗೌಡ, ೧೧೨ ಸಿಬ್ಬಂದಿ ಬೀರಣ್ಣ, ಸಂತೋಷ ಬಿರಾದಾರ ಬಂದು ಗಾಯಗೊಂಡು ನರಳುತ್ತಿದ್ದ ಚಾಲಕನನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

